ಚಂದ್ರಕಾಂತಗೆ ಚನ್ನಬಸಪ್ಪ ಕರಾಳೆ ಪ್ರಶಸ್ತಿ ಪ್ರದಾನ

KannadaprabhaNewsNetwork |  
Published : Jun 16, 2025, 01:42 AM IST
ಕರ್ನಾಟಕ ವಿದ್ಯಾವರ್ಧಕ ಸಂಘದಿಂದ ಲಿಂ. ಚನ್ನಬಸಪ್ಪ ಕರಾಳೆ ಪ್ರಶಸ್ತಿಯನ್ನು ಸಹಕಾರ ರತ್ನ ಚಂದ್ರಕಾಂತ ಕೋಠಿವಾಲೆಗೆ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಪ್ರದಾನಿಸಿದರು. | Kannada Prabha

ಸಾರಾಂಶ

ಪ್ರತಿವರ್ಷ ಕರ್ನಾಟಕ ವಿದ್ಯಾವರ್ಧಕ ಸಂಘದಿಂದ ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದವರನ್ನು ಗುರುತಿಸಿ ಪ್ರಶಸ್ತಿ

ಕನ್ನಡಪ್ರಭ ವಾರ್ತೆ ನಿಪ್ಪಾಣಿ

ಲಿಂ.ಚನ್ನಬಸಪ್ಪ ಕರಾಳೆ ಸ್ಮರಣಾರ್ಥ ಪ್ರತಿವರ್ಷ ಕರ್ನಾಟಕ ವಿದ್ಯಾವರ್ಧಕ ಸಂಘದಿಂದ ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದವರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುವುದು. ಈ ಬಾರಿಯ ಪ್ರಥಮ ಪ್ರಶಸ್ತಿಯು ಕನ್ನಡಕ್ಕಾಗಿ ಹೋರಾಡಿದ ಮನೆತನದ ಚಂದ್ರಕಾಂತ ಕೋಠಿವಾಲೆಗೆ ಸಂದಿದೆ ಎಂದು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘದಿಂದ ಎಕ್ಸಂಬಾದ ಜನತಾ ಶಿಕ್ಷಣ ಸಂಸ್ಥೆ ಸಭಾಂಗಣದಲ್ಲಿ ನಡೆದ ಲಿಂ.ಚನ್ನಬಸಪ್ಪ ಕರಾಳೆ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹಲವು ದಶಕಗಳ ಹಿಂದೆ ವಿವಿಧ ಸಂಘ-ಸಂಸ್ಥೆಗಳಿಗೆ ಕರಾಳೆಯವರು ಸಾವಿರಾರು ರು. ದಾನ ಮಾಡುತ್ತಿದ್ದರು. ಆ ವೇಳೆ ನಮ್ಮ ಸಂಸ್ಥೆಗೂ ದಾನ ಮಾಡಿದ್ದಾರೆಂದರು.

ಅಥಣಿ ವಿಮೋಚನಾ ಸಂಸ್ಥೆ ಅಧ್ಯಕ್ಷ ಬಿ.ಎಲ್.ಪಾಟೀಲ ಮಾತನಾಡಿ, ಗಡಿಭಾಗದ ದಾನಶೂರರಾಗಿದ್ದ ಚನ್ನಬಸಪ್ಪ ಕರಾಳೆ ಕಾರ್ಯ ಸ್ಮರಣೀಯ. ಸ್ವತಃ 4ನೇ ತರಗತಿಯವರೆಗೆ ಓದಿದ ಚನ್ನಬಸಪ್ಪ ಗಡಿಭಾಗದಲ್ಲಿ ಕೆಜಿಯಿಂದ ಪಿಜಿಯವರೆಗೆ ಓದುತ್ತಿರುವ ಜನತಾ ಶಿಕ್ಷಣ ಸಂಸ್ಥೆ ಪ್ರಾರಂಭಿಸಿದರು. ಬ್ರಿಟಿಷರು ಕೊಡಬಯಸಿದ್ದ ರಾವ್‌ ಬಹದ್ದೂರ್‌ ಬಿರುದು ತಿರಸ್ಕರಿಸಿದ್ದರು ಎಂದರು.ಇದೇ ವೇಳೆ ಚನ್ನಬಸಪ್ಪ ಕರಾಳೆ ಪ್ರಶಸ್ತಿಯನ್ನು ಸ್ಥಳೀಯ ವಿದ್ಯಾ ಸಂವರ್ಧಕ ಮಂಡಳದ ಕಾರ್ಯಾಧ್ಯಕ್ಷ ಚಂದ್ರಕಾಂತ ಕೋಠಿವಾಲೆಗೆ ಗಣ್ಯರು ಪ್ರದಾನ ಮಾಡಿದರು.

ಪ್ರಶಸ್ತಿ ಸ್ವೀಕರಿಸಿ ಚಂದ್ರಕಾಂತ ಕೋಠಿವಾಲೆ ಮಾತನಾಡಿ, ಸುಮಾರು 54 ವರ್ಷಗಳವರೆಗೆ ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಪಾಟೀಲ ಪುಟ್ಟಪ್ಪನವರ ಕುರಿತು ನಿಪ್ಪಾಣಿಯಲ್ಲಿ ವಿಚಾರ ಚಿಂತನೆ ಮೂಡಬೇಕು. ರಾಜ್ಯದಲ್ಲಿ ನಿಪ್ಪಾಣಿ ಗಟ್ಟಿಗೊಳ್ಳಲು ಇದನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕು ಎಂದು ಕರಾಳೆ ಅವರು ಆಗಾಗ ಹೇಳುತ್ತಿದ್ದರು. ಅದು ನಿಜವಾಗಿದ್ದು ಎಲ್ಲ ಜನಪ್ರತಿನಿಧಿಗಳು, ಸಾರ್ವಜನಿಕರು ಈ ನಿಟ್ಟಿನಲ್ಲಿ ಅಧ್ಯಯನ ನಡೆಸುವ ಅವಶ್ಯಕತೆದೆ ಎಂದ ಅವರು, ಪ್ರಶಸ್ತಿ ಸ್ವೀಕರಿಸಿ ಧನ್ಯನಾಗಿದ್ದೇನೆ. ಈ ಪ್ರಶಸ್ತಿ ಇನ್ನೂ ಹೆಚ್ಚಿನ ಸೇವೆಗೈಯಲು ಜವಾಬ್ದಾರಿ ಹೆಚ್ಚಿಸಿದೆ ಎಂದರು.

ಜನತಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಚನ್ನಬಸಪ್ಪ ಅಲಿಯಾಸ್ ರಾಜೇಂದ್ರ ಕರಾಳೆ, ಶಾಸಕ ಗಣೇಶ ಹುಕ್ಕೇರಿ, ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಪ್ರಾಚಾರ್ಯ ಮಹಾದೇವ ಚೌಗುಲೆ ಮಾತನಾಡಿದರು.

ಜನತಾ ಶಿಕ್ಷಣ ಸಂಸ್ಥೆ ನಿರ್ದೇಶಕ ಸಂಜೀವ ಕರಾಳೆ, ಮಲ್ಲಿಕಾರ್ಜುನ ಕರಾಳೆ, ಪಪಂ ಅಧ್ಯಕ್ಷ ಸುನೀಲ ಸಪ್ತಸಾಗರ, ಸಂವರ್ಧಕ ಮಂಡಳದ ಉಪ ಕಾರ್ಯಾಧ್ಯಕ್ಷ ಪಪ್ಪು ಪಾಟೀಲ, ಕಾರ್ಯದರ್ಶಿ ಸಮೀರ ಬಾಗೇವಾಡಿ, ಸಂಚಾಲಕ ರಾವಸಾಹೇಬ ಬಾಗೇವಾಡಿ, ಆನಂದ ಗಿಂಡೆ, ಅವಿನಾಶ ಪಾಟೀಲ, ಪ್ರವೀನ ಪಾಟೀಲ, ರುದ್ರಕುಮಾರ ಕೋಠಿವಾಲೆ, ರಾಜಶೇಖರ, ಎಸ್.ಈ. ಪಾಟೀಲ, ಮೊದಲಾದವರಿದ್ದರು. ಮಲ್ಲೇಶ ಕೋಳಿ ಪ್ರಾರ್ಥಿಸಿ, ಶಿಕ್ಷಕ ರವಿಕುಮಾರ ಶೀಳಿನವರ ಸ್ವಾಗತಿಸಿ, ಮುಖ್ಯಶಿಕ್ಷಕಿ ಯೂ.ಎಸ್.ಮಾನೆ ನಿರೂಪಿಸಿ, ಪ್ರಾಚಾರ್ಯರು ವಂದಿಸಿದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ