ಬ್ರಿಟಿಷರ ವಿರುದ್ಧ ಮೊದಲ ಯುದ್ಧದಲ್ಲಿ ಚನ್ನಮ್ಮ ಅದ್ಭುತ ಗೆಲುವು

KannadaprabhaNewsNetwork |  
Published : Oct 24, 2024, 12:43 AM IST
ವಿಧಾನ ಪರಿಷತ್ ಶಾಸಕರಾದ ಪಿಎಚ್ ಪೂಜಾರ ಇವರ ಜನಸಂಪರ್ಕ ಕಾರ್ಯಾಲಯದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮ ನವರ ಜಯಂತಿ | Kannada Prabha

ಸಾರಾಂಶ

ಬಾಗಲಕೋಟೆ ವಿಧಾನ ಪರಿಷತ್ ಸದಸ್ಯ ಪಿಎಚ್ ಪೂಜಾರ ಜನಸಂಪರ್ಕ ಕಾರ್ಯಾಲಯದಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮ ಜಯಂತಿ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬ್ರಿಟಿಷರ ವಿರುದ್ಧ ಮೊದಲನೇ ಯುದ್ಧದಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮ ಗೆಲುವು ಸಾಧಿಸಲಿಕ್ಕೆ ಅವರ ವೀರಸೇನಾನಿಗಳಾದ ಸಂಗೊಳ್ಳಿ ರಾಯಣ್ಣ, ಅಮಟೂರು ಬಾಳಪ್ಪ, ಸರ್ಧಾರ್ ಅವರಾದಿ, ಚನ್ನಬಸಪ್ಪ, ಹಾಗೂ ಇನ್ನೂ ಅನೇಕ ವೀರ ಯೋಧರು ಹೋರಾಟವೇ ಕಾರಣ ಎಂದು ಮುಖಂಡರಾದ ಶೇಖರ್ ಮಾನೆ ಹೇಳಿದರು.

ಬಾಗಲಕೋಟೆ ವಿಧಾನ ಪರಿಷತ್ ಸದಸ್ಯ ಪಿಎಚ್ ಪೂಜಾರ ಜನಸಂಪರ್ಕ ಕಾರ್ಯಾಲಯದಲ್ಲಿ ನಡೆದ ವೀರರಾಣಿ ಕಿತ್ತೂರು ಚನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಲಾಯಿತು.ಎರಡನೇ ಯುದ್ಧದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಸೋಲಲು ಅವರ ಸೈನ್ಯದ ಸೋಲಿಗೆ ಅವರ ಹಿತ ಶತ್ರುಗಳೇ ಕಾರಣರಾಗಿದ್ದು ದುರ್ದೈವದ ಸಂಗತಿ. ಇದೇ ರೀತಿ ಇವತ್ತಿನ ಕಾಲಮಾನದಲ್ಲಿ ಜಾತಿ ಜಾತಿಗಳಲ್ಲಿ ನಾವು ಹೊಡೆದಾಡಿಕೊಳ್ಳುತ್ತಾ ಇದ್ದಲ್ಲಿ ರಾಷ್ಟ್ರದ ರಕ್ಷಣೆ ಮತ್ತು ಹಿಂದೂ ಧರ್ಮದ ರಕ್ಷಣೆ ಅಸಾಧ್ಯ. ಆದಕಾರಣ ಜಾತಿ ಜಾತಿ ಮರೆತು ನಾವೆಲ್ಲರೂ ಹಿಂದೂ ಎನ್ನುವ ಭಾವನೆ ನಮ್ಮೆಲ್ಲರಲ್ಲಿ ಮೂಡಬೇಕೆಂದು ಮಾನೆ ಕರೆ ನೀಡಿದರು.

ವಿರುಪಾಕ್ಷ ಅಮ್ರುತಕರ ಮಾತನಾಡಿ, ಸೂರ್ಯ ಮುಳುಗದ ಬ್ರಿಟಿಷ ಸಾಮ್ರಾಜ್ಯಕ್ಕೆ ಸವಾಲ ಎಸೆದು ಬ್ರಿಟಿಷರ ವಿರುದ್ಧದ ಯುದ್ಧದಲ್ಲಿ ರಣಚಂಡಿ ಅವತಾರದ ಪ್ರತೀಕವಾಗಿ ಬ್ರಿಟಿಷ್ ಅಧಿಕಾರಿ ಮತ್ತು ಸೈನಿಕರ ರುಂಡ ಮುಂಡ ಚಂಡಾಡಿ ವಿಜಯ ದುಂದುಬಿಯೊಂದಿಗೆ ದಿಟ್ಟತನಕ್ಕೆ ಹೋರಾಟಕ್ಕೆ ಮತ್ತೊಂದು ಹೆಸರೇ ವೀರರಾಣಿ ಕಿತ್ತೂರು ಚನ್ನಮ್ಮ ಎಂದರು.

ಈ ಸಂದರ್ಭದಲ್ಲಿ ಶಂಭುಗೌಡ ಪಾಟೀಲ್, ಕುಮಾರ ಗಿರಿಜಾ, ರಾಜು ಚಿತ್ತವಾಡಗಿ ಸುರಪುರ, ಕಳಕಪ್ಪ ಬಾದವಾಡಗಿ, ಸಂಗನಗೌಡ ಗೌಡರ, ರಮೇಶ ಮುರಟಗಿ, ಯಲ್ಲಪ್ಪ ಅಂಬಿಗೇರ, ಶೈಲು ಅಂಗಡಿ, ಅನಂತ ಮಳಗಿ, ವಿನಾಯಕ ದೇಸಾಯಿ, ರಾಘು ನಾಗೂರ, ಲಕ್ಷ್ಮಣಗೌಡ ಪಾಟೀಲ, ಬಸವರಾಜ ಮಾದರ್, ಗುರುಬಸಯ್ಯ ಪೂಜಾರಿ, ಗಣೇಶ್ ದುದ್ದಾನೆ, ಡಾಕ್ಟರ್ ಸುಧೀರ ಜಾಧವ, ಡಾಕ್ಟರ್ ಕೃಷ್ಣ ಚೌಧರಿ ,ಯಮನಪ್ಪ ಮಡ್ಡಿಕೇರಿ, ಮುತ್ತಪ್ಪ ಪೂಜಾರಿ ಆರ್ ಆರ್ ಪಾಟೀಲ್, ವಿರೂಪಾಕ್ಷ ಬೆನ್ನಾಳ, ಗೋಪಾಲ್ ಕಟ್ಟಿಮನಿ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಗರದ 75 ಜಂಕ್ಷನ್‌ ಅಭಿವೃದ್ಧಿಗೆ ಗ್ರಹಣ!
ಎಚ್‌ಎಎಲ್‌ ಮತ್ತೆ ಸಾರ್ವಜನಿಕ ಬಳಕೆ ಪ್ರಸ್ತಾಪ ಪರಿಶೀಲನೆ:ಸಚಿವ