ಚನ್ನಮ್ಮ ಭಾರತೀಯ ಮಹಿಳೆಯರ ಕೆಚ್ಚಿನ ಪ್ರತೀಕ: ಶ್ರೀಶೈಲ ದಲಾಲ

KannadaprabhaNewsNetwork |  
Published : Oct 24, 2024, 12:53 AM IST
ಭಾರತೀಯ ಮಹಿಳೆಯರ ಕೆಚ್ಚಿನ ಪ್ರತೀಕ ರಾಣಿ ಚೆನ್ನಮ್ಮಾಜಿ : ಶ್ರೀಶಯಳ ದಲಾಲ. | Kannada Prabha

ಸಾರಾಂಶ

ಚನ್ನಮ್ಮ ಹೋರಾಟದ ಕತೆ ತಿಳಿಸುವುದರ ಜೊತೆಗೆ ಅವರಲ್ಲಿ ಆತ್ಮಸ್ಥೈರ್ಯ ತುಂಬಬೇಕು. ಇಂಥ ಮಹಾನ್ ಮಹಿಳೆ ಚನ್ನಮ್ಮ ನಮ್ಮ ನಾಡಿನ ಮಹಿಳೆ ಎಂಬುದು ಹೆಮ್ಮೆಯ ಸಂಗತಿ

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಭಾರತೀಯ ಮಹಿಳೆಯರ ಕೆಚ್ಚಿನ ಪ್ರತೀಕವಾಗಿರುವ ರಾಣಿ ಚನ್ನಮ್ಮ, ಸ್ವಾಭಿಮಾನದ ಹೆಗ್ಗುರುತಾಗಿ ಭಾರತದ ಸ್ವಾತಂತ್ರ‍್ಯ ಹೋರಾಟದಲ್ಲಿನ ಪಾತ್ರ ಮಹತ್ವದ್ದಾಗಿದೆ. ಸಮಾಜಕ್ಕೆ ಆದರ್ಶರಾದವರು ನಮಗೆಲ್ಲರಿಗೂ ಮಾದರಿಯಾಗಬೇಕು ಎಂದು ರಬಕವಿ-ಬನಹಟ್ಟಿ ತಾಲೂಕು ಪಂಚಮಸಾಲಿ ಅಧ್ಯಕ್ಷ ಶ್ರೀಶೈಲ ದಲಾಲ ತಿಳಿಸಿದರು.

ಬುಧವಾರ ಬನಹಟ್ಟಿ ಬಸ್ ನಿಲ್ದಾಣದ ಹತ್ತಿರದ ಚನ್ಮಮ್ಮ ವೃತ್ತದ ಬಳಿ ಪೂಜೆ ಸಲ್ಲಿಸಿ ಮಾತನಾಡಿದರು. ಸಮಾಜದ ಮತ್ತೊರ್ವ ಮುಖಂಡ ವಿದ್ಯಾಧರ ಸವದಿ ಮಾತನಾಡಿ, ಇಂದಿನ ಯುವ ಜನತೆಗೆ ಸ್ವಾತಂತ್ರ‍್ಯದ ಮಹತ್ವ ಹೇಳಬೇಕು. ಚನ್ನಮ್ಮ ಹೋರಾಟದ ಕತೆ ತಿಳಿಸುವುದರ ಜೊತೆಗೆ ಅವರಲ್ಲಿ ಆತ್ಮಸ್ಥೈರ್ಯ ತುಂಬಬೇಕು. ಇಂಥ ಮಹಾನ್ ಮಹಿಳೆ ಚನ್ನಮ್ಮ ನಮ್ಮ ನಾಡಿನ ಮಹಿಳೆ ಎಂಬುದು ಹೆಮ್ಮೆಯ ಸಂಗತಿಯಾಗಿದೆ ಎಂದು ಎಂದರು.

ಮಹಾಪುರುಷರು ನಾಡಿನ ಆಸ್ತಿಗಳು, ಅವರು ಯಾವುದೇ ಜಾತಿ ಪಂಗಡಕ್ಕೆ ಸೀಮಿತವಾಗಿಲ್ಲ. ಆದರೂ ಇತ್ತಿಚಿಗೆ ಸಮಾಜಗಳು ಅವರು ತಮ್ಮವರು ಎಂದು ಗುರುತಿಸಿಕೊಳ್ಳುತ್ತಿದ್ದಾರೆ. ವೈಯಕ್ತಿಕ ಸ್ವಾರ್ಥ ಬಿಟ್ಟು ಮಹಾಪುರುಷರ ನಡೆಯಂತೆ ನಡೆಯಬೇಕು. ಅವರ ಆದರ್ಶ ನಮಗೆಲ್ಲರಿಗೆ ಮಾದರಿಯಾಗಲಿ ಎಂದು ಸವದಿ ಹೇಳಿದರು.

ವಿಜಯಪೂರ-ಬಾಗಲಕೋಟೆ ಹಾಲು ಒಕ್ಕೂಟದ ನಿರ್ದೇಶಕರಾದ ಲಕ್ಕಪ್ಪ ಪಾಟೀಲ, ಸಿದ್ದನಗೌಡ ಪಾಟೀಲ, ಮಲ್ಲಪ್ಪ ಜನವಾಡ, ಬಾಬಾಗೌಡ ಪಾಟೀಲ, ಗೌರಿ ಮಿಳ್ಳಿ, ಬಾಲಚಂದ್ರ ನಂದೆಪ್ಪನವರ, ಧರೆಪ್ಪ ಉಳ್ಳಾಗಡ್ಡಿ, ಸುರೇಶ ಮುಳವಾಡ, ಪ್ರಕಾಶ ಮೂಡಲಗಿ, ವಿನಾಯಕ ಶೇಗುಣಸಿ, ರಾಜು ದಾಲಾಲ, ಈರಪ್ಪ ಸಂಪಗಾಂವಿ, ಶಂಕರ ಪಾಲಬಾಂವಿ, ಮಹಾದೇವ ಪಾಲಬಾಂವಿ, ಮಹಾದೇವ ದೂಪದಾಳ, ಸಿದ್ದು ಗೌಡಪ್ಪನವರ, ಭೀಮಸಿ ಪಾಟೀಲ, ರವಿ ಸಂಪಗಾಂವಿ, ಈಶ್ವರ ಬಿರಾದಾರಪಾಟೀಲ, ರಾಜುಗೌಡ ಪಾಟೀಲ, ಮಲಕಪ್ಪ ಪಾಟೀಲ, ಭೀಮಸಿ ಹಂದಿಗುಂದ, ರವೀಂದ್ರ ಹುಕ್ಕೇರಿ, ಕಿರಣ ಪಾಟೀಲ, ಬಸವರಾಜ ಬೆಳಗಲಿ, ಆರ್. ಕೆ. ಪಾಟೀಲ, ಸಿದ್ದು ಪಾಟೀಲ, ಶಶಿಕಾಂತ ಪಾಟೀಲ, ಗುಂಡು ಪಾಟೀಲ ಅನೇಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!