ಕನ್ನಡಪ್ರಭ ವಾರ್ತೆ, ತುಮಕೂರು
ಮೊದಲು ಹಾಲೇನಹಳ್ಳಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ ಅವರು, ವಿಬಿ-ಜಿ ರಾಮ್ ಜಿ ಯೋಜನೆ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ಯೋಗೇಶ್ ಅವರ ಜಮೀನಿನಲ್ಲಿ ಅನುಷ್ಠಾನ ಮಾಡಿಕೊಂಡಿರುವ ರೇಷ್ಮೆ ಕಾಮಗಾರಿ, ರಂಗಪ್ಪ ಅವರ ಜಮೀನಿನಲ್ಲಿ ಅನುಷ್ಠಾನ ಮಾಡಿಕೊಂಡಿರುವ ಕೃಷಿಹೊಂಡ ಕಾಮಗಾರಿ ಪರಿಶೀಲಿಸಿದರು.
ನಂತರ ಗ್ರಾಮ ಪಂಚಾಯಿತಿ ಕಚೇರಿಗೆ ಭೇಟಿ ನೀಡಿದ ಅವರು, ಗ್ರಾಮ ಪಂಚಾಯಿತಿಗೆ ಸಲ್ಲಿಕೆಯಾದ ಸಾರ್ವಜನಿಕ ಅರ್ಜಿ ವಿಲೇವಾರಿ, ಬೀದಿ ದೀಪ, ಕುಡಿಯುವ ನೀರು, ಇ-ಸ್ವತ್ತು ಸೇರಿ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ಮಾಡಿದರು.ತದನಂತರ ಚಿಕ್ಕನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಗೆ ಭೇಟಿ ನೀಡಿ, ಕಾರ್ಪೇಹಳ್ಳಿ ಗ್ರಾಮದಲ್ಲಿ ವಿಬಿ-ಜಿ ರಾಮ್ ಜಿ ಯೋಜನೆಯಡಿ ಅನುಷ್ಠಾನ ಮಾಡಿಕೊಂಡಿರುವ ಹಲಸಿನ ತೋಟದ ಕಾಮಗಾರಿ ಪರಿಶೀಲಿಸಿ, ರೈತರೊಟ್ಟಿಗೆ ಸಂವಹನ ನಡೆಸಿದರು.
ಈ ವೇಳೆ ಗ್ರಾಮಸ್ಥರು ನೀರಿನ ಕೊರತೆ ಇರುವ ಬಗ್ಗೆ ಮನವಿ ಮಾಡಿದಾಗ, ಗ್ರಾಮಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಿಮ್ಮರಾಜನಹಳ್ಳಿ ಗ್ರಾಮ ಪಂಚಾಯಿತಿಗೆ ದಿಢೀರ್ ಭೇಟಿ : ತುಮಕೂರು ತಾಲೂಕು ತಿಮ್ಮರಾಜನಹಳ್ಳಿ ಗ್ರಾಮ ಪಂಚಾಯಿತಿಗೆ ದಿಢೀರ್ ಭೇಟಿ ನೀಡಿದ ಸಿಇಒ ಅಶ್ವಿಜ, ವಿಬಿಜಿ ರಾಮ್ ಜಿ, ಸ್ವಚ್ಛ ಭಾರತ ಮಿಷನ್, ಜಲಜೀವನ ಮಿಷನ್, ತೆರಿಗೆ ವಸೂಲಾತಿ ಸೇರಿದಂತೆ ಹಲವು ಕಡತಗಳನ್ನು ಪರಿಶೀಲಿಸಿದರು.