ಸ್ವಂತ ಹಣದಿಂದ ರಸ್ತೆ ನಿರ್ಮಾಣಕ್ಕೆ ಮುಂದಾದ ಚಂದ್ರೇಶ್‌

KannadaprabhaNewsNetwork |  
Published : Oct 06, 2025, 01:00 AM IST
4 ಟಿವಿಕೆ 1 – ತುರುವೇಕೆರೆ ತಾಲೂಕು ಯರದೇಹಳ್ಳಿಯಲ್ಲಿ ಸುಮಾರು 20 ಲಕ್ಷ ರೂ ವೆಚ್ಚದ ಸಿಸಿ ರಸ್ತೆಗೆ ದೊಡ್ಡಾಘಟ್ಟ ಚಂದ್ರೇಶ್ ಭೂಮಿ ಪೂಜೆ ನೆರವೇರಿಸಿದ ವೇಳೆ ಗ್ರಾಮಸ್ಥರು ಗೌರವ ನೀಡಿ ಸತ್ಕರಿಸಿದರು. | Kannada Prabha

ಸಾರಾಂಶ

ಯರದೇಹಳ್ಳಿ ಗ್ರಾಮಕ್ಕೆ ಸುಮಾರು 20 ಲಕ್ಷ ರು. ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಿಸಲು ರಾಜ್ಯ ಯುವ ಜೆಡಿಎಸ್‌ನ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್ ಭೂಮಿ ಪೂಜೆ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ತುರುವೇಕೆರೆ

ತಾಲೂಕಿನ ಯರದೇಹಳ್ಳಿ ಗ್ರಾಮಕ್ಕೆ ಸುಮಾರು 20 ಲಕ್ಷ ರು. ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಿಸಲು ರಾಜ್ಯ ಯುವ ಜೆಡಿಎಸ್‌ನ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್ ಭೂಮಿ ಪೂಜೆ ನೆರವೇರಿಸಿದರು.

ಯರದೇಹಳ್ಳಿಗೆ ಇತ್ತೀಚೆಗೆ ಭೇಟಿ ನೀಡಿದ್ದ ವೇಳೆ ಅಲ್ಲಿಯ ಗ್ರಾಮಸ್ಥರು ತಮ್ಮ ಗ್ರಾಮದಲ್ಲಿ ರಸ್ತೆ ಇಲ್ಲದೇ ಕೊಚ್ಚೆ ಮತ್ತು ಗುಂಡಿಗಳಿಂದ ಕೂಡಿದ್ದ ರಸ್ತೆಗಳನ್ನು ತೋರಿಸಿ ಉತ್ತಮ ರಸ್ತೆಯನ್ನು ನಿರ್ಮಿಸಿಕೊಡುವಂತೆ ದೊಡ್ಡಾಘಟ್ಟ ಚಂದ್ರೇಶ್ ಅವರನ್ನು ವಿನಂತಿಸಿಕೊಂಡಿದ್ದರು. ಅಂದು ದೊಡ್ಡಾಘಟ್ಟ ಚಂದ್ರೇಶ್, ತಮ್ಮ ಸ್ವಂತ ಹಣದಿಂದಲೇ ಸಿಸಿ ರಸ್ತೆ ನಿರ್ಮಿಸಿಕೊಡುವ ಭರವಸೆಯನ್ನೂ ನೀಡಿದ್ದರು.

ಈ ಸಂದರ್ಭದಲ್ಲಿ ಗ್ರಾಮದ ಯುವ ಮುಖಂಡ ನವೀನ್ ಮಾತನಾಡಿ, ಕಳೆದ ನಲವತ್ತು ವರ್ಷಗಳಿಂದಲೂ ಯರದೇಹಳ್ಳಿ ಗ್ರಾಮಸ್ಥರು ಮೂಲಭೂತ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಯಾವುದೇ ಸೌಲಭ್ಯಗಳಿಲ್ಲದೇ ಬದುಕುತ್ತಿದ್ದೇವೆ. ಕಳೆದ ಬಾರಿ ಶಾಸಕರಾಗಿದ್ದ ಮಸಾಲಾ ಜಯರಾಮ್ ಅವರ ಕಾಲದಲ್ಲಿ ಸಿಸಿ ರಸ್ತೆಗೆ ಸರ್ಕಾರ ಅನುಮೋದನೆ ನೀಡಿತ್ತು. ಇನ್ನೇನು ಕಾಮಗಾರಿ ಪ್ರಾರಂಭ ಮಾಡಬೇಕು ಎನ್ನುವ ವೇಳೆಗೆ ರಾಜಕೀಯ ವೈಷಮ್ಯದಿಂದ ನಮ್ಮ ಗ್ರಾಮಕ್ಕೆ ಆಗಬೇಕಿದ್ದ ಸಿಸಿ ರಸ್ತೆಗೆ ಕಲ್ಲು ಬಿತ್ತು. ಹಲವಾರು ವರ್ಷಗಳ ಕಾಲದ ಕನಸು ಕನಸಾಗೇ ಉಳಿಯಿತು ಎಂದು ಹೇಳಿದರು.ಶಾಸಕ ಎಂ.ಟಿ.ಕೃಷ್ಣಪ್ಪನವರಿಗೆ ತಮ್ಮ ಗ್ರಾಮದ ಹೀನಸ್ಥಿತಿಯ ಬಗ್ಗೆ ವಿವರಿಸಿದರೂ ಸಹ ಪ್ರಯೋಜನವಾಗಿಲ್ಲ. ಈ ಸರ್ಕಾರದಲ್ಲಿ ಅಭಿವೃದ್ಧಿಗೆ ಹಣವೇ ಇಲ್ಲ ಎಂದು ಹೇಳುತ್ತಾರೆ. ಇದರಿಂದಾಗಿ ಗ್ರಾಮಸ್ಥರು ವಿಧಿ ಇಲ್ಲದೇ ದೊಡ್ಡಾಘಟ್ಟ ಚಂದ್ರೇಶ್ ರವರನ್ನು ವಿನಂತಿಸಿಕೊಂಡಿದ್ದರಿಂದ ಸುಮಾರು ಅವರು ಸುಮಾರು 20 ಲಕ್ಷ ರು.ಗಳ ತಮ್ಮ ವೈಯಕ್ತಿಕ ಹಣದಿಂದ ಸಿಸಿ ರಸ್ತೆ ಮಾಡಿಸುತ್ತಿದ್ದಾರೆಂದು ಹರ್ಷ ವ್ಯಕ್ತಪಡಿಸಿದರು.

ಗ್ರಾಮಸ್ಥರ ಗೌರವ ಸ್ವೀಕರಿಸಿ ಮಾತನಾಡಿದ ದೊಡ್ಡಾಘಟ್ಟ ಚಂದ್ರೇಶ್, ಈ ಸರ್ಕಾರದಲ್ಲಿ ಜನರಿಗೆ ಯಾವುದೇ ಅಭಿವೃದ್ಧಿ ಎಂಬುದು ಸಾಧ್ಯವಿಲ್ಲ. ರಾಜ್ಯ ಸರ್ಕಾರ ದಿವಾಳಿಯಾಗಿದೆ. ಕೇಂದ್ರ ಸರ್ಕಾರದಲ್ಲಿ ಉತ್ತಮ ಅಧಿಕಾರ ಹೊಂದಿರುವ ಎಚ್.ಡಿ.ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಕೇಂದ್ರ ಸರ್ಕಾರದಿಂದ ದೊರೆಯುವ ಸರ್ಕಾರಿ ಸವಲತ್ತುಗಳನ್ನು ತರಲು ಪ್ರಾಮಾಣಿಕವಾಗಿ ಪ್ರಯತ್ನಿಸುವೆ ಎಂದು ಅವರು ತಿಳಿಸಿದರು. ಈ ಸಂಧರ್ಭದಲ್ಲಿ ಗ್ರಾಮದ ಮುಖಂಡರಾದ ನಂದೀಶ್, ರಾಜು ಸೇರಿದಂತೆ ಹಲವರು ಇದ್ದರು. 4 ಟಿವಿಕೆ 1 – ತುರುವೇಕೆರೆ ತಾಲೂಕು ಯರದೇಹಳ್ಳಿಯಲ್ಲಿ ಸುಮಾರು 20 ಲಕ್ಷ ರೂ ವೆಚ್ಚದ ಸಿಸಿ ರಸ್ತೆಗೆ ದೊಡ್ಡಾಘಟ್ಟ ಚಂದ್ರೇಶ್ ಭೂಮಿ ಪೂಜೆ ನೆರವೇರಿಸಿದ ವೇಳೆ ಗ್ರಾಮಸ್ಥರು ಗೌರವ ನೀಡಿ ಸತ್ಕರಿಸಿದರು.

PREV

Recommended Stories

ಪಿಎಸ್‌ಐ 545 ಹುದ್ದೆಗಳ ನೇಮಕ ಆದೇಶಕ್ಕೆ ಕೆಎಟಿ ತಾತ್ಕಾಲಿಕ ತಡೆ
ಕನ್ನಡಿಗ ಪಾಟೀಲ್‌ಗೆ ಅಮೆರಿಕ ಎಐ ಕಂಪನಿಯ ಉನ್ನತ ಹುದ್ದೆ