
ಶ್ರೀಮಂಗಲ: ವಿವಿಧ ಸಂಸ್ಥೆಗಳಿಗೆ ವೇದಿಕೆ ನೀಡಿ ಕಲಾವಿದರ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ನೀಡುವುದರೊಂದಿಗೆ ಮುಂದಿನ ಪೀಳಿಗೆಗೆ ಕೊಡವ ಸಂಸ್ಕೃತಿಯನ್ನು ಕಲಿಸುವ ಮಹತ್ತರ ಕಾರ್ಯವನ್ನು ಮಾಡುತ್ತಿರುವ ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದ ಈ ಕಾರ್ಯ ಶ್ಲಾಘನೀಯ ಎಂದು ಬೆಳೆಗಾರ ಕೇಚಮಡ ವಾಸು ಉತ್ತಪ್ಪ ಮೆಚ್ಚುಗೆಯ ನುಡಿಯನ್ನಾಡಿದರು.
ಮತ್ತೋರ್ವ ಅತಿಥಿ ತೀತೀರ ಪ್ರಭು ಸುಬ್ಬಯ್ಯ ಮಾತನಾಡಿ, ಇತಿಹಾಸವನ್ನು ಕೈಮಡ, ಐನ್''''''''''''''''ಮನೆ, ಕಲ್ಲಿನ ಶಾಸನಗಳು, ತಾಮ್ರಪತ್ರ ಇತ್ಯಾದಿಗಳನ್ನು ಪರಿಶೀಲಿಸುವುದರೊಂದಿಗೆ ದೀರ್ಘ ಅಧ್ಯಯನ ಮಾಡಿ ತಿಳಿದುಕೊಳ್ಳಬಹುದು. ಕೊಡವರ ಆಹಾರ ಪದ್ಧತಿ ಹಾಗೂ ಜಾನಪದ ಕಲೆ, ಸಂಸ್ಕೃತಿ ಪ್ರಪಂಚ ಮೆಚ್ಚುವಂತದ್ದು, ಇದನ್ನೆಲ್ಲಾ ಪ್ರದರ್ಶಿಸಲು ವೇದಿಕೆ ನೀಡುತ್ತಿರುವ ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದ ಚಂಗ್ರಾಂದಿ ಪತ್ತಲೋದಿ ಕಾರ್ಯಕ್ರಮಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಹೇಳಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಅತಿಥಿಗಳಾದ ಕೊಡವ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಚೊಟ್ಟೆಯಂಡ ಸಂಜು ಕಾವೇರಪ್ಪ, ಕೊಂಡಿಂಜಮ್ಮನ ಬಾಲಕೃಷ್ಣ, ಮೊಳ್ಳಕುಟ್ಟಡ ದಿನು ಬೋಜಣ್ಣ, ನಾಯಂದಿರ ಶಿವಾಜಿ, ಕೋಟ್ರಮಡ ಮಂಜು ಅಯ್ಯಪ್ಪ, ಕಾವೇರಿ ಕಾಲೇಜಿನ ಉಪನ್ಯಾಸಕಿ ಮಚ್ಚಮಾಡ ರೀತಿಯ ಉತ್ತಪ್ಪ, ಕೇಚಮಡ ಬೀನ ಉತ್ತಪ್ಪ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಈ ಸಂದರ್ಭ ನಡೆದ ಅಡುಗೆ ಪೈಪೋಟಿಯಲ್ಲಿ ಬಾಳೆನುರ್ಕ್ ಮಾಡುವ ಸ್ಪರ್ಧೆಯಲ್ಲಿ ಚೆಟ್ಟಂಗಡ ಪಿಂಕಿ ವಸಂತ್ ಪ್ರಥಮ, ಮಚ್ಚಮಾಡ ಕವಿತ ಸತೀಶ್ ದ್ವಿತೀಯ, ಬಾಚೀರ ಶೈಲ ಹಾಗೂ ಕೋಟ್ರಮಡ ನಿಶ ತೃತೀಯ ಸ್ಥಾನ ಪಡೆದರೆ ಕೋಡುಬಳೆ ಮಾಡುವ ಸ್ಪರ್ಧೆಯಲ್ಲಿ ಕಾಳಿಮಾಡ ಬೀನ ಪ್ರಥಮ, ಕಾಳಿಮಾಡ ಸೀಮ ದ್ವಿತೀಯ ಹಾಗೂ ಮಲ್ಲಮಡ ಶ್ಯಾಮಲ ತೃತೀಯ ಬಹುಮಾನ ಪಡೆದರು.
ಗೋಣಿಕೊಪ್ಪ ಕಾವೇರಿ ಕಾಲೇಜು ವಿದ್ಯಾರ್ಥಿಗಳ ‘ಕೊಡವ ಜಾನಪದ ಚಂಗ್ರಾಂದಿರ ಬೋಜ’ ಎಂಬ ನ್ರತ್ಯರೂಪಕ ಜನಮನ ಗೆದ್ದಿತು.ಕಾರ್ಯಕ್ರಮದ ಆರಂಭದಲ್ಲಿ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಸದಸ್ಯೆ ಚಟ್ಟಂಡ ರಶ್ಮಿ ಪ್ರಾರ್ಥಿಸಿದರು. ಕೊಡವ ಸಮಾಜದ ಕಾರ್ಯದರ್ಶಿ ಕೋಟ್ರಮಡ ಸುಮಂತ್ ಮಾದಪ್ಪ ಸ್ವಾಗತಿಸಿದರು. ಸಾಂಸ್ಕೃತಿಕ ಸಂಚಾಲಕ ಚೆಟ್ಟಂಗಡ ರವಿ ಸುಬ್ಬಯ್ಯ ನಿರೂಪಿಸಿದರು. ನಿರ್ದೇಶಕಿ ಚಂಗುಲಂಡ ಅಶ್ವಿನಿ ವಂದಿಸಿದರು.ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದ ಖಜಾಂಚಿ ಚಂಗುಲಂಡ ಸತೀಶ್, ಸಹ ಕಾರ್ಯದರ್ಶಿ ಬಾದುಮಂಡ ವಿಷ್ಣು ಕಾರ್ಯಪ್ಪ, ಕ್ರೀಡಾ ಕಾರ್ಯದರ್ಶಿ ತಡಿಯಂಗಡ ಶಮ್ಮಿ ಸುಬ್ಬಯ್ಯ, ನಿರ್ದೇಶಕರಾದ ತೀತೀರ ಅನಿತ ಸುಬ್ಬಯ್ಯ, ಕೋಟ್ರಮಡ ರೇಶ್ಮ ಕಾರ್ಯಪ್ಪ, ಮಾಣೀರ ದೀಪಕ್ ಕಾರ್ಯಕ್ರಮ ನಿರ್ವಹಿಸಿದರು.