ತರೀಕೆರೆ ಸ್ವಚ್ಚತೆಗೆ ಚಂಡಿಗಢ ಅಧ್ಯಯನ ಪ್ರವಾಸ ಪ್ರೇರಣೆ: ಎಚ್.ಪ್ರಶಾಂತ್

KannadaprabhaNewsNetwork | Updated : Jul 11 2024, 01:36 AM IST

ಸಾರಾಂಶ

ತರೀಕೆರೆ, ಪಟ್ಟಣ ಸ್ವಚ್ಛತೆ ಸಮಸ್ಯೆ ಬಗೆಹರಿಸಲು ಚಂಡಿಗಢ ಅಧ್ಯಯನ ಪ್ರವಾಸ ಪ್ರೇರಣೆಯಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್ ತಿಳಿಸಿದ್ದಾರೆ.

ಚಂಡಿಗಢ ಅಧ್ಯಯನ ಪ್ರವಾಸ ಕುರಿತು ಮಾಹಿತಿ

ಕನ್ನಡಪ್ರಭ ವಾರ್ತೆ, ತರೀಕೆರೆ

ಪಟ್ಟಣ ಸ್ವಚ್ಛತೆ ಸಮಸ್ಯೆ ಬಗೆಹರಿಸಲು ಚಂಡಿಗಢ ಅಧ್ಯಯನ ಪ್ರವಾಸ ಪ್ರೇರಣೆಯಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್ ತಿಳಿಸಿದ್ದಾರೆ.

ಚಂಡಿಗಢ ಅಧ್ಯಯನ ಪ್ರವಾಸ ಕುರಿತು ಮಾಹಿತಿ ನೀಡಿದರು. ಸಾರ್ವಜನಿಕರ, ಜನಪ್ರತಿನಿಧಿಗಳ ಹಾಗು ಸಿಬ್ಬಂದಿ ಸಹಕಾರದಿಂದ ಪಟ್ಟಣದ ಸ್ವಚ್ಛತೆ ಸಮಸ್ಯೆ ಬಗೆಹರಿಸಲು ಚಂಡಿಗಢ ಅಧ್ಯಯನ ಪ್ರವಾಸ ಪ್ರೇರಣೆಯಾಗಲಿದೆ. ಪ್ರವಾಸದಲ್ಲಿ ವಿವಿಧ ಪಟ್ಟಣಗಳ ಭೇಟಿ ಸಂದರ್ಭದಲ್ಲಿ ನಗರಗಳ ಅಭಿವೃದ್ಧಿ ಕುರಿತು ಮಾಹಿತಿ ಕಲೆಹಾಕಲಾಗಿದೆ. ಸ್ವಚ್ಛತೆ ಕುರಿತಂತೆ ಪಟ್ಟಣದಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಅಧ್ಯಯನ ಪ್ರವಾಸ ಅಧಿಕಾರಿಗಳಲ್ಲಿ ಹಾಗೂ ಜನ ಪ್ರತಿನಿಧಿಗಳಲ್ಲಿ ಹೊಸ ಹುರುಪು ತಂದಿದ್ದು, ಪುರಸಭೆ ಇನ್ನಷ್ಟು ಪರಿಣಾಮಕಾರಿಯಾಗಿ ಘನತ್ಯಾಜ್ಯ ವಿಲೇವಾರಿ ನಿರ್ವಹಣೆ ಮಾಡಲು ಅನುಕೂಲವಾಗಲಿದೆ ಎಂದು ಪುರಸಭೆ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.ಕೇಂದ್ರಾಡಳಿತ ಪ್ರದೇಶವಾದ ಈ ನಗರ ಯೋಜಿತ ನಗರವಾಗಿದ್ದು, ಪ್ರತಿಯೊಂದು ಆಡಳಿತದ ನಿಯಂತ್ರಣಕ್ಕೆ ಒಳಪಟ್ಟಿದೆ. ಪಂಜಾಬ್ ಹಾಗೂ ಹರಿಯಾಣ ರಾಜ್ಯಗಳಿಗೆ ರಾಜಧಾನಿಯಾದ ಈ ಪ್ರದೇಶದಲ್ಲಿ ಜನರು ಹೆಚ್ಚು ಜಾಗೃತರಾಗಿದ್ದು, ಕಸ ನಿರ್ವಹಣೆಯನ್ನು ತುಂಬಾ ಎಚ್ಚರಿಕೆಯಿಂದ ನಿಭಾಯಿಸುವುದು ಇಲ್ಲಿ ಕಂಡು ಬರುತ್ತದೆ. ಕಸ ವಿಂಗಡಣೆ ನಿರ್ವಹಿಸದ ಮತ್ತು ಪರಿಸರ ಅನೈರ್ಮಲ್ಯಕ್ಕೆ ಕಾರಣರಾದವರಿಗೆ ಮುನ್ಸಿಪಲ್ ಕಾಯ್ದೆಗಳನ್ವಯ ದಂಡ ವಿಧಿಸಲಾಗುತ್ತದೆ. ಪೌರ ಕಾರ್ಮಿಕರಲ್ಲಿ ಹಾಗೂ ನಗರಪಾಲಿಕೆ ಅಧಿಕಾರಿಗಳಲ್ಲಿ ದಕ್ಷತೆ ಹಾಗೂ ಕರ್ತವ್ಯ ನಿಷ್ಠೆ ಎದ್ದು ಕಾಣುತ್ತದೆ ಎಂದು ತಿಳಿಸಿದರು.ಚಂಡಿಗಢ ಮಹಾನಗರ ಪಾಲಿಕೆ ಘನ ತ್ಯಾಜ್ಯ ವಿಲೇವಾರಿಗಾಗಿ ಖಾಸಗಿ ಏಜೆನ್ಸಿಗಳ ಮೂಲಕ ನಿರ್ವಹಣೆ ಕೆಲಸ ಮಾಡುತ್ತಿದೆ. ನಗರ ವ್ಯಾಪ್ತಿಯಲ್ಲಿ ಕಸ ಸಂಗ್ರಹಿಸುವ ಟಿಪ್ಪರ್ ಗಳನ್ನು ಸೆಕ್ಟರ್ ವಿಭಾಗಕ್ಕೆ ತಕ್ಕಂತೆ ಬಳಸುತ್ತಿದೆ. ದಿನ ನಿತ್ಯ 500 ಮೆಟ್ರಿಕ್ ಟನ್ ಗಳಷ್ಟು ಕಸ ಸಂಗ್ರಹಿಸಿ ಆಧುನಿಕ ತಂತ್ರಜ್ಞಾನ ಅಳವಡಿಸಲಾಗಿರುವ ಘಟಕದಲ್ಲಿ ನಾಲ್ಕು ವಿಭಾಗಗಳಲ್ಲಿ ಸಂಗ್ರಹಿಸಲಾದ ತ್ಯಾಜ್ಯ ಸಂಸ್ಕರಿಸಿ ಸಿಮೇಂಟ್ ತಯಾರಿಸಲು ಬೇಕಾಗುವ ಇಂಧನವನ್ನಾಗಿ ಹಾಗೂ ರೈತರಿಗೆ ನೆರ ವಾಗುವ ಗೊಬ್ಬರ ತಯಾರಿಸಿ ಮಾರಾಟ ನಡೆಸುವ ಮೂಲಕ ಆದಾಯದ ಮೂಲವನ್ನು ಕಂಡುಕೊಳ್ಳಲಾಗಿದೆ ಎಂದು ತಂಡಕ್ಕೆ ಮಾಹಿತಿ ಹಂಚಿಕೊಂಡ ಚಂಡಿಗಢ ಮಹಾನಗರ ಪಾಲಿಕೆ ಅಧಿಕಾರಿಗಳಾದ ಇಂದ್ರಪ್ರೀತ್ ಸಿಂಗ್, ಅಂಕುರ್ ಶರ್ಮಾ ಹಾಗೂ ಇತರರು ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದರು.ಅಧ್ಯಯನ ಪ್ರವಾಸದ ತಂಡದಲ್ಲಿ ಪರಿಸರ ಅಭಿಯಂತರರಾದ ತಾಹೇರ ತಸ್ನೀಂ, ಪುರಸಭೆ ಹಲವು ಸದಸ್ಯರು ಮತ್ತು ಪೌರಕಾರ್ಮಿಕರು ಭಾಗವಹಿಸಿದ್ದರು.10ಕೆಟಿಆರ್.ಕೆ.1ಃ

ತರೀಕೆರೆ ಪುರಸಭಾ ಕಾರ್ಯಾಲಯದಿಂದ ಚಂಡಿಗಢ ಅಧ್ಯಯನ ಪ್ರವಾಸ ಏರ್ಪಡಿಸಲಾಗಿತ್ತು.

Share this article