ಹೊಳೆಕೊಪ್ಪ ಪ್ರೌಢಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣೆ
ಮನುಷ್ಯನ ಆರೋಗ್ಯ ಸುಸ್ಥಿತಿಯಲ್ಲಿರಬೇಕಾದರೆ ಆಹಾರ ಸೇವನಾ ಪದ್ಧತಿ ನಿಯಮಿತವಾಗಿರಬೇಕು. ಇಂದಿನ ಬದಲಾದ ಆಹಾರ ಪದ್ಧತಿ ,ಕಲಬೆರಕೆ ಆಹಾರ ಸೇವನೆಯಿಂದ ಆರೋಗ್ಯಗಲ್ಲಿ ಏರುಪೇರಾಗುತ್ತಿದೆ. ಬದಲಾದ ಆಹಾರ ಪದ್ಧತಿ ಅನಾರೋಗ್ಯಕ್ಕೆ ಮೂಲ ಕಾರಣ ಎಂದು ಶೃಂಗೇರಿ ಶ್ರೀ ಶಾರದಾ ಆಯುರ್ವೇದ ಧನ್ವಂತರಿ ಆಸ್ಪತ್ರೆ ಡಾ.ಸುಹಾಸ್ ಹೇಳಿದರು.
ತಾಲೂಕಿನ ಹೊಳೆಕೊಪ್ಪ ಪ್ರೌಢಶಾಲಾವರಣದಲ್ಲಿ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಆಹಾರ ಮತ್ತು ಪೌಷ್ಠಿಕಾಂಶಗಳ ಬಗ್ಗೆ ಉಪನ್ಯಾಸ ನೀಡಿದರು.ಕಲಬೆರಕೆ ಆಹಾರ ವಿಷಯುಕ್ತ ಆಹಾರದಂತೆ, ಇದು ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದರು.ನಾವು ಸೇವಿಸುವ ಆಹಾರ ಪೌಷ್ಠಿಕಾಂಶಯುಕ್ತವಾಗಿರಬೇಕು. ಪೌಷ್ಠಿಕಾಂಶವುಳ್ಳ ಬೇಳೆ ಕಾಳುಗಳು, ಸೊಪ್ಪು ತರಕಾರಿಗಳು, ಹಣ್ಣು ಹಂಪಲುಗಳನ್ನು ಹೆಚ್ಚು ಸೇವಿಸಬೇಕು. ಇವುಗಳು ಆರೋಗ್ಯ ಕಾಪಾಡಿಕೊಳ್ಳಲು ಉಪಯುಕ್ತ. ಯುವಜನತೆ ಇಂದು ಫಾಸ್ಟ್ ಫುಡ್ ನ್ನು ಹೆಚ್ಚಾಗಿ ಉಪಯೋಗಿಸುತ್ತಿದ್ದಾರೆ. ಇದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಆರೋಗ್ಯ ಸಮಸ್ಯೆ ಕಾಡಿದಾಗ ನಿರ್ಲಕ್ಷ್ಯ ಮಾಡದೇ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಚಿಕಿತ್ಸೆ ಪಡೆಯಿರಿ ಎಂದರು.ಹಳೆ ವಿದ್ಯಾರ್ಥಿ ಸಂಘದ ಆದರ್ಶ ಮಾತನಾಡಿ ಪ್ರಾಚೀನ ಆಯುರ್ವೇದ ಚಿಕಿತ್ಸಾ ಪದ್ಧತಿ ಇಂದಿಗೂ ಮುಂದುವರಿದು ಕೊಂಡು ಬಂದಿದೆ. ಈ ಪದ್ಧತಿ ಉಳಿಸಿ ಮುಂದಿನ ಪೀಳಿಗೆಗೂ ಮುಂದುವರಿಸಿಕೊಂಡು ಹೋಗಲು ಪ್ರಯತ್ನಿಸಿ ಎಂದರು.
ಶಾಲಾಭಿವೃದ್ಧಿ ಸಮಿತಿಯ ಅಶೋಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಚಂದನ್, ಅವಿನಾಶ್, ಶಶಾಂಕ್ ಮತ್ತಿತರರು ಉಪಸ್ಥಿತರಿದ್ದರು.19 ಶ್ರೀ ಚಿತ್ರ 1-
ಶೃಂಗೇರಿ ತಾಲೂಕಿನ ಹೊಳೆಕೊಪ್ಪದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಡಾ.ಎಚ್.ಜಿ.ಸುಹಾಸ್ ಮಾತನಾಡಿದರು.