ಕನ್ನಡಪ್ರಭ ವಾರ್ತೆ ಚಾಮರಾಜನಗರ
ಕ್ರಿಸ್ಮಸ್ ಹಿನ್ನೆಲೆಯಲ್ಲಿ ಚರ್ಚ್‌ಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ನಗರದ ಸಿಎಸ್‌ಐ, ರಾಮಸಮುದ್ರ, ಮಾದಾಪುರ, ಮಸಗಾಪುರ ಬಿಷಪ್ ಸಾರ್ಜೆಂಟ್ ಸ್ಮಾರಕ ದೇವಾಲಯ, ದೊಡ್ಡರಾಯಪೇಟೆಯ ಸಂತ ತೆರೆಸಾ ಚರ್ಚ್, ಕೋಡಿಉಗನೆ, ನಾಗವಳ್ಳಿ ಚರ್ಚ್ ಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಕ್ರಿಸ್‌ಮಸ್ ಅಂಗವಾಗಿ ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರ ಪುತ್ರ ಯಳಂದೂರು ಟಿಎಪಿಸಿಎಂಎಸ್ ಅಧ್ಯಕ್ಷ ಕುಸುಮರಾಜು ತಾಲೂಕಿನ ವಿವಿಧ ಚರ್ಚುಗಳಿಗೆ ಬುಧವಾರ ಭೇಟಿನೀಡಿ ಕ್ರೈಸ್ತ ಬಾಂದವರಿಗೆ ಶುಭಾಶಯ ಕೋರಿದರು.ಅಲ್ಲಿನ ಧರ್ಮಗುರುಗಳನ್ನು ಭೇಟಿಮಾಡಿ, ಮಾನವೀಯತೆ ಗುಣಗಳನ್ನು ಜಗತ್ತಿಗೆ ಸಾರಿದ ಮಹಾನ್ ಮಾನವತಾವಾದಿ ಏಸುಕ್ರಿಸ್ತನು ಹುಟ್ಟಿದ ಶ್ರೇಷ್ಠ ದಿನವಾಗಿದೆ. ಕ್ರಿಸ್ ಮಸ್ ನಂತರ ಬರುವ ೨೦೨೫ ನೇ ನೂತನ ವರ್ಷ ನಾಡಿನ ಜನತೆಗೆ ಒಳಿತನ್ನುಂಟು ಮಾಡಿ ಉತ್ತಮ ಮಳೆ-ಬೆಳೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು.
ಕೊಳ್ಳೇಗಾಲದಲ್ಲಿ ಸಾರ್ಥಕತೆಯ ಪಾಠ ಸಾರಿದ ಯೇಸುಕೊಳ್ಳೇಗಾಲ: ಶಾಂತಿಪ್ರಿಯ ಯೇಸುಕ್ರಿಸ್ತನ ಜನ್ಮದಿನವನ್ನು ಕ್ರೈಸ್ತ ಭಾಂದವರು ಸಂಭ್ರಮ ಸಡಗರದಿಂದ ಆಚರಣೆ ಮಾಡಿದರು. ಪಟ್ಟಣದ ಸಂತ ಫ್ರಾನ್ಸಿಸ್ ಚರ್ಚ್, ಬ್ರದರನ್ ಚರ್ಚ್, ಬೇತೇಲ್ ಲೂಥರನ್ ಚರ್ಚ್, ಸವೆಂತ್ ಡೇ ಚರ್ಚ್, ಸಿದ್ದಯ್ಯನಪುರದ ಅರುಣೋದಯ ಚರ್ಚ್, ಸಿಎಸ್ಐ ಚರ್ಚ್, ಸೇರಿದಂತೆ ಎಲ್ಲಾ ಚರ್ಚ್ ಗಳಲ್ಲಿ ಸಂಭ್ರಮದಿಂದ ಕ್ರಿಸ್ಮಸ್ ಆಚರಿಸಿದರು. ಕ್ರಿಶ್ಚಿಯನ್ ಬಾಂಧವರು ಒಗ್ಗೂಡಿ ಆಚರಿಸುವ ಕ್ರಿಸ್‌ಮಸ್ ವಿಶ್ವಕ್ಕೆ ಸಮಾನತೆ ಹಾಗೂ ಸಾರ್ಥಕತೆಯ ಪಾಠವನ್ನು ಮಾಡುತ್ತದೆ. ದೇವ ಪುರುಷರಾದ ಯೇಸು ಕ್ರಿಸ್ತನು ಭೂಮಿಯಲ್ಲಿರುವ ಮಾನವರ ಕಲ್ಯಾಣಕ್ಕಾಗಿ ಡಿ.25 ರಂದು ಭೂಮಿಯಲ್ಲಿ ಅವತರಿಸಿದ ದಿನವನ್ನು ಕ್ರಿಸ್‌ಮಸ್ ಹಬ್ಬವನ್ನಾಗಿ ಆಚರಿಸಲಾಗುತ್ತದೆ. ಈ ಪವಿತ್ರ ದಿನ ಯೇಸುವು ಮಾನವರಿಗಾಗಿ ಮಾಡಿದ ತ್ಯಾಗ, ಬಲಿದಾನ, ಹಂಚಿದ ಪ್ರೀತಿ, ಸ್ನೇಹವನ್ನು ಕೊಂಡಾಡಿದರು. ಎಲ್ಲ ಚರ್ಚ್‌ಗಳಿಗೆ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಪತ್ರ ಬರೆಯುವ ಮೂಲಕ ಶುಭಕೋರಿದರು. ಕ್ರಿಸ್ಮಸ್ ಪ್ರಯುಕ್ತ ಕ್ರೈಸ್ತ ಬಂಧುಗಳ ಮನೆಗಳು ಹಾಗೂ ಎಲ್ಲಾ ಕ್ರೈಸ್ತ ಸಮುದಾಯದ ಬಡಾವಣೆಗಳಲ್ಲಿ ವಿದ್ಯುತ್ ದೀಪಾಲಂಕರಗಳಿಂದ ಅಲಂಕಾರಗೊಳಿಸಲಾಗಿತ್ತು.