20ರಿಂದ ಕೇಂದ್ರ ಕಾಫಿ ಸಂಶೋಧನಾ ಸಂಸ್ಥೆ ಶತಮಾನೋತ್ಸವ

KannadaprabhaNewsNetwork |  
Published : Dec 12, 2025, 02:00 AM IST
ಚಿಕ್ಕಮಗಳೂರಿನ ಕಾಫಿ ಮಂಡಳಿಯ ಮ್ಯೂಸಿಯಂನ ಸಭಾಂಗಣದಲ್ಲಿ ಮಂಗಳವಾರ ನಡೆದ ಸುದ್ಧಿಗೋಷ್ಠಿಯಲ್ಲಿ ಕಾಫಿ ಮಂಡಳಿ ಅಧ್ಯಕ್ಷ ದಿನೇಶ್‌ ದೇವವೃಂದ ಅವರು ಮಾತನಾಡಿದರು. ಕಾಫಿ ಮಂಡಳಿ ಸಿಇಒ ಕೂರ್ಮ ರಾವ್, ಕಾಫಿ ಸಂಶೋಧನ ಕೇಂದ್ರದ ನಿರ್ದೇಶಕ ಸೆಂಥಿಲ್ ಉಪಸ್ಥಿತರಿದ್ದರು. | Kannada Prabha

ಸಾರಾಂಶ

ಚಿಕ್ಕಮಗಳೂರುದೇಶದ ಏಕೈಕ ಕೇಂದ್ರ ಕಾಫಿ ಸಂಶೋಧನಾ ಸಂಸ್ಥೆ ಇದೀಗ ಶತಮಾನೋತ್ಸವದ ಹೊಸ್ತಿಲಿನಲ್ಲಿದೆ. 1925 ರಲ್ಲಿ ಬಾಳೆ ಹೊನ್ನೂರು ಸಮೀಪದ ಸೀಗೋಡಿನಲ್ಲಿ ಆರಂಭಗೊಂಡಿರುವ ಸಂಸ್ಥೆ ನೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಡಿ. 20 ರಿಂದ 22 ರವರೆಗೆ ಶತಮಾನೋತ್ಸವ ಕಾರ್ಯಕ್ರಮವನ್ನು ಸಂಸ್ಥೆ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ ಹೇಳಿದರು.

- ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ ಮಾಹಿತಿ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುದೇಶದ ಏಕೈಕ ಕೇಂದ್ರ ಕಾಫಿ ಸಂಶೋಧನಾ ಸಂಸ್ಥೆ ಇದೀಗ ಶತಮಾನೋತ್ಸವದ ಹೊಸ್ತಿಲಿನಲ್ಲಿದೆ. 1925 ರಲ್ಲಿ ಬಾಳೆ ಹೊನ್ನೂರು ಸಮೀಪದ ಸೀಗೋಡಿನಲ್ಲಿ ಆರಂಭಗೊಂಡಿರುವ ಸಂಸ್ಥೆ ನೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಡಿ. 20 ರಿಂದ 22 ರವರೆಗೆ ಶತಮಾನೋತ್ಸವ ಕಾರ್ಯಕ್ರಮವನ್ನು ಸಂಸ್ಥೆ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ ಹೇಳಿದರು.

ನಗರದ ಕಾಫಿ ಮಂಡಳಿ ಮ್ಯೂಸಿಯಂನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 7 ಲಕ್ಷ ಟನ್‌ಗಳ ಅದ್ಭುತ ಭವಿಷ್ಯಕ್ಕೆ 7 ಚಿನ್ನದ ಬೀಜಗಳು ಎಂಬ ಧ್ಯೇಯದೊಂದಿಗೆ ಶತಮಾನೋತ್ಸವ ನಡೆಸಲಾಗುತ್ತಿದೆ ಎಂದು ಹೇಳಿದರು.ಪ್ರಸ್ತುತ ಭಾರತದಲ್ಲಿ 3.67 ಲಕ್ಷ ಟನ್ ಕಾಫಿ ಉತ್ಪಾದನೆಯಾಗುತ್ತಿದೆ. ಆದರೆ, ನಮ್ಮ ಗುರಿ ವಾರ್ಷಿಕ ಭಾರತದಲ್ಲಿ ಕನಿಷ್ಠ 7 ಲಕ್ಷ ಟನ್ ಕಾಫಿ ಉತ್ಪಾದನೆ ಮಾಡಬೇಕು ಎಂಬುದು. ಈ ಹಿನ್ನೆಲೆಯಲ್ಲಿ 7 ಲಕ್ಷ ಟನ್‌ಗಳ ಅದ್ಭುತ ಭವಿಷ್ಯಕ್ಕೆ 7 ಚಿನ್ನದ ಬೀಜ ಗಳು ಎಂಬ ಧ್ಯೇಯ ಅಳವಡಿಸಲಾಗಿದೆ. ಶತಮಾನೋತ್ಸವದಲ್ಲೂ ಇದೇ ವಿಷಯವಾಗಿ ವಿವಿಧ ಗೋಷ್ಠಿಯಗಳಲ್ಲಿ ಚರ್ಚೆ ನಡೆಯಲಿದೆ ಎಂದು ವಿವರಿಸಿದರು.ಸಿಸಿಆರ್‌ಐ ಶತಮಾನೋತ್ಸವ ವೇಳೆ 2 ಪ್ರಮುಖ ಕಾಫಿ ತಳಿಗಳನ್ನು ಪರಿಚಯಿಸಲಾಗುತ್ತದೆ. ಎರಡೂ ಅರೇಬಿಕಾ ತಳಿ ಗಳಾಗಿದ್ದು, ಇದರಲ್ಲಿ ಒಂದು ಬೋರರ್ ನಿರೋಧಕವಾಗಿದೆ. ಇದಲ್ಲದೆ ಕಾಫಿ ಇಳುವರಿ ಹೆಚ್ಚಿಸುವ ಕುರಿತು ಸಂಶೋಧನೆ ನಡೆದಿವೆ. ಈ ಬಗ್ಗೆ ಶತಮಾನೋತ್ಸವದಲ್ಲಿ ಚರ್ಚೆ ನಡೆಯಲಿದೆ ಎಂದು ಮಾಹಿತಿ ನೀಡಿದರು.ಬಾಳೆಹೊನ್ನೂರು ಸಮೀಪದ ಕೇಂದ್ರ ಕಾಫಿ ಸಂಶೋಧನಾ ಸಂಸ್ಥೆಯಲ್ಲಿ ನಡೆಯಲಿರುವ ಶತಮಾನೋತ್ಸವದಲ್ಲಿ ಕನಿಷ್ಠ 50 ಸಾವಿರ ಜನ ಭಾಗವಹಿಸುವ ನಿರೀಕ್ಷೆಯಿದೆ. ಕರ್ನಾಟಕ ಮಾತ್ರವಲ್ಲದೆ ಆಂಧ್ರ, ಕೇರಳ, ತಮಿಳುನಾಡು ಸೇರಿದಂತೆ ಕಾಫಿ ಬೆಳೆಯುವ ಪ್ರದೇಶಗಳ ಬೆಳೆಗಾರರು ಭಾಗವಹಿಸಲಿದ್ದಾರೆ. ಹಲವು ಗೋಷ್ಠಿಗಳು ನಡೆಯಲಿದ್ದು, ಸ್ಥಳಾವಕಾಶದ ಕೊರತೆ ಹಿನ್ನೆಲೆಯಲ್ಲಿ ನಿಗದಿತ ಸಂಖ್ಯೆ ಬೆಳೆಗಾರರಷ್ಟೇ ಗೋಷ್ಠಿಯಲ್ಲಿ ಭಾಗಿಯಾಗಲಿದ್ದಾರೆ. ಉಳಿದಂತೆ ಶತಮಾನೋತ್ಸವದಲ್ಲಿ ಕನಿಷ್ಠ 50 ಸಾವಿರ ಜನ ಭಾಗವಹಿಸುವ ನಿರೀಕ್ಷೆಯಿದೆ. ಕಾಫಿ ಬೆಳೆ ಗಾರರು ತಮ್ಮ ಕುಟುಂಬದೊಂದಿಗೆ ಆಗಮಿಸಿದಲ್ಲಿ ಕಾರ್ಯಕ್ರಮ ಇನ್ನಷ್ಟು ಯಶಸ್ವಿಯಾಗಲಿದೆ ಎಂದರು.ಕಾಫಿ ಮಂಡಳಿ ಸಿಇಒ ಕೂರ್ಮ ರಾವ್ ಮಾತನಾಡಿ, ಲ್ಯಾಬ್‌ನಿಂದ ಲ್ಯಾಂಡ್‌ವರೆಗೆ ಕಾಫಿ ಸಂಶೋಧನಾ ಕೇಂದ್ರದ ಕೆಲಸ ಹೇಗೆ ನಡೆದಿದೆ. ಲ್ಯಾಂಡ್‌ನಿಂದ ಕಪ್‌ವರೆಗೆ ಕಾಫಿ ಹೇಗೆ ತಲುಪುತ್ತದೆ ಎಂಬುದನ್ನು ಈ ಶತಮಾನೋತ್ಸವದಲ್ಲಿ ಸಾರ್ವಜ ನಿಕರಿಗೆ ತಲುಪಿಸುವ ಕೆಲಸ ಮಾಡಲಿದ್ದೇವೆ ಎಂದರು.

ಈವರೆಗೆ ಕಾಫಿ ಸಂಶೋಧನಾ ಕೇಂದ್ರ 16 ತಳಿಗಳನ್ನು ಅಭಿವೃದ್ಧಿಪಡಿಸಿದೆ. ಅದರಲ್ಲಿ 13 ಅರೇಬಿಕಾ ಆಗಿದ್ದರೆ, ಇನ್ನು ಮೂರು ರೊಬೋಸ್ಟಾ ಆಗಿವೆ. ಅರೆಬಿಕಾದಲ್ಲಿ ಈಗಾಗಲೇ ಚಂದ್ರಗಿರಿ ಎಲ್ಲರ ಮನೆ ಮಾತಾಗಿದೆ. ಆದರೆ, ಶತಮಾನೋತ್ಸವ ಸಂದರ್ಭ ದಲ್ಲಿ ಚಂದ್ರಗಿರಿಗಿಂತಲೂ ಶೇ.10 ರಷ್ಟು ಹೆಚ್ಚು ಇಳುವರಿ ನೀಡುವ ತಳಿ ಪರಿಚಯಿಸಲಿದ್ದೇವೆ. ಶತಮಾನೋತ್ಸವದಲ್ಲಿ ಕನಿಷ್ಠ 40 ಸ್ಟಾಲ್ ತೆರೆಯುತ್ತಿದೆ. ಇಲ್ಲಿ ಕಾಫಿಗೆ ಸಂಬಂಧಿಸಿದ ಪ್ರತಿಯೊಂದು ಮಾಹಿತಿ ನೀಡುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಕಾಫಿ ಸಂಶೋಧನ ಕೇಂದ್ರದ ನಿರ್ದೇಶಕ ಸೆಂಥಿಲ್ ಉಪಸ್ಥಿತರಿದ್ದರು.

9 ಕೆಸಿಕೆಎಂ 2ಚಿಕ್ಕಮಗಳೂರಿನ ಕಾಫಿ ಮಂಡಳಿ ಮ್ಯೂಸಿಯಂನಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಕಾಫಿ ಮಂಡಳಿ ಅಧ್ಯಕ್ಷ ದಿನೇಶ್‌ ದೇವವೃಂದ ಮಾತನಾಡಿದರು. ಕಾಫಿ ಮಂಡಳಿ ಸಿಇಒ ಕೂರ್ಮ ರಾವ್, ಕಾಫಿ ಸಂಶೋಧನ ಕೇಂದ್ರದ ನಿರ್ದೇಶಕ ಸೆಂಥಿಲ್ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ