ಚಳ್ಳಕೆರೆ ಪೊಲೀಸರ ಮಿಂಚಿನ ಕಾರ್ಯಚರಣೆ :

KannadaprabhaNewsNetwork |  
Published : Oct 10, 2025, 01:00 AM IST
ಪೋಟೋ೯ಸಿಎಲ್‌ಕೆ೦೨ ಆರೋಪಿ ಮಹಮ್ಮದ್‌ಶರೀಫ್ ಭಾವಚಿತ್ರ. | Kannada Prabha

ಸಾರಾಂಶ

ಚಳ್ಳಕೆರೆ ನಗರದ ಪೊಲೀಸ್ ಠಾಣೆಯಲ್ಲಿ 34 ಬೈಕ್‌ಗಳನ್ನು ಪತ್ತೆಹಚ್ಚಿರುವುದು.

ಬೈಕ್ ಕಳ್ಳನ ಬಂಧನ । 1.40 ಲಕ್ಷ ಮೌಲ್ಯದ 34 ಬೈಕ್ ಪತ್ತೆ । ಎಸ್‌ಪಿ ರಂಜಿತ್‌ ಕುಮಾರ್ ಪ್ರಶಂಸೆ ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಕಳೆದ ಹಲವಾರು ವರ್ಷಗಳಿಂದ ನಗರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮೋಟಾರ್‌ ಬೈಕ್‌ಗಳ ಕಳ್ಳತನವನ್ನು ವೃತ್ತಿಯನ್ನಾಗಿ ಮಾಡಿಕೊಂಡಿದ್ದ ಹಿರಿಯೂರಿನ ಆದಾಜ್‌ನಗರ ನಿವಾಸಿ ಮಹಮ್ಮದ್‌ ಶರೀಫ್(35) ಎಂಬುವವನ್ನು ವಶಕ್ಕೆ ಪಡೆದ ಪೊಲೀಸರು ಅವನನ್ನು ವಿಚಾರಣೆಗೆ ಗುರುಪಡಿಸಿ ಸುಮಾರು 11 ಪ್ರಕರಣಗಳನ್ನು ಪತ್ತೆ ಹಚ್ಚಿದ್ದಲ್ಲದೆ, 1.40 ರು. ಲಕ್ಷ ಮೌಲ್ಯದ 34 ಮೋಟಾರ್‌ ಬೈಕ್ ವಶಪಡಿಸಿಕೊಳ್ಳುವ ಮೂಲಕ ಬಾರಿ ಪ್ರಮಾಣದ ಬೈಕ್‌ ಕಳ್ಳತನವನ್ನು ಪತ್ತೆಹಚ್ಚಿ ಸಾರ್ವಜನಿಕರ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ.

ಠಾಣಾ ಇನ್ಸಪೆಕ್ಟರ್ ಕೆ.ಕುಮಾರ್ ಈ ಬಗ್ಗೆ ಮಾಹಿತಿ ನೀಡಿ, ಜಿಲ್ಲಾ ರಕ್ಷಣಾಧಿಕಾರಿ ರಂಜಿತ್‌ಕುಮಾರ್ ಬಂಡಾರು, ಹೆಚ್ಚುವರಿ ರಕ್ಷಣಾಧಿಕಾರಿ ಆರ್.ಶಿವಕುಮಾರ್, ಪ್ರಭಾರ ಡಿವೈಎಸ್‌ಪಿ ಉಮೇಶ್‌ ಈಶ್ವರನಾಯ್ಕ, ನೂತನ ಡಿವೈಎಸ್‌ಪಿ ಎಂ.ಜಿ.ಸತ್ಯನಾರಾಯಣರಾವ್ ಮಾರ್ಗದರ್ಶನದಲ್ಲಿ ಪ್ರಕರಣವನ್ನು ಪತ್ತೆ ಹಚ್ಚಲಾಗಿ ಮೋಟಾರ್‌ ಬೈಕ್‌ಗಳನ್ನು ಸಹ ಕಳ್ಳನಿಂದ ವಶಪಡಿಸಿಕೊಂಡಿದ್ದಾರೆ.

ಚಳ್ಳಕೆರೆ ಪೊಲೀಸ್ ಠಾಣಾವ್ಯಾಪ್ತಿ-6, ಹೊಸದುರ್ಗ-4, ಹೊಳಲ್ಕೆರೆ-2 ಚಿತ್ರದುರ್ಗ ನಗರ ಠಾಣೆ-2 ಚಿತ್ರದುರ್ಗ ಬಡಾವಣೆ-1, ಹಿರಿಯೂರು ನಗರಠಾಣೆ-1, ತುಮಕೂರು ಜಿಲ್ಲೆ-6, ದಾವಣಗೆರೆ-3, ಶಿವಮೊಗ್ಗ-೨, ಚಿಕ್ಕಮಗಳೂರು ಜಿಲ್ಲೆ-೧ ಹಾಗೂ ೧೧ ಮೋಟಾರ್‌ ಬೈಕ್‌ಗಳ ಬಗ್ಗೆ ವಿವರಗಳು ಲಭ್ಯವಾಗಬೇಕಿದ್ದು. ಒಟ್ಟು 34 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.ಪ್ರಕರಣವನ್ನು ಕ್ಷಿಪ್ರಗತಿಯಲ್ಲಿ ಬೇದಿಸಿ ತಲೆಮರಿಸಿಕೊಂಡು ಓಡಾಡುತ್ತಿದ್ದ ಆರೋಪಿಯನ್ನು ಪತ್ತೆಹಚ್ಚಿ ಜಿಲ್ಲೆಯೂ ಸೇರಿದಂತೆ ವಿವಿಧ ಜಿಲ್ಲೆಗಳ ಮೋಟಾರ್‌ ಬೈಕ್‌ಕಳ್ಳತನವನ್ನು ಭೇದಿಸಿದ ಚಳ್ಳಕೆರೆ ಪೊಲೀಸರ ಕಾರ್ಯಕ್ಕೆ ಎಸ್‌ಪಿ ರಂಜಿತ್‌ ಕುಮಾರ್‌ ಬಂಡಾರು, ಹೆಚ್ಚುವರಿ ರಕ್ಷಣಾಧಿಕಾರಿ ಆರ್.ಶಿವಕುಮಾರ್ ಪ್ರಶಂಸೆ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.

ನೂತನ ಡಿವೈಎಸ್‌ಪಿ ಎಂ.ಜೆ.ಸತ್ಯನಾರಾಯಣರಾವ್ ಮಾತನಾಡಿ, ಕಳ್ಳತನವೂ ಸೇರಿದಂತೆ ಅನೇಕ ಪ್ರಕರಣಗಳಲ್ಲಿ ಪೊಲೀಸರು ಪತ್ತೆ ಹಚ್ಚುವ ಕಾರ್ಯದಲ್ಲಿ ಹೆಚ್ಚು ಜಾಗೃತೆ ವಹಿಸಿದ್ದರೂ ಸಾರ್ವಜನಿಕರು ಕೆಲವೊಮ್ಮೆ ಪೊಲೀಸರ ಕಾರ್ಯದ ಬಗ್ಗೆ ಅನುಮಾನ ವ್ಯಕ್ತಪಡಿಸುವುದು ಸರಿಯಲ್ಲ. ಪೊಲೀಸ್ ಇಲಾಖೆ ಸದಾಕಾಲ ಸಾರ್ವಜನಿಕರ ಹಿತದೃಷ್ಟಿಯಿಂದ ಕಾರ್ಯನಿರ್ವಹಿಸುತ್ತದೆ. ಸಾರ್ವಜನಿಕರೂ ಸಹ ಪೊಲೀಸ್ ಇಲಾಖೆಗೆ ಹೆಚ್ಚು ಸಹಕಾರ ನೀಡಿದಲ್ಲಿ ಪ್ರಕರಣಗಳ ಪತ್ತೆ ಕಾರ್ಯಕ್ಕೆ ಸಹಾಯವಾಗುತ್ತದೆ ಎಂದಿದ್ದಾರೆ.

ಪತ್ತೆ ಕಾರ್ಯದಲ್ಲಿ ಪಿಎಸ್‌ಐಗಳಾದ ಈರೇಶ್, ಜೆ.ಶಿವರಾಜ್, ಧರೆಪ್ಪ ಬಾಳಪ್ಪ ದೊಡ್ಡಮನಿ, ಎಎಸ್‌ಐ ರಾಘವರೆಡ್ಡಿ, ಮುಖ್ಯಪೇದೆ ಎಚ್.ವಸಂತಕುಮಾರ್, ಎಚ್.ವೆಂಕಟೇಶ್, ಶ್ರೀನಿವಾಸ್, ಶಿವಕುಮಾರ್, ಪೇದೆಗಳಾದ ಮಂಜುನಾಥ, ಪರಶುರಾಮ, ಶ್ರೀಧರಧರೆಣ್ಣನವರ್, ರಮೇಶ್‌ಬಾರ್ಕಿ, ಅಶೋಕ್‌ರೆಡ್ಡಿ, ತಿರುಕಪ್ಪ ತಳವಾರ್, ಬಸವರಾಜ, ಕೊಂಡ್ಲಿ ಮಂಜುನಾಥ ಮುಂತಾದವರು ಶ್ರಮಹಿಸಿದ್ದು ಎಲ್ಲರನ್ನೂ ಜಿಲ್ಲಾರಕ್ಷಣಾಧಿಕಾರಿಗಳು ಅಭಿನಂದಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಧಿವೇಶನ ಮುಗಿದ ಬಳಿಕ ಡಿಕೆಶಿಗೆ ಶುಭಸುದ್ದಿ : ಇಕ್ಬಾಲ್
ಬೆಳಗಾವೀಲೂ ‘ಕೈ’ ಡಿನ್ನರ್‌ ಸಭೆಗೆ ಬಿವೈವಿ ಕಿಡಿ