-ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಟಿ.ರಘುಮೂರ್ತಿ ಅಭಿಮತ । ವಿವಿಧ ಕ್ಷೇತ್ರದ ಗಣ್ಯರಿಗೆ ಸನ್ಮಾನ ಸಮಾರಂಭ
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಕನ್ನಡ ಭಾಷೆ ನಮ್ಮೆಲ್ಲರ ಆಡಳಿತ ಭಾಷೆ, ಕನ್ನಡ ಮತ್ತು ಕನ್ನಡತನ ಬಿಟ್ಟು ಬದುಕಲು ಸಾಧ್ಯವಿಲ್ಲವೆಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು.ಅವರು, ನಗರ ಬಿಎಂ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜ್ಯದಲ್ಲಿ ಜಾರಿಯಲ್ಲಿರುವ ಐದು ಗ್ಯಾರಂಟಿಗಳ ಸಹಕಾರದಿಂದ ರಾಜ್ಯದ ಜನತೆ ಬದುಕು ಕಟ್ಟಿಕೊಂಡಿದ್ಧಾರೆ. ಕನ್ನಡ ಸಾಹಿತ್ಯಕ್ಕೆ ಚಳ್ಳಕೆರೆ ಕ್ಷೇತ್ರದ ಕೊಡುಗೆ ಎಂದೂ ಮರೆಯಲು ಸಾಧ್ಯವಿಲ್ಲ. ತಳುಕಿನ ತರಾಸು, ವೆಂಕಣಯ್ಯ, ಬೆಳಗೆರೆ ಕೃಷ್ಣಶಾಸ್ತ್ರಿ, ಜಾನಕಮ್ಮ, ಸಿರಿಯಜ್ಜಿ, ಜಾನಪದ ತಜ್ಞ ಮೀರಸಾಬಿಹಳ್ಳಿ ಶಿವಣ್ಣ, ಶಿವಲಿಂಗಪ್ಪ, ತಿಪ್ಪಣ್ಣಮರಿಕುಂಟೆ ಇಂತಹ ಮಹನೀಯರ ಪರಿಶ್ರಮದ ಕೊಡುಗೆಯನ್ನು ನಾವೆಂದೂ ಮರೆಯಲು ಸಾಧ್ಯವಿಲ್ಲ.
ತಹಸೀಲ್ದಾರ ರೇಹಾನ್ ಪಾಷ, ರಾಜ್ಯ ಸರ್ಕಾರ ಸದಾಕಾಲ ಕನ್ನಡಿಗರ ಹಿತ ಕಾಪಾಡುವಲ್ಲಿ ಬದ್ಧವಾಗಿದೆ. ನಾವೆಲ್ಲರೂ ಕನ್ನಡ ಉಳಿವಿಗಾಗಿ ಶ್ರಮೀಸೋಣವೆಂದರು.
ಸಾಂಸ್ಕೃತಿಕ ಕ್ಷೇತ್ರದಲ್ಲಿ ಪಿ.ಬೋರಯ್ಯ, ವಿ.ಶಿವನಪ್ಪ, ಕ್ರೀಡಾಕ್ಷೇತ್ರದಲ್ಲಿ ಪಿ.ಪದ್ಮಾವತಿ, ಸಾಹಿತ್ಯ ಕ್ಷೇತ್ರದಲ್ಲಿ ನಿವೃತ್ತ ಶಿಕ್ಷಕ ಮೀರಸಾಬಿಹಳ್ಳಿ ಗುರುಮೂರ್ತಿ, ಕೃಷಿಕ್ಷೇತ್ರದಲ್ಲಿ ವಿಡಪನಕುಂಟೆಯ ಸಿದ್ದೇಶ್ವರರೆಡ್ಡಿ, ಮಾಧ್ಯಮ ಕ್ಷೇತ್ರದಲ್ಲಿ ಸಿ.ವೈ.ಗಂಗಾಧರ, ಕಂದಾಯ ಇಲಾಖೆಯ ರಾಜ್ಯ ನಿರೀಕ್ಷಕ ಚೇತನ್ ಕುಮಾರ್, ವೈದ್ಯ ಅಮೀತ್ ಗುಪ್ತ, ಪಶುವೈದ್ಯ ಡಾ. ರೇವಣ್ಣ, ಸಿಡಿಪಿಒ ಇಲಾಖೆಯ ಅನ್ನಪೂರ್ಣಮ್ಮ, ಶಿಕ್ಷಣ ಇಲಾಖೆಯ ಆರ್.ಸದಾಶಿವಯ್ಯ ಇವರನ್ನು ಸನ್ಮಾನಿಸ ಲಾಯಿತು. ವಿವಿಧ ಶಾಲೆಗಳ ಮಕ್ಕಳು ಮನೋರಂಜನಾ ಕಾರ್ಯಕ್ರಮ ನಡೆಸಿದರು. ಆದರ್ಶ, ವಿದ್ಯಾಭಾರತಿ, ಲಿಟ್ಲಪ್ಲವರ್ ಶಾಲೆ, ಎನ್. ದೇವರಹಳ್ಳಿಶಾಲೆಯ ಮಕ್ಕಳು ಕನ್ನಡ ಹಾಡುಗಳಿಗೆ ಆಕರ್ಷಣಿಯ ನೃತ್ಯ ಪ್ರದರ್ಶಿಸಿದರು.
-----
ಚಳ್ಳಕೆರೆ ನಗರದ ಬಿಎಂ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ೬೯ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಗಣ್ಯರನ್ನು ಸನ್ಮಾನಿಸಲಾಯಿತು.
ಪೋಟೋ೧ಸಿಎಲ್‌ಕೆ೧