ಸಿಇಟಿ ನೀಟ್ ಮಾದರಿಯ ಉಚಿತ ಅಣಕು ಪರೀಕ್ಷೆ

KannadaprabhaNewsNetwork | Published : Mar 19, 2025 12:32 AM

ಸಾರಾಂಶ

ದ್ವಿತೀಯ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿಯಿದ್ದು, ೨೦೨೫ ಮಾರ್ಚ್ ೧೯ರಂದು ಬುಧವಾರ ಬೆಳಗ್ಗೆ ೧೦.೩೦ರಿಂದ ೧೨ ಗಂಟೆಯವರೆಗೆ ಮಲ್ನಾಡ್ ಕೋಚಿಂಗ್ ಸೆಂಟರ್ ವತಿಯಿಂದ ಉಚಿತವಾಗಿ ಸಿಇಟಿ ಮತ್ತು ನೀಟ್ ಮಾದರಿಯ ಅಣಕು ಪರೀಕ್ಷೆ ಹಮ್ಮಿಕೊಳ್ಳಲಾಗಿದೆ ಎಂದು ಸೆಂಟರ್ ನಿರ್ದೇಶಕಿ ಮೇಘನಾ ತಿಳಿಸಿದರು. ೨೦೨೫ರ ನೂತನ ರೀತಿಯ ಪ್ರಶ್ನೆ ಪತ್ರಿಕೆಯ ವಿಧಾನ ದ್ವಿತೀಯ ಪಿಯುಸಿ ೩೫ ಪ್ರಥಮ ಪಿಯುಸಿ ೧೫ ಪ್ರಾಯೋಗಿಕ ಪಠ್ಯದಲ್ಲಿ ೫ರಿಂದ ೧೦ ಪ್ರಶ್ನೆಗಳು ಬಿಎಸ್ಸಿ, ಪಶು ವೈದ್ಯಕೀಯ, ಅರಣ್ಯ ಮೀನುಗಾರಿಕೆ, ಕೃಷಿ, ತೋಟಗಾರಿಕೆ ಕೋರ್ಸ್‌ಗಳಿಗೆ ತರಬೇತಿ ಮಲ್ನಾಡ್ ಕೋಚಿಂಗ್ ಸೆಂಟರ್‌ನಲ್ಲಿ ಮಾರ್ಚ್ ೨೦ರಿಂದ ಪ್ರಾರಂಭ ವಾಗಲಿದೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಹಾಸನ

ದ್ವಿತೀಯ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿಯಿದ್ದು, ೨೦೨೫ ಮಾರ್ಚ್ ೧೯ರಂದು ಬುಧವಾರ ಬೆಳಗ್ಗೆ ೧೦.೩೦ರಿಂದ ೧೨ ಗಂಟೆಯವರೆಗೆ ಮಲ್ನಾಡ್ ಕೋಚಿಂಗ್ ಸೆಂಟರ್ ವತಿಯಿಂದ ಉಚಿತವಾಗಿ ಸಿಇಟಿ ಮತ್ತು ನೀಟ್ ಮಾದರಿಯ ಅಣಕು ಪರೀಕ್ಷೆ ಹಮ್ಮಿಕೊಳ್ಳಲಾಗಿದೆ ಎಂದು ಸೆಂಟರ್ ನಿರ್ದೇಶಕಿ ಮೇಘನಾ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಉಚಿತ ಸಿಇಟಿ ಮತ್ತು ನೀಟ್ ಮಾದರಿಯ ಅಣಕು ಪರೀಕ್ಷೆಗೆ ಆಸಕ್ತಿಯುಳ್ಳ ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ಭಾಗವಹಿಸಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಮುಂದೆ ನಡೆಯುವಂತಹ ಸಿಇಟಿ ಮತ್ತು ನೀಟ್ ಕೋಚಿಂಗ್ ಅನ್ನು ಉಚಿತವಾಗಿ ಪಡೆದುಕೊಳ್ಳಬಹುದು ಎಂದರು. ನುರಿತವರಿಂದ ತರಬೇತಿ ಕೊಡಲಾಗುವುದು. ಮಲ್ನಾಡ್ ಕೋಚಿಂಗ್ ಸೆಂಟರ್ ತರಬೇತಿಯ ವಿಶೇಷತೆಗಳು ಕೆಇಎ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಪಠ್ಯ ಆಧರಿತ ಕೆ.ಸಿ.ಇ.ಟಿ. ತರಬೇತಿ ವಿನೂತನ ರೀತಿಯಲ್ಲಿ ಪಠ್ಯ ಪ್ರಾಯೋಗಿಕ ಬಹು ಆಯ್ಕೆಯ ಪ್ರಶ್ನೆಗಳನ್ನು ಬಿಡಿಸುವ ವಿಧಾನ, ಭೌತಶಾಸ್ತ್ರ, ರಸಾಯನಶಾಸ್ತ್ರ ಜೀವಶಾಸ್ತ್ರದಲ್ಲಿ ಹೊಸದಾಗಿ ಪ್ರಯೋಗಿಕ ಪ್ರಶ್ನೆಗಳನ್ನು ನೂತನ ಮಾದರಿಯಲ್ಲಿ ತರಬೇತಿ ನೀಡಲಾಗುತ್ತದೆ. ೨೦೨೫ರ ನೂತನ ರೀತಿಯ ಪ್ರಶ್ನೆ ಪತ್ರಿಕೆಯ ವಿಧಾನ ದ್ವಿತೀಯ ಪಿಯುಸಿ ೩೫ ಪ್ರಥಮ ಪಿಯುಸಿ ೧೫ ಪ್ರಾಯೋಗಿಕ ಪಠ್ಯದಲ್ಲಿ ೫ರಿಂದ ೧೦ ಪ್ರಶ್ನೆಗಳು ಬಿಎಸ್ಸಿ, ಪಶು ವೈದ್ಯಕೀಯ, ಅರಣ್ಯ ಮೀನುಗಾರಿಕೆ, ಕೃಷಿ, ತೋಟಗಾರಿಕೆ ಕೋರ್ಸ್‌ಗಳಿಗೆ ತರಬೇತಿ ಮಲ್ನಾಡ್ ಕೋಚಿಂಗ್ ಸೆಂಟರ್‌ನಲ್ಲಿ ಮಾರ್ಚ್ ೨೦ರಿಂದ ಪ್ರಾರಂಭ ವಾಗಲಿದೆ ಎಂದು ಹೇಳಿದರು.

ಕಡಿಮೆ ಸಮಯದಲ್ಲಿ ಉತ್ತಮ ತರಬೇತಿ ಪಡೆಯಬಹುದು, ನಗರದ ಹೊಸ ಬಸ್ ನಿಲ್ದಾಣ ಎದುರು ಹೌಸಿಂಗ್ ಬೋರ್ಡ್‌ನಲ್ಲಿ ಮಲ್ನಾಡ್ ಕೋಚಿಂಗ್ ಸೆಂಟರ್ ಇದ್ದು, ಪಿಜಿ ಮತ್ತು ಹಾಸ್ಟೆಲ್ ಸೌಲಭ್ಯ ಕೂಡ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ ೯೧೦೮೨೩೩೭೪೬, ೯೧೬೪೧೧೮೦೧೧ ಗೆ ಸಂಪರ್ಕಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಲ್ನಾಡ್ ಕೋಚಿಂಗ್ ಸೆಂಟರ್ ಸಂಯೋಜಕರಾದ ವಿನಯ್, ತೇಜಸ್ವಿನಿ, ಪ್ರೀತಮ್ ಇತರರು ಉಪಸ್ಥಿತರಿದ್ದರು.

Share this article