ಹುಬ್ಬಳ್ಳಿ: ಬೆಂಗಳೂರು ಮೆಟ್ರೋಕ್ಕೆ ರಾಜ್ಯ ಸರ್ಕಾರ ಶೇ. ೮೭.೩೭ರಷ್ಟು ಅನುದಾನ ನೀಡಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದು, ಇದು ಸುಳ್ಳು. ಮೆಟ್ರೋ ಕಾಮಗಾರಿ ವಿವಿಧ ಹಂತದಲ್ಲಿ ಕೇಂದ್ರ ಸರ್ಕಾರ ₹೨೦ ಸಾವಿರ ಕೋಟಿ ನೀಡಿದೆ ಎಂದು ಬಿಜೆಪಿ ರಾಜ್ಯ ವಕ್ತಾರೆ ಸುರಭಿ ಹೊಡಿಗೇರಿ ತಿಳಿಸಿದರು.
ಕರ್ನಾಟಕದ ಬೆಂಗಳೂರು ಮೆಟ್ರೋಗೆ ೨೦೨೧-೨೨ರಲ್ಲಿ ₹೩೬೨೨.೮೬, ೨೦೨೨-೨೩ರಲ್ಲಿ ₹೪೦೪೧.೬೧, ೨೦೨೩-೨೪ರಲ್ಲಿ ₹೩೬೧೭.೧೬, ೨೦೨೪-೨೫ರಲ್ಲಿ ೪೬೧೪.೫೮ ಕೋಟಿ ಅನುದಾನ ಕೊಡಲಾಗಿದೆ ಎಂದು ವಿವರಿಸಿದರು.
ಧರ್ಮಸ್ಥಳದಲ್ಲಿ ಎಸ್ಐಟಿ ನಡೆಸುತ್ತಿರುವ ತನಿಖೆ ಕುರಿತು ಸರ್ಕಾರಕ್ಕೇ ಸ್ಪಷ್ಟತೆ ಇಲ್ಲ. ತನಿಖೆ ಹಿಂದೆ ಯಾರ ಒತ್ತಡವಿದೆ? ಇದಕ್ಕೆ ಅಧಿವೇಶನದಲ್ಲಿ ರಾಜ್ಯ ಸರ್ಕಾರ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.ಪ್ರಮುಖರಾದ ಸೀಮಾ ಲದ್ವಾ, ವಸಂತ ನಾಡಜೋಶಿ, ಗುರು ಪಾಟೀಲ, ರಾಜು ಕೋರ್ಯಾಣಮಠ ಸುದ್ದಿಗೋಷ್ಠಿಯಲ್ಲಿದ್ದರು.