ಕೋವಿಡ್‌, ಸರ್ಕಾರದ ನಿರ್ಲಕ್ಷ್ಯದಿಂದ ನಡೆಯದ ಜನಗಣತಿ

KannadaprabhaNewsNetwork |  
Published : Nov 04, 2025, 12:30 AM IST
3ಡಿಡಬ್ಲೂಡಿ5ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿರುವ ಸಮಾರಂಭದಲ್ಲಿ ಧರೆಗೆ ದೊಡ್ಡವರು ಗೌರವ ಸನ್ಮಾನ ಸ್ವೀಕರಿಸಿದ ಭಾಷಾ ತಜ್ಞ ಡಾ. ಗಣೇಶ ದೇವಿ. | Kannada Prabha

ಸಾರಾಂಶ

ಪ್ರಸ್ತುತ ಭಾರತೀಯರ ಜನಸಂಖ್ಯೆ 146ರಿಂದ 150 ಕೋಟಿ ಎಂದು ಹೇಳಲಾಗುತ್ತಿದೆ. 2011ರಲ್ಲಿ ಕೊನೆಯ ಜನಗಣತಿಯಾಗಿದ್ದು, 2021ರಲ್ಲಿ ಆಗಬೇಕಿತ್ತು. ಇದು ಸರ್ಕಾರದ ಜವಾಬ್ದಾರಿ ಕೂಡಾ. ಇಡೀ ಜಗತ್ತಿನ ಜನಸಂಖ್ಯೆ 800 ಕೋಟಿಯಾಗಿದ್ದು, ಈ ಪೈಕಿ ಭಾರತದಲ್ಲಿ 150 ಕೋಟಿ ವರೆಗೂ ಇದ್ದಾರೆ ಎನ್ನಲಾಗುತ್ತಿದೆ.

ಧಾರವಾಡ:

ಕೋವಿಡ್‌ ಕಾರಣದಿಂದ ವಿಳಂಬವಾದ ದೇಶದ ಜನಗಣತಿ ಸರ್ಕಾರದ ನಿರ್ಲಕ್ಷ್ಯದಿಂದ ಇನ್ನೂ ನಡೆದಿಲ್ಲ. ಕೇಂದ್ರ ಸರ್ಕಾರ 2027ರಲ್ಲಿ ಜನಗಣತಿ ಮಾಡಲಿದೆ ಎಂದು ಭರವಸೆ ನೀಡಿದ್ದು, ಅಲ್ಲಿಯ ವರೆಗೂ ಭಾರತೀಯರು ಸಂಭಾವ್ಯ ಜನಸಂಖ್ಯೆಯನ್ನೇ ನಂಬಬೇಕಾದ ಸ್ಥಿತಿ ಇದೆ ಎಂದು ಖ್ಯಾತ ಭಾಷಾತಜ್ಞ ಡಾ.ಗಣೇಶ ಎನ್‌. ದೇವಿ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘವು ರಾಜ್ಯೋತ್ಸವ ಹಿನ್ನೆಲೆಯಲ್ಲಿ ಆಯೋಜಿಸಿರುವ ಧರೆಗೆ ದೊಡ್ಡವರು ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದ ಅವರು, ಪ್ರಸ್ತುತ ಭಾರತೀಯರ ಜನಸಂಖ್ಯೆ 146ರಿಂದ 150 ಕೋಟಿ ಎಂದು ಹೇಳಲಾಗುತ್ತಿದೆ. 2011ರಲ್ಲಿ ಕೊನೆಯ ಜನಗಣತಿಯಾಗಿದ್ದು, 2021ರಲ್ಲಿ ಆಗಬೇಕಿತ್ತು. ಇದು ಸರ್ಕಾರದ ಜವಾಬ್ದಾರಿ ಕೂಡಾ. ಇಡೀ ಜಗತ್ತಿನ ಜನಸಂಖ್ಯೆ 800 ಕೋಟಿಯಾಗಿದ್ದು, ಈ ಪೈಕಿ ಭಾರತದಲ್ಲಿ 150 ಕೋಟಿ ವರೆಗೂ ಇದ್ದಾರೆ ಎನ್ನಲಾಗುತ್ತಿದೆ. ಜಗತ್ತಿನೊಳಗೆ ಭಾರತ ಮಾತ್ರ 2011ರ ನಂತರ ಜನಗಣತಿ ಮಾಡಿಲ್ಲ ಎಂಬುದು ಬೇಸರದ ಸಂಗತಿ ಎಂದರು.

ಕೋವಿಡ್‌ ಕಾರಣದಿಂದ ಜನಗಣತಿಯು ವಿಳಂಬವಾದರೂ 2023ರಲ್ಲಿ ನಡೆಯಬೇಕಿತ್ತು. ಈಗ ಕೇಂದ್ರ ಸರ್ಕಾರ 2027ಕ್ಕೆ ಜನಗಣತಿ ಮಾಡಲಿದೆ ಎಂದು ಹೇಳುತ್ತಿದ್ದು, ಭಾರತೀಯರಾದ ನಾವು ಎಷ್ಟು ಜನರಿದ್ದೇವೆ? ಎಂಬುದಕ್ಕೆ ಸ್ಪಷ್ಟ ಉತ್ತರವೇ ಇಲ್ಲದಾಗಿದೆ ಎಂದರು.

ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರತಿಯೊಬ್ಬರಿಗೆ ಸಂವಿಧಾನವು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ನೀಡಿದೆ. ಜಗತ್ತಿನ ಎಲ್ಲ ದೇಶಗಳಲ್ಲಿ ಪಟ್ಟಿ ಮಾಡಿದಾಗ 33 ರಾಷ್ಟ್ರಗಳ ಪೈಕಿ ಭಾರತವು ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ 24ನೇ ಸ್ಥಾನದಲ್ಲಿದೆ. ಪ್ರತಿ ವರ್ಷ ಅಭಿವ್ಯಕ್ತಿ ಸ್ವಾತಂತ್ರ್ಯ ಯಾವ ಪ್ರಮಾಣದಲ್ಲಿದೆ ಎಂಬುದನ್ನು ಸ್ವತಂತ್ರ ಸಂಘ-ಸಂಸ್ಥೆಗಳು ಅಧ್ಯಯನ ಮಾಡಿ ಪ್ರಕಟಿಸಿದ್ದು, ಪ್ರಜಾಪ್ರಭುತ್ವದ ಆರೋಗ್ಯ ಕ್ಷೀಣಗೊಂಡಾಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಯಾ ದೇಶದ ಸ್ಥಾನಮಾನ ಮತ್ತಷ್ಟು ಕೆಳಗೆ ಇಳಿಯುತ್ತದೆ. ಇದಕ್ಕೆ ಭಾರತ ಹೊರತಾಗಿಲ್ಲ ಎಂದು ಹೇಳಿದರು.ಭಾರತವು ಪ್ರಪಂಚದ 168 ದೇಶಗಳ ಪೈಕಿ ಸಾಮಾಜಿಕ ಸಾಮರಸ್ಯ, ಸೌಹಾರ್ದತೆಯಲ್ಲಿ 120ಕ್ಕಿಂತಲೂ ಹಿಂದಿರುವುದು ಸಹ ಬೇಸದ ಸಂಗತಿ ಎಂದರು,

ಶಶಿಧರ ತೋಡಕರ, ಗಣೇಶ ದೇವಿ ಪರಿಚಯ ಮಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಸ್ವಾಗತಿಸಿದರು. ಶಂಕರ ಕುಂಬಿ ಸೇರಿದಂತೆ ಸಂಘದ ಪದಾಧಿಕಾರಿಗಳಿದ್ದರು. ಸಂಘದ ಪರವಾಗಿ ಡಾ. ದೇವಿ ದಂಪತಿ ಗೌರವಿಸಲಾಯಿತು. ಕಿಟಲ್‌ ಕಲಾ ಕಾಲೇಜು ವಿದ್ಯಾರ್ಥಿಗಳಿದ್ದರು.

PREV

Recommended Stories

ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ