ಶ್ರೀಲಂಕಾ - ಅಮೇರಿಕಾ ಸಮ್ಮೇಳನಕ್ಕೆ ಚಟ್ನಳ್ಳಿ ಮಹೇಶ್

KannadaprabhaNewsNetwork |  
Published : Aug 20, 2024, 12:59 AM IST
ಚಟ್ನಳ್ಳಿ ಮಹೇಶ್ | Kannada Prabha

ಸಾರಾಂಶ

ಚಿಕ್ಕಮಗಳೂರು: ರಾಷ್ಟ್ರೀಯ ಬಸವ ಪ್ರತಿಷ್ಠಾನದ ದಶಮಾನೋತ್ಸವ ಸಮಾರಂಭ ಆ.26 ರಂದು ಶ್ರೀಲಂಕಾದ ಕೊಲಂಬೋ ನಗರದಲ್ಲಿ ಆಯೋಜಿಸಿದ್ದು, ಈ ಸಮಾರಂಭದಲ್ಲಿ ಸಾಹಿತಿ ಚಟ್ನಳ್ಳಿ ಮಹೇಶ್ ಪ್ರಧಾನ ಉಪನ್ಯಾಸಕರಾಗಿ ಭಾಗವಹಿಸಲಿದ್ದಾರೆ.

ಚಿಕ್ಕಮಗಳೂರು: ರಾಷ್ಟ್ರೀಯ ಬಸವ ಪ್ರತಿಷ್ಠಾನದ ದಶಮಾನೋತ್ಸವ ಸಮಾರಂಭ ಆ.26 ರಂದು ಶ್ರೀಲಂಕಾದ ಕೊಲಂಬೋ ನಗರದಲ್ಲಿ ಆಯೋಜಿಸಿದ್ದು, ಈ ಸಮಾರಂಭದಲ್ಲಿ ಸಾಹಿತಿ ಚಟ್ನಳ್ಳಿ ಮಹೇಶ್ ಪ್ರಧಾನ ಉಪನ್ಯಾಸಕರಾಗಿ ಭಾಗವಹಿಸಲಿದ್ದಾರೆ.

ಬುದ್ಧ ಮತ್ತು ಬಸವ ಸಾಹಿತ್ಯದಲ್ಲಿ ಇರುವ ಜೀವಪರ ಚಿಂತನೆಗಳ ಸಾಮ್ಯತೆ ಕುರಿತು ಚಟ್ನಳ್ಳಿ ಮಹೇಶ್ ತಮ್ಮ ಉಪನ್ಯಾಸದಲ್ಲಿ ಬೆಳಕು ಚೆಲ್ಲಲಿದ್ದಾರೆ. ತರಳಬಾಳು ಶಾಖಾ ಸಾಣೆಹಳ್ಳಿ ಶ್ರೀ ಮಠದ ಪಂಡಿತಾರಾಧ್ಯ ಸ್ವಾಮೀಜಿ, ಇಸ್ರೋ ಮಾಜಿ ಅಧ್ಯಕ್ಷ ಕಿರಣ್ ಕುಮಾರ್, ಮಾಜಿ ಮುಖ್ಯ ಮಂತ್ರಿ ಡಿ.ವಿ. ಸದಾನಂದಗೌಡ ಸೇರಿದಂತೆ ಹಲವು ಗಣ್ಯರು ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಆ. 31 ರಿಂದ ಸೆ. 3 ರವರೆಗೆ ಅಮೇರಿಕಾದ ರೀಚಮೆಂಡ್ ನಗರದಲ್ಲಿ ನಡೆಯುವ 12ನೇ ಅಕ್ಕಾ ವಿಶ್ವ ಕನ್ನಡ ಸಮ್ಮೇಳನಕ್ಕೂ ಸಾಹಿತಿ ಚಟ್ನಳ್ಳಿ ಮಹೇಶ್ ರವರನ್ನು ಆಹ್ವಾನಿಸಿದ್ದು, ಅವರು 20 ದಿನಗಳ ಕಾಲ ಅಮೇರಿಕಾ ಪ್ರವಾಸಕ್ಕೆ ತೆರಳಿ ಅಲ್ಲಿನ ವಿವಿಧ ಕಡೆ ಕನ್ನಡ ಸಾಹಿತ್ಯದ ಸತ್ವ ಮತ್ತು ಸಮೃದ್ಧ ತತ್ವದ ಬಗ್ಗೆ ಭಾಷಣ ಮಾಡಲಿದ್ದಾರೆ. ಈ ಎರಡೂ ದೇಶಗಳಿಗೆ ಸಾಂಸ್ಕೃತಿಕ ರಾಯಭಾರಿಯಾಗಿ ತೆರಳುತ್ತಿರುವ ಚಟ್ನಳ್ಳಿ ಮಹೇಶ್ ರವರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನ, ಅಜ್ಜಂಪುರ ಸೂರಿ ಪ್ರತಿಷ್ಠಾನ, ಜಿಲ್ಲಾ ಜಾನಪದ ಪರಿಷತ್, ವೀರಶೈವ ಮಹಾಸಭಾ, ಹೀಗೆ ಹಲವು ಸಂಘ ಸಂಸ್ಥೆಗಳು ಶುಭ ಕೋರಿವೆ.

ಪೋಟೋ ಫೈಲ್‌ ನೇಮ್ 19 ಕೆಸಿಕೆಎಂ 2

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ