ಪ್ರಜಾಪಾಲನೆಯಲ್ಲಿ ಚನ್ನಮ್ಮ ರೋಲ್‌ ಮಾಡೆಲ್‌

KannadaprabhaNewsNetwork |  
Published : Oct 25, 2025, 01:02 AM IST
ಚನ್ನಮ್ಮ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳಸ್ವಾತಂತ್ರ್ಯದ ಕಿಚ್ಚು ಹಚ್ಚಿದ ಧೀರ ಮಹಿಳೆ ಚನ್ನಮ್ಮ. ದೇಶದ ಜನ ತಾವಿರುವ ಪ್ರದೇಶದಲ್ಲಿ ಗೌರವದಿಂದ ಬದುಕಬೇಕಾದರೇ ಸ್ವಾತಂತ್ರ್ಯ ಬಹಳ ಮುಖ್ಯ ಎಂದು ಅವರು ಚೆನ್ನಾಗಿ ತಿಳಿದಿದ್ದರು. ಉತ್ತಮ ಆಡಳಿತಕ್ಕೆ ಕಿತ್ತೂರು ರಾಣಿ ಚನ್ನಮ್ಮ ಹೆಸರಾಗಿದ್ದರು. ಜೊತೆಗೆ ಪ್ರಜಾಪಾಲನೆಯಲ್ಲಿ ಇತರೆ ಮಹಾರಾಣಿಯರಿಗೆ ಅವರು ರೋಲ್ ಮಾಡೆಲ್ ಆಗಿದ್ದರು ಎಂದು ಲಿಂಗಾಯತ ಪಂಚಮಸಾಲಿ ಸಮಾಜದ ಅಧ್ಯಕ್ಷ ಅಮರೇಶ ಗೂಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಸ್ವಾತಂತ್ರ್ಯದ ಕಿಚ್ಚು ಹಚ್ಚಿದ ಧೀರ ಮಹಿಳೆ ಚನ್ನಮ್ಮ. ದೇಶದ ಜನ ತಾವಿರುವ ಪ್ರದೇಶದಲ್ಲಿ ಗೌರವದಿಂದ ಬದುಕಬೇಕಾದರೇ ಸ್ವಾತಂತ್ರ್ಯ ಬಹಳ ಮುಖ್ಯ ಎಂದು ಅವರು ಚೆನ್ನಾಗಿ ತಿಳಿದಿದ್ದರು. ಉತ್ತಮ ಆಡಳಿತಕ್ಕೆ ಕಿತ್ತೂರು ರಾಣಿ ಚನ್ನಮ್ಮ ಹೆಸರಾಗಿದ್ದರು. ಜೊತೆಗೆ ಪ್ರಜಾಪಾಲನೆಯಲ್ಲಿ ಇತರೆ ಮಹಾರಾಣಿಯರಿಗೆ ಅವರು ರೋಲ್ ಮಾಡೆಲ್ ಆಗಿದ್ದರು ಎಂದು ಲಿಂಗಾಯತ ಪಂಚಮಸಾಲಿ ಸಮಾಜದ ಅಧ್ಯಕ್ಷ ಅಮರೇಶ ಗೂಳಿ ಹೇಳಿದರು.

ತಾಲೂಕು ಪಂಚಮಸಾಲಿ ಸಮಾಜ ಹಾಗೂ ತಾಲೂಕು ಆಡಳಿತ ಗುರುವಾರ ಹಮ್ಮಿಕೊಂಡಿದ್ದ ಕಿತ್ತೂರು ರಾಣಿ ಚನ್ನಮ್ಮ 247ನೇ ಜಯಂತ್ಯುತ್ಸವ ಹಾಗೂ 202ನೇ ವಿಜಯೋತ್ಸವದಲ್ಲಿ ಚನ್ನಮ್ಮಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ರಾಣಿ ಚನ್ನಮ್ಮ ವಚನ ಶಾಸ್ತ್ರ ಸೇರಿದಂತೆ ರಾಮಾಯಣ ಮತ್ತು ಮಹಾಭಾರತ ಮಹಾಕಾವ್ಯಗಳನ್ನು ಓದಿ ತಿಳಿದುಕೊಂಡಿದ್ದರು. ಮಾತೃಭಾಷೆಯ ಜೊತೆಗೆ ಇತರೆ ಭಾಷೆಗಳಲ್ಲಿಯೂ ಪರಿಣಿತಿ ಹೊಂದಿದ್ದರು. ಅಂದು ಬ್ರಿಟೀಷ್‌ ಸರ್ಕಾರ ಜಾರಿಗೊಳಿಸಿದ್ದ ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ಕಾಯ್ದೆಯನ್ನು ವಿರೋಧಿಸಿದ್ದ ಚನ್ನಮ್ಮ ಬ್ರಿಟೀಷರಿಗೆ ಸಲ್ಲಿಸಬೇಕಾಗಿದ್ದ ಕಪ್ಪ ಕಾಣಿಕೆ ಕೊಡುವುದನ್ನು ನಿರಾಕರಿಸಿದ್ದಳು ಎಂದು ಹೇಳಿದರು.

ತಹಸೀಲ್ದಾರ್‌ ಕೀರ್ತಿ ಚಾಲಕ, ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ಶಿವಶಂಕರಗೌಡ ಹಿರೇಗೌಡರ, ತಾಲೂಕು ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ಬಸಲಿಂಗಪ್ಪ ರಕ್ಕಸಗಿ, ಶ್ರೀಶೈಲ ದೊಡಮನಿ, ಕುಮಾರ ಸೂಳಿಭಾವಿ, ತಾಲೂಕು ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಗುರು ತಾರನಾಳ, ಪುರಸಭೆ ಅಧ್ಯಕ್ಷ ಮೈಬೂಬು ಗೊಳಸಂಗಿ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಎಂ.ಎಂ.ಬೆಳಗಲ್ಲ, ಪ್ರಭುಗೌಡ ಪಾಟೀಲ, ಶರಣು ಸಾಲವಾಡಗಿ, ಮುರಿಗೆಪ್ಪ ಹಡಲಗೇರಿ, ಪರುಶುರಾಮ ಢವಳಗಿ, ಅನೀಲಗೌಡ ಪಾಟೀಲ, ದಾನಪ್ಪ ಅಂಗಡಿ, ಗುರಲಿಂಗಪ್ಪಗೌಡ ಪಾಟೀಲ, ಗುರುಸಂಗಪ್ಪ ಅಂಗಡಿ, ಕಲ್ಲಣ್ಣ ಪ್ಯಾಟಿ, ಬಸವರಾಜ ಗೋನಾಳ, ಸಂಗಣ್ಣ ಹಾರಿವಾಳ, ಸಂಗಣ್ಣ ಕತ್ತಿ, ಸುರೇಶ ಕಮತ, ಮಲ್ಲು ಕತ್ತಿ, ಮಲ್ಲು ಬಿಳೇಭಾವಿ, ರವಿ ಅಮರಣ್ಣವರ, ಪುರಸಭೆ ಉಪಾಧ್ಯಕ್ಷೆ ಪ್ರೀತಿ ದೇಗಿನಾಳ, ಸದಸ್ಯೆ ಸಂಗಮ್ಮ ದೇವರಳ್ಳಿ, ಅಶ್ವೀನ ಬಿರಾದಾರ, ಉದಯ ರಾಯಚೂರ, ಗೋಪಿ ಮಡಿವಾಳರ ಸೇರಿದಂತೆ ಹಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ