- ಎಲ್ಲದಕ್ಕೂ ಮೂಲ ಮನಸ್ಸು: ಡಾ. ಶಿವಮೂರ್ತಿ ಶಿವಾಚಾರ್ಯರು । ವಿಶ್ವ ಯೋಗ ದಿನಾಚರಣೆ ಅಂಗವಾಗಿ ಯೋಗಾಸನ ಪ್ರದರ್ಶನ - - - ಕನ್ನಡಪ್ರಭ ವಾರ್ತೆ, ದಾವಣಗೆರೆ
ಮನಸ್ಸು ಹತೋಟಿಯಲ್ಲಿದ್ದರೆ ಸಂತೋಷವಾಗಿರಲು ಸಾಧ್ಯವಿದೆ. ಮನಸ್ಸು ನಿಯಂತ್ರಣದಲ್ಲಿಡುವುದೇ ಯೋಗದ ಉದ್ದೇಶ ಎಂದು ಸಿರಿಗೆರೆ ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ನುಡಿದರು.ನಗರದ ಹೈಸ್ಕೂಲ್ ಮೈದಾನದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆಯುಷ್ ಇಲಾಖೆ, ಪಾಲಿಕೆ, ಜಿಲ್ಲಾ ಯೋಗ ಒಕ್ಕೂಟ, ಪ್ರಜಾಪಿತ ಬ್ರಹ್ಮಕುಮಾರಿ ಸಂಸ್ಥೆ, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ 10ನೇ ಅಂತರ ರಾಷ್ಟ್ರೀಯ ಯೋಗ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ಬಂಧನಕ್ಕೂ, ಮುಕ್ತಿಗೂ ಮನಸ್ಸೇ ಮೂಲ ಕಾರಣವಾಗಿದೆ ಎಂದರು.
ಮನುಷ್ಯನ ಮನಸ್ಸೆಂಬುದು ನೀರಿದ್ದಂತೆ. ಸಾಗರದಲ್ಲಿ ಕಲ್ಲು ಎಸೆದೆರೆ ತರಂಗಗಳು ಉಂಟಾಗುವಂತೆ ದೈನಂದಿನ ಜೀವನದಲ್ಲಿ ಕಷ್ಟಗಳು ಕಾಡುತ್ತವೆ. ಅವುಗಳನ್ನೆಲ್ಲ ನಿಭಾಯಿಸಬೇಕು. ಅದಕ್ಕೆ ಸದೃಢ ಮನಸ್ಸು ಬೇಕು. ಮನಸ್ಸನ್ನು ಸದೃಢವಾಗಿಡಲು ಯೋಗಾಭ್ಯಾಸವು ಅತಿ ಮುಖ್ಯ. ಪ್ರತಿಯೊಬ್ಬರೂ ನಿತ್ಯ ಯೋಗ, ಧ್ಯಾನ, ಪ್ರಾರ್ಥನೆ ಮಾಡುವ ಮೂಲಕ ದೈಹಿಕ, ಮಾನಸಿಕವಾಗಿ ಸದೃಢರಾಗಬೇಕು ಎಂದು ಸಲಹೆ ನೀಡಿದರು.ಪ್ರಸ್ತುತ ಮೊಬೈಲ್ ವ್ಯಾಮೋಹದಿಂದಾಗಿಯೇ ಹಲವಾರು ಯುವ ದಂಪತಿಗಳು ಅನೇಕ ಸಮಸ್ಯೆ ಎದುರಿಸುತ್ತಿದ್ದಾರೆ. ಕೌಟುಂಬಿಕ ಜೀವನದಲ್ಲಿ ದೊಡ್ಡ ಕೋಲಾಹಲಕ್ಕೂ ಮೊಬೈಲ್‌ಗಳು ಕಾರಣವಾಗುತ್ತಿವೆ. ಆದರೆ, ದೋಷ ಇರುವುದು ಮನಸ್ಸಿನಲ್ಲೇ ಹೊರತು, ಮೊಬೈಲ್‌ನಲ್ಲಿ ಅಲ್ಲ. ಎಲ್ಲದಕ್ಕೂ ಮೂಲ ಮನಸ್ಸು. ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಕೆಲಸ ಆಗಬೇಕು. ಆದ್ದರಿಂದ ಯೋಗದ ಮಹತ್ವ ಪ್ರತಿಯೊಬ್ಬರೂ ಅರಿತು ರೂಢಿಸಿಕೊಳ್ಳಬೇಕು ಎಂದು ಸ್ವಾಮೀಜಿ ಹೇಳಿದರು.
ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ ಮಾತನಾಡಿ, ನಮ್ಮ ಋಷಿ ಮುನಿಗಳು, ಗುರುಗಳು, ಸಾಧಕರು, ಪೂರ್ವಿಕರಿಂದ ಬಳುವಳಿಯಾಗಿ ಯೋಗ ಬಂದಿದೆ. ಸಾವಿರಾರು ವರ್ಷಗಳ ಇತಿಹಾಸ, ಹಿನ್ನೆಲೆ, ಮಹತ್ವ ಯೋಗಕ್ಕಿದೆ. ಭಾರತದಲ್ಲಿ ರೂಪುಪಡೆದ ಯೋಗ ಇಂದು ವಿಶ್ವಾದ್ಯಂತ 195 ದೇಶಗಳಲ್ಲಿ ವ್ಯಾಪಿಸಿದೆ. ಮಾನವ ಕುಲಕ್ಕೆ, ಈಗಿನ ಯುವ ಪೀಳಿಗೆಗೆ ಪೂರ್ವಜರು ನೀಡಿರುವ ಅಮೂಲ್ಯ ಕೊಡುಗೆ ಯೋಗ ಎಂದರು.ವೈದ್ಯ ಶ್ರೀ ಚನ್ನಬಸವಣ್ಣ ಸ್ವಾಮೀಜಿ ಅವರು ಯೋಗದ ಮಹತ್ವ ತಿಳಿಸುವ ಮೂಲಕ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ, ಜಿಪಂ ಸಿಇಒ ಸುರೇಶ ಬಿ. ಇಟ್ನಾಳ್, ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ, ಯೋಗ ಒಕ್ಕೂಟದ ಬಿ.ಸಿ.ಉಮಾಪತಿ, ವಾಸುದೇವ ರಾಯ್ಕರ್, ತಹಸೀಲ್ದಾರ್ ಡಾ.ಅಶ್ವಥ್, ಪಾಲಿಕೆ ಆಯುಕ್ತೆ ರೇಣುಕಾ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಷಣ್ಮುಖಪ್ಪ, ಬಾದಾಮಿ ಜಯಣ್ಣ, ರಾಜು ಬದ್ದಿ, ಡಾ.ಚಂದ್ರಶೇಖರ ಸುಂಕದ್, ಪರಶುರಾಮ, ಬಾತಿ ಶಂಕರ, ತೀರ್ಥರಾಜ ಇತರರು ಇದ್ದರು.
- - -ಬಾಕ್ಸ್ * ಯೋಗ, ಧ್ಯಾನ ರೂಢಿಸಿಕೊಳ್ಳಿ: ಸಂಸದೆ ಡಾ.ಪ್ರಭಾ ಕನ್ನಡಪ್ರಭ ವಾರ್ತೆ, ದಾವಣಗೆರೆ
"ಸ್ವಂತ ಮತ್ತು ಸಮಾಜಕ್ಕಾಗಿ ಯೋಗ " ಎಂಬ ಪ್ರಸಕ್ತ ಸಾಲಿನ ವಿಶ್ವ ಯೋಗ ದಿನಾಚರಣೆಯ ಘೋಷವಾಕ್ಯದಂತೆ ಪ್ರತಿಯೊಬ್ಬರೂ ಯೋಗದಿಂದ ಆರೋಗ್ಯಕರ ಜೀವನ ತಮ್ಮದಾಗಿಸಿಕೊಳ್ಳಬೇಕು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದರು.ನಗರದ ಹೈಸ್ಕೂಲ್ ಮೈದಾನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 10ನೇ ಯೋಗ ದಿನಾಚರಣೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಯೋಗ ಮತ್ತು ಪ್ರಾಣಾಯಾಮದಿಂದ ಸಂಪೂರ್ಣವಾಗಿ ಆರೋಗ್ಯವಾಗಿರಲು ಸಾಧ್ಯವಿದೆ ಎಂದರು.
ಆಧುನಿಕತೆಯ ಯುಗದ ಈಗಿನ ಜೀವಶೈಲಿ, ಮಧುಮೇಹ, ಆಹಾರ ಪದ್ಧತಿ, ದೈಹಿಕ, ಮಾನಸಿಕ ಒತ್ತಡದ ಜಂಜಾಟದಲ್ಲಿ ಪ್ರತಿಯೊಬ್ಬರೂ ಬಾಳುತ್ತಿದ್ದಾರೆ. ಮಧುಮೇಹ, ಮಾನಸಿಕ ಒತ್ತಡ ನಿಯಂತ್ರಣಕ್ಕೆ ಯೋಗ ಸಹಕಾರಿಯಾಗಿದೆ. ಕಾಯಿಲೆಗಳಿಗೆ ಮೂಲ ಕಾರಣವೇ ಒತ್ತಡ. ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಯೋಗ ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ದಾವಣಗೆರೆ ಜನರಲ್ಲಿ ಯೋಗದ ಅರಿವು ಮೂಡಿಸುವ ಉತ್ತಮ ಕಾರ್ಯ ಇಲ್ಲಿ ಆಗುತ್ತಿದೆ.ಎಂದು ಹೇಳಿದರು.ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಯೋಗಾಭ್ಯಾಸದ ಮಹತ್ವ, ಉಪಯುಕ್ತತೆ ಬಗ್ಗೆ ತಿಳಿಸುವ ಕೆಲಸವಾಗಬೇಕು. ಮಕ್ಕಳಲ್ಲಿ ಏಕಾಗ್ರತೆ ಸಾಧಿಸಲು, ಒತ್ತಡ ಮುಕ್ತರಾಗಲು ಯೋಗ ಸಹಾಯಕ ಆಗುತ್ತದೆ. ಇಂದು ವಿಶ್ವಕ್ಕೆ ಪಿಡುಗಾಗಿರುವ ಮೊಬೈಲ್, ಸಾಮಾಜಿಕ ಜಾಲತಾಣದಿಂದ ವ್ಯಸನ ತಡೆಗೆ ಯೋಗ, ಧ್ಯಾನ ರೂಢಿಸಿಕೊಳ್ಳುವುದು ಉತ್ತಮ ಎಂದು ಸಲಹೆ ನೀಡಿದರು.
- - - -21ಕೆಡಿವಿಜಿ1:ದಾವಣಗೆರೆಯಲ್ಲಿ 10ನೇ ವಿಶ್ವ ಯೋಗ ದಿನ ಕಾರ್ಯಕ್ರಮವನ್ನು ಸಿರಿಗೆರೆ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಉದ್ಘಾಟಿಸಿದರು.
-21ಕೆಡಿವಿಜಿ2:ದಾವಣಗೆರೆಯಲ್ಲಿ 10ನೇ ವಿಶ್ವ ಯೋಗ ದಿನಾಚರಣೆ ಉದ್ಘಾಟಿಸಿದ ಸಿರಿಗೆರೆ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಸಂಸದೆ ಡಾ.ಪ್ರಭಾ, ಬಿ.ಸಿ. ಉಮಾಪತಿ, ಡಿಸಿ ಡಾ. ವೆಂಕಟೇಶ, ಸಿಇಒ ಸುರೇಶ ಇಟ್ನಾಳ್, ಎಸ್ಪಿ ಉಮಾ ಪ್ರಶಾಂತ ಇತರರು ಧ್ಯಾನ ಮಾಡಿದರು. - - - -21ಕೆಡಿವಿಜಿ3, 4, 5:
ದಾವಣಗೆರೆಯಲ್ಲಿ ಸಿರಿಗೆರೆ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯದಲ್ಲಿ 10ನೇ ವಿಶ್ವ ಯೋಗ ದಿನಾಚರಣೆಯಲ್ಲಿ ಡಿಸಿ, ಜಿಲ್ಲಾ ಎಸ್‌ಪಿ, ಜಿಪಂ ಸಿಇಒ, ಇಲಾಖೆಗಳ ಅಧಿಕಾರಿಗಳು, ಯೋಗ ಸಾಧಕರು, ಯೋಗಪಟುಗಳು ಪಾಲ್ಗೊಂಡು ಯೋಗಕಲೆ ಪ್ರದರ್ಶಿಸಿದರು.- - - -21ಕೆಡಿವಿಜಿ6:
ದಾವಣಗೆರೆ ಹೈಸ್ಕೂಲ್ ಮೈದಾನದಲ್ಲಿ 10ನೇ ವಿಶ್ವ ಯೋಗ ದಿನ ಸಮಾರಂಭದಲ್ಲಿ ವಿದ್ಯಾರ್ಥಿ, ಯುವಜನರು, ಸಾರ್ವಜನಿಕರು, ಸಂಘ ಸಂಸ್ಥೆಗಳವರು ಪಾಲ್ಗೊಂಡು ಯೋಗಕಲೆ ಪ್ರದರ್ಶಿಸಿದರು.