ಸಾಮಾಜಿಕ ನ್ಯಾಯಕ್ಕಾಗಿ ಮತ್ತೆ ಜನಗಣತಿ: ಡಿಕೆಶಿ

KannadaprabhaNewsNetwork |  
Published : Jun 13, 2025, 04:36 AM ISTUpdated : Jun 13, 2025, 04:37 AM IST
ಡಿ.ಕೆ.ಶಿವಕುಮಾರ್‌ | Kannada Prabha

ಸಾರಾಂಶ

‘ನಮಗೆ ಸಾಮಾಜಿಕ ನ್ಯಾಯ ಬೇಕು. ಈ ಕಾರಣಕ್ಕೆ ನಾವು ಮತ್ತೊಮ್ಮೆ ಜಾತಿ ಜನಗಣತಿ ಮಾಡಲು ತೀರ್ಮಾನ ಮಾಡಿದ್ದೇವೆ. ಹೊಸ ಸಮೀಕ್ಷೆ ಬೇಡ ಎನ್ನುವುದಾದರೆ ಆರ್‌.ಅಶೋಕ್‌ ಹಾಗೂ ಬಿ.ವೈ.ವಿಜಯೇಂದ್ರ ಅವರು ಸುದ್ದಿಗೋಷ್ಠಿ ಮಾಡಿ ಹಳೆಯ ವರದಿಯನ್ನೇ ಅನುಷ್ಠಾನ ಮಾಡಲು ಒತ್ತಾಯಿಸಲಿ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸವಾಲು ಹಾಕಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

‘ನಮಗೆ ಸಾಮಾಜಿಕ ನ್ಯಾಯ ಬೇಕು. ಈ ಕಾರಣಕ್ಕೆ ನಾವು ಮತ್ತೊಮ್ಮೆ ಜಾತಿ ಜನಗಣತಿ ಮಾಡಲು ತೀರ್ಮಾನ ಮಾಡಿದ್ದೇವೆ. ಹೊಸ ಸಮೀಕ್ಷೆ ಬೇಡ ಎನ್ನುವುದಾದರೆ ಆರ್‌.ಅಶೋಕ್‌ ಹಾಗೂ ಬಿ.ವೈ.ವಿಜಯೇಂದ್ರ ಅವರು ಸುದ್ದಿಗೋಷ್ಠಿ ಮಾಡಿ ಹಳೆಯ ವರದಿಯನ್ನೇ ಅನುಷ್ಠಾನ ಮಾಡಲು ಒತ್ತಾಯಿಸಲಿ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸವಾಲು ಹಾಕಿದ್ದಾರೆ.

ಸಚಿವ ಸಂಪುಟ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, 168 ಕೋಟಿ ರು. ವೆಚ್ಚ ಮಾಡಿ ಸಮೀಕ್ಷೆ ನಡೆಸಿ ಇದೀಗ ಮತ್ತೆ ಹೊಸ ಸಮೀಕ್ಷೆ ನಡೆಸಲು ಮುಂದಾಗಿರುವ ಬಗ್ಗೆ ಬಿಜೆಪಿ ನಾಯಕರು ಮಾಡಿರುವ ಟೀಕೆಗಳಿಗೆ ತಿರುಗೇಟು ನೀಡಿದರು.

ಈ ಹಿಂದಿನ ವರದಿ ಬಗ್ಗೆ ಟೀಕೆ ಮಾಡಿದ್ದ ವಿರೋಧ ಪಕ್ಷದವರು ಈಗ ಉಲ್ಟಾ ಹೊಡೆಯುತ್ತಿದ್ದಾರೆ. ಅಷ್ಟು ಖರ್ಚು ಮಾಡಿ ವರದಿ ಸಿದ್ಧಮಾಡಿ ಈಗ ಹೊಸ ಸಮೀಕ್ಷೆ ಮಾಡುತ್ತಿದ್ದಾರೆ ಎಂದು ಟೀಕಿಸುತ್ತಿದ್ದಾರೆ. ಹೊಸ ಸಮೀಕ್ಷೆ ಬೇಡ ಎನ್ನುವುದಾದರೆ ಹಳೆಯ ವರದಿಯನ್ನೇ ಜಾರಿಗೊಳಿಸಲು ಒತ್ತಾಯಿಸಲಿ ಎಂದು ಹೇಳಿದರು.

ಜಾತಿಗಣತಿ ವರದಿ ಬಗ್ಗೆ ಯಾರು ಏನು ಬೇಕಾದರೂ ಹೇಳಲಿ. ಜನರು, ಶಾಸಕರು ಹಾಗೂ ಮಂತ್ರಿಗಳ ಭಾವನೆಗಳನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ. ಕಾನೂನಿನಲ್ಲಿ ಏನು ಮಾಡಬೇಕೋ ಎಲ್ಲಾ ಮಾಡಿದ್ದೇವೆ. ನಾಳೆ ಬೆಳಗ್ಗೆ ಯಾರಾದರೂ ಕೋರ್ಟ್‌ಗೆ ಹೋದರೂ ಸಮಸ್ಯೆ ಆಗಬಾರದು. ಹೀಗಾಗಿ ಹೊಸ ಸಮೀಕ್ಷೆಗೆ ನಿರ್ಧರಿಸಿದ್ದೇವೆ ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಒಮ್ಮತ ಮೂಡಿರಲಿಲ್ಲ:

ಹೈಕಮಾಂಡ್‌ ನಿರ್ದೇಶನದಿಂದ ತೆಗೆದುಕೊಂಡ ನಿರ್ಧಾರವೇ ಎಂಬ ಪ್ರಶ್ನೆಗೆ, ರಾಜ್ಯದಲ್ಲಿ ಮಾಡಿದ ಹಳೇ ಜಾತಿಗಣತಿಗೆ ಈಗಾಗಲೇ 10 ವರ್ಷ ಆಗಿದೆ. ಮೂರ್ನಾಲ್ಕು ತಿಂಗಳಿಂದ ಐದಾರು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ. ಅಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಹೈಕಮಾಂಡ್‌ನವರು ನಮ್ಮನ್ನು ಕರೆಸಿ ಕೆಲ ಮಾರ್ಗದರ್ಶನಗಳನ್ನು ಕೊಟ್ಟಿದ್ದಾರೆ. ಎಲ್ಲರೂ ಸೇರಿ ಅಭಿಪ್ರಾಯ ನೀಡಿದ್ದಾರೆ. ಇದರ ಜೊತೆಗೆ ವಿರೋಧ ಪಕ್ಷದವರು ಜಾತಿ ಗಣತಿ ವರದಿ ಜಾರಿಗೆ ಬಹಳ ಒತ್ತಾಯ ಮಾಡುತ್ತಿದ್ದರು. ಈಗ ಏನೇನು ಮಾತನಾಡಿದ್ದಾರೆ ನೋಡಿ ಎಂದರು.ಮಾಧ್ಯಮದವರು ನನ್ನನ್ನು

ರೇಪ್‌ ಒಂದು ಮಾಡಿಲ್ಲ: ಡಿಕೆಶಿ

ಜಾತಿ ಗಣತಿ, ಕಪ್‌ ತುಳಿತ ಪ್ರಶ್ನೆಗಳಿಗೆ ಉತ್ತರಿಸುವಾಗ ಡಿ.ಕೆ.ಶಿವಕುಮಾರ್‌ ಅವರು, ‘ನೀವು ಮಾಧ್ಯಮದವರೆಲ್ಲ ಸೇರಿ ನನ್ನನ್ನ ರೇಪ್ ಒಂದು ಮಾಡಿಲ್ಲ. ಏನೇನು ಮಾಡಬೇಕೋ ಎಲ್ಲಾ ಮಾಡಿದ್ದೀರಿ, ಸುಳ್ಳು ಪಳ್ಳು ಹೇಳಿ ವಿಲನ್ ಮಾಡಿದ್ದೀರಿ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ