ಕನ್ನಡಪ್ರಭ ವಾರ್ತೆ, ಶಿರಾಳಕೊಪ್ಪ
ಪಟ್ಟಣದಲ್ಲಿ ಸೋಮವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಇದೊಂದು ವಿಶೇಷ ಕಾರ್ಯಕ್ರಮವಾಗಿದೆ. ನಮ್ಮ ದೇಶವನ್ನು ಭದ್ರಪಡಿಸಿಕೊಳ್ಳಲು ನರೇಂದ್ರ ಮೋದಿ ಅವರು ಮತ್ತೊಮ್ಮೆ ಅಧಿಕಾರಕ್ಕೆ ಬರಲಿ ಎಂದು ಬಯಸುವುದು ನಮೋ ಭಾರತ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ನಮೋ ಬ್ರಿಗೇಡ್‌ನ ಬಹು ದೊಡ್ಡ ಯುವಕರ ಗುಂಪು ಭಾರತ ದೇಶ ಎತ್ತರಕ್ಕೆ ಏರಲು ಪ್ರಜೆಗಳು ಏನು ಮಾಡಬೇಕು ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಸಿದ್ಧಗೊಳಿಸಿದ್ದಾರೆ. ಆ ಕಾರ್ಯಕ್ರಮಗಳು ಪ್ರತಿಯೊಬ್ಬರಿಗೂ ತಲುಪಬೇಕು ಎಂಬುದು ನಮೋ ಬ್ರಿಗೇಡ್ ಉದ್ದೇಶವಾಗಿದೆ. ಪ್ರತಿ ಜಿಲ್ಲೆಯಲ್ಲಿ 3 ದಿನಗಳ ಕಾರ್ಯಕ್ರಮ ನಡೆಯಲಿದೆ. ಪ್ರಥಮ ಬಹಿರಂಗ ಸಮಾವೇಶ ತೊಗರ್ಸಿಯಿಂದ ಪ್ರಾರಂಭವಾಗಿದೆ ಎಂದರು.ತೊಗರ್ಸಿ ಗ್ರಾಪಂ ಅಧ್ಯಕ್ಷ ಹಾಗೂ ನಮೋ ಬ್ರಿಗೇಡ್ ಕಾರ್ಯಕರ್ತ ನಿರಂಜನ್ ಮಾತನಾಡಿ, ನವಭಾರತ ನಿಮಾರ್ಣಕ್ಕೆ ಹಾಗೂ ದೇಶ ಕಟ್ಟಲು ಎರಡನೇ ಬಾರಿ ಪ್ರಧಾನಿಯಾಗಿ ಸಾಬೀತುಪಡಿಸಿದ್ದಾರೆ.
ನರೇಂದ್ರ ಮೋದಿ ಅವರು ದೇಶಕ್ಕಾಗಿ ತಮ್ಮ ಜೀವನವನ್ನು ಮೀಸಲಿಟ್ಟು ದೇಶಕ್ಕಾಗಿ ನಾವು ಏನು ಮಾಡಬೇಕು ಎಂಬ ವಿಷಯವನ್ನು ಚಕ್ರವರ್ತಿ ಸೂಲಿಬೆಲೆ ನಮಗೆಲ್ಲ ತಿಳಿಸಲಿದ್ದಾರೆ. ಸಮಾವೇಶದಲ್ಲಿ 5 ಸಾವಿರ ಯುವಕರು ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.ಈ ಸಂದರ್ಭ ಕಾಯರ್ಕರ್ತ ವಿನಾಯಕ್ ಹಾಜರಿದ್ದದರು.
- - - -19ಕೆ.ಎಸ್.ಎಚ್ಆರ್1:ಸುದ್ದಿಗೋಷ್ಠಿಯಲ್ಲಿ ನಮೋ ಬ್ರಿಗೇಡ್ ಮುಖಂಡರಾದ ಶಿವು, ನಿರಂಜನ್ ಮಾತನಾಡಿದರು.