ಚಳ್ಳಕೆರೆ ದೇವನಗರಿಯಾಗಿ ಪರಿವರ್ತನೆ: ಶಾಸಕ ರಘುಮೂರ್ತಿ

KannadaprabhaNewsNetwork |  
Published : Mar 09, 2025, 01:47 AM IST
ಪೋಟೋ೮ಸಿಎಲ್‌ಕೆ೪ ಚಳ್ಳಕೆರೆ ನಗರದ ಮಹಾಲಕ್ಷಿö್ಮ ದೇವಸ್ಥಾನ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಭಾಗವಹಿಸಿದ್ದ ಶಾಸಕ ಟಿ.ರಘುಮೂರ್ತಿಯವರನ್ನು ಸನ್ಮಾನಿಸಲಾಯಿತು.  | Kannada Prabha

ಸಾರಾಂಶ

Challakere to be transformed into a city of gods: MLA Raghumurthy

ಚಳ್ಳಕೆರೆ: ದೇವರ ಅನುಗ್ರಹದಿಂದ ಚಳ್ಳಕೆರೆ ಅಭಿವೃದ್ದಿಪಥದತ್ತ ಮುನ್ನಡೆಯುತ್ತದೆಯಲ್ಲದೆ, ಸಾಕಷ್ಟು ಪ್ರಮಾಣದಲ್ಲಿ ನೀರಿವರಿ ವ್ಯವಸ್ಥೆ ಕಲ್ಪಿಸಲಾಗಿದೆ. ಎಲ್ಲಾ ಚೆಕ್ ಡ್ಯಾಂಗಳಲ್ಲಿ ಸಮೃದ್ದ ನೀರಾಗಿ ಅಂತರ್ಜಲ ಹೆಚ್ಚಿದೆ. ರೈತರು ಹಾಗೂ ವಾಣಿಜ್ಯೋದ್ಯಮಿಗಳ ಮುಖದಲ್ಲಿ ಮಹಾಲಕ್ಷ್ಮಿ ಕೃಪೆಯಿಂದ ಸಂತಸ ಮನೆ ಮಾಡಿದೆ ಎಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು.

ಅವರು, ಶನಿವಾರ ಶಿವನಗರದ ಮಹಾಲಕ್ಷ್ಮಿ ದೇಗುಲದ ಪ್ರತಿಷ್ಠಾಪನಾ ಕಾರ್ಯಕ್ರಮದ ಎರಡನೇ ದಿನ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಮಾತನಾಡಿದರು. ದೇಗುಲ ನಿರ್ಮಾಣಕ್ಕೆ ನೆರವು ನೀಡಿದ ದಾನಿಗಳನ್ನು ಸನ್ಮಾನಿಸಿದರು.

ಸಮಿತಿ ಗೌರವಾಧ್ಯಕ್ಷ ಟಿ.ಪ್ರಭುದೇವ, ಅಧ್ಯಕ್ಷ ಎಚ್.ಎಸ್.ನಾಗರಾಜು, ಸಂಚಾಲಕ ಬಿ.ಸಿ.ಸಂಜೀವಮೂರ್ತಿ, ಉಪಾಧ್ಯಕ್ಷ ಎ.ವಿಜಯೇಂದ್ರ, ಟಿ.ಆರ್.ಪಾಂಡುರAಗ, ಕಾರ್ಯದರ್ಶಿ ಎ.ಎಸ್.ಕುಮಾರ್, ಸಹ ಕಾರ್ಯದರ್ಶಿ ಸುಮನಕೋಟೇಶ್ವರ್, ಧನಲಕ್ಷಿö್ಮಲೋಕೇಶ್, ಖಜಾಂಚಿ ಕೆ.ಪಿ.ನಾಗಭೂಷಣಶೆಟ್ಟಿ, ನಿರ್ದೇಶಕರಾದ ವೆಂಕಟನಾರಾಯಣ, ಕೆ.ಟಿ.ಬಾಬು, ಜಿ.ಆರ್.ಬಾಲಾಜಿ, ಎಂ.ಸಂಜೀವಪ್ಪ ಪಾಲ್ಗೊಂಡಿದ್ದರು.

-----

ಪೋಟೋ೮ಸಿಎಲ್‌ಕೆ೪: ಚಳ್ಳಕೆರೆ ನಗರದ ಮಹಾಲಕ್ಷ್ಮಿದೇವಸ್ಥಾನ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಭಾಗವಹಿಸಿದ್ದ ಶಾಸಕ ಟಿ.ರಘುಮೂರ್ತಿಯವರನ್ನು ಸನ್ಮಾನಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡದಲ್ಲೂ ರೈಲ್ವೆ ಪರೀಕ್ಷೆ ನಡೆಸಲು ಪ್ರಧಾನಿ ಮೋದಿ ಅಸ್ತು: ಸೋಮಣ್ಣ
ಬಿಜೆಪಿ ಶಾಸಕ ಬೈರತಿ ವಿರುದ್ಧ ಲುಕ್‌ ಔಟ್‌ ನೋಟಿಸ್‌ ಜಾರಿ?