- ದೆಹಲಿ ಹರಿಜನ್ ಸೇವಕ ಸಂಘದ ಸಂಜಯ್ ರೈ ಅವರಿಂದವುತ್ಸವ ಉದ್ಘಾಟನೆ
- ಮೈಸೂರಿನ ನವೋದಯ ತಂಡದಿಂದ ಅಯೋಧ್ಯಾ ಕಾಂಡ ನಾಟಕ ಪ್ರದರ್ಶನ- ವಿಚಾರ ಸಂಕಿರಣದಲ್ಲಿ ಪಾಲ್ಗೊಳ್ಳಲಿರುವ ನೇಕಾರರು, ಸಾಹಿತಿಗಳು, ಬರಹಗಾರರು - - - ಸಾಗರ: ಭೀಮನಕೋಣೆ ಕವಿಕಾವ್ಯ ಟ್ರಸ್ಟ್ ಮತ್ತು ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘದ ಆಶ್ರಯದಲ್ಲಿ ಫೆ.೨೪ ಮತ್ತು ೨೫ರಂದು ಹೊನ್ನೆಸರದ ಶ್ರಮಜೀವಿ ಆಶ್ರಮದಲ್ಲಿ ಚರಕ ಉತ್ಸವ ಹಮ್ಮಿಕೊಳ್ಳಲಾಗಿದೆ. ಫೆ.೨೪ರಂದು ಕೈಮಗ್ಗ ಜವಳಿ ಇಲಾಖೆ ಸಹಯೋಗದೊಂದಿಗೆ ಪವಿತ್ರ ವಸ್ತ್ರ ಯೋಜನೆ ಅಡಿಯಲ್ಲಿ ಕೊಡು-ಕೊಳ್ಳುವವರ ಸಮಾವೇಶ ಹಾಗೂ ಪವಿತ್ರ ವಸ್ತ್ರ ಕುರಿತು ವಿಚಾರ ಮಂಥನ ನಡೆಯಲಿದೆ. ದೇಶದ ಹೆಸರಾಂತ ವಿನ್ಯಾಸಕಾರರು, ಕೈ ಉತ್ಪನ್ನಗಳ ಉತ್ಪಾದಕರು, ವಿವಿಧ ಜಿಲ್ಲೆಯ ನೇಕಾರರು, ಸಾಹಿತಿಗಳು, ಬರಹಗಾರರು ವಿಚಾರ ಸಂಕಿರಣದಲ್ಲಿ ಪಾಲ್ಗೊಳ್ಳಲಿದ್ದಾರೆ.
ಸಂಜೆ ೬-೩೦ಕ್ಕೆ ದೆಹಲಿ ಹರಿಜನ್ ಸೇವಕ ಸಂಘದ ಸಂಜಯ್ ರೈ ಚರಕ ಉತ್ಸವ ಉದ್ಘಾಟಿಸಲಿದ್ದಾರೆ. ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ್ ಮಾವಿನಸರ ಉಪಸ್ಥಿತರಿರುವರು. ಚರಕ ಸಂಸ್ಥೆ ಅಧ್ಯಕ್ಷೆ ಗೌರಮ್ಮ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ ೭-೩೦ಕ್ಕೆ ಮೈಸೂರಿನ ನವೋದಯ ತಂಡದಿಂದ ಅಯೋಧ್ಯಾ ಕಾಂಡ ನಾಟಕ ಪ್ರದರ್ಶನ ಇರುತ್ತದೆ.ಫೆ.೨೫ರಂದು ಸಂಜೆ ೬-೩೦ಕ್ಕೆ ಕಾಯಕ ಪ್ರಶಸ್ತಿ ವಿತರಣೆ ಹಾಗೂ ಸಮಾರೋಪ ಸಮಾರಂಭ ಇರುತ್ತದೆ. ಶಾಸಕ ಗೋಪಾಲಕೃಷ್ಣ ಬೇಳೂರು ಕಾಯಕ ಪ್ರಶಸ್ತಿ ವಿತರಣೆ ಮಾಡಲಿದ್ದಾರೆ. ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ ಶೆಟ್ಟಿ ಉಪಸ್ಥಿತರಿದ್ದು, ಗೌರಮ್ಮ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ ೭-೩೦ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಹಟ್ಟಿಯಂಗಡಿ ಯಕ್ಷಗಾನ ಮಂಡಳಿ ಮತ್ತು ಅತಿಥಿ ಕಲಾವಿದರಿಂದ ಚಂದ್ರಾವಳಿ ವಿಲಾಸ ಯಕ್ಷಗಾನ ಪ್ರದರ್ಶನ ಇರುತ್ತದೆ.- - - - (-ಸಾಂದರ್ಭಿಕ ಚಿತ್ರ)
-ಕ್ಲಾತ್ಸ್.ಜೆಪಿಜಿ