ಶಿವಮೊಗ್ಗ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ
ಅಡಕೆ ಬೆಳೆಗಾರರ ಹಿತ ಕಾಯಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಶಿವಮೊಗ್ಗ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.ಅಡಕೆ ಬೆಳೆಗಾರರು ಸಮಸ್ಯೆಗಳಿಗೆ ಕೇಂದ್ರ ಸರ್ಕಾರ ನಿರಂತರವಾಗಿ ಸ್ಪಂದಿಸುವ ಕೆಲಸ ಮಾಡುತ್ತಿದ್ದು, ಕೇಂದ್ರದ ಕೃಷಿ ಶಿವರಾಜ್ ಸಿಂಗ್ ಚೌಹಾಣ್ ಸಾಗರಕ್ಕೆ ಬಂದಾಗ ಎಲೆಚುಕ್ಕಿ ರೋಗಕ್ಕೆ ಹಣ ಬಿಡುಗಡೆ ಮಾಡಿದ್ದಾರೆ ಎಂದು ರಂಭಾಪುರಿ ಪೀಠದಲ್ಲಿ ಸುದ್ದಿಗಾರರಿಗೆ ತಿಳಿಸಿದರು. ತಾಂತ್ರಿಕ ಸಮಸ್ಯೆಗಳಿಂದ, ಇಲ್ಲಿ ಅಡಕೆ ಎಲೆಚುಕ್ಕಿ ರೋಗಕ್ಕೆ ಪರಿಹಾರ ವಿತರಣೆ ವಿಳಂಬವಾಗುತ್ತಿದೆ. ಒಟ್ಟು ₹32 ಕೋಟಿ ಅನುದಾನ ಬಿಡುಗಡೆಯಾಗಿದೆ. ಅಡಕೆ ಬೆಳೆಗಾರರು ಉಪಯೋಗಿಸುವ ಫೈಬರ್ ದೋಟಿಗೆ ಈ ಮೊದಲು ಕೇವಲ ₹4 ಸಾವಿರ ಸಬ್ಸಿಡಿ ನೀಡಲಾಗುತ್ತಿತ್ತು. ಆದರೆ ಇದೀಗ ಒಂದು ದೋಟಿಗೆ ಪರಿಶಿಷ್ಟ ಜಾತಿ, ಪಂಗಡದವರಿಗೆ ₹42 ಸಾವಿರ, ಇತರೆ ಜನಾಂಗದವರಿಗೆ ₹30 ಸಾವಿರ ಸಬ್ಸಿಡಿ ಘೋಷಣೆ ಮಾಡಲಾಗಿದೆ. ಇದು ಪ್ರಧಾನಿ ನರೇಂದ್ರ ಮೋದಿ ಸರ್ಕಾರದಿಂದ ಸಾಧ್ಯವಾಗಿದೆ.ದೋಟಿ ಸಬ್ಸಿಡಿಗೆ ಕೇಂದ್ರ ಸರ್ಕಾರದಿಂದ ಕ್ಲಿಯರೆನ್ಸ್ ಸಿಕ್ಕಿದ್ದು, ಸಿದ್ದರಾಮಯ್ಯನವರು ಮಂಡಿಸುವ ಬಜೆಟ್ ಬಳಿಕ ಇದು ಫಲಾನುಭವಿಗಳಿಗೆ ದೊರೆಯಲಿದೆ. ಕಾಳು ಮೆಣಸು ಪ್ರತೀ ಕೆಜಿ ₹500ಕ್ಕಿಂತ ಕಡಿಮೆಯಾಗದ ರೀತಿಯಲ್ಲಿ ನಮ್ಮ ಕೇಂದ್ರದ ವಾಣಿಜ್ಯ ಇಲಾಖೆ ನೋಡಿಕೊಳ್ಳುತ್ತ ಬಂದಿದೆ. ದಕ್ಷಿಣ ಭಾರತದಲ್ಲಿ ಅಡಕೆಗೆ ಉತ್ತಮ ಧಾರಣೆ ಇರುವಂತೆ ಕಾಪಾಡಿಕೊಂಡಿದ್ದು, ಅದರ ಪರಿಣಾಮ ಇಂದು ಅಡಕೆಗೆ ಕ್ವಿಂಟಲ್‌ಗೆ ₹55-60 ಸಾವಿರ ಧಾರಣೆ ಇದೆ. ಇದಕ್ಕೆ ನರೇಂದ್ರ ಮೋದಿ ಸರ್ಕಾರದಿಂದ ಕಾರಣವಾಗಿದೆ. ಕಳ್ಳ ಮಾರ್ಗದಲ್ಲಿ ಬರುವ ಅಡಕೆ ತಡೆಯುವ ಪ್ರಯತ್ನ, ಆಮದಾಗುವ ಸುಂಕ ಹೆಚ್ಚಿಗೆ ಮಾಡಲಾಗಿದೆ ಎಂದರು.ಕಾಡು ಪ್ರಾಣಿಗಳ ಹಾವಳಿ ಮಲೆನಾಡು ಭಾಗದಲ್ಲಿ ಮಿತಿ ಮೀರಿದ್ದು, ಇದರ ತಡೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಗ್ಗೂಡಿ ಜಂಟಿಯಾಗಿ ಯೋಜನೆ ಜಾರಿಗೆ ತರಬೇಕಿದೆ ಎಂದರು. ರಾಜ್ಯದಲ್ಲಿ ದ್ವೇಷದ ರಾಜಕಾರಣ ನಡೆಯುತ್ತಿದ್ದು, ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ದ್ವೇಷದ ರಾಜಕಾರಣ ನಡೆದು, ಅನೇಕ ಹಿಂದೂಗಳ ಕಗ್ಗೊಲೆಯಾಗಿದೆ. ಅಧಿಕಾರಿಗಳು ಗೌರವಯುತವಾಗಿ ಕೆಲಸ ಮಾಡುವ ವಾತಾವರಣವಿಲ್ಲ. ಮರಳು ದಂಧೆ ಮಾಡುವ ಪುಡಾರಿಗಳಿಗೆ ಬಿಗಿ ನಿಲುವು ತೆಗೆದುಕೊಂಡ ಅಧಿಕಾರಿಗಳನ್ನೇ ಕೆಲಸದಿಂದ ಅಮಾನತು ಮಾಡಲಾಗುತ್ತಿದೆ. ದಕ್ಷ ವಾಗಿ ಕಾರ್ಯನಿರ್ವಹಿಸಿದ ಪೊಲೀಸರನ್ನು ಕೆಲಸದಿಂದ ಅಮಾನತು ಮಾಡಲಾಗಿದೆ. ಒಟ್ಟಾರೆ ರಾಜ್ಯ ಸರ್ಕಾರ ಬಿಗಿ ನಿಲುವು ತೆಗೆದುಕೊಳ್ಳುತ್ತಿಲ್ಲ ಎಂದರು.೦೩ಬಿಹೆಚ್‌ಆರ್ ೧: ಬಿ.ವೈ.ರಾಘವೇಂದ್ರ.