- ದಾವಣಗೆರೆಯಲ್ಲಿ ಶ್ರೀಪೀಠ, ದೈವಜ್ಞ ಸಮಾಜದಿಂದ ಆಯೋಜನೆ: ಪ್ರಶಾಂತ ವರ್ಣೇಕರ್ - - -
ಕನ್ನಡಪ್ರಭ ವಾರ್ತೆ ದಾವಣಗೆರೆದಾವಣಗೆರೆ ದೈವಜ್ಞ ಸಮಾಜ ಸಂಘ, ಚಾತುರ್ಮಾಸ್ಯ ವಜ್ರೋತ್ಸವ ಸಮಿತಿ ವತಿಯಿಂದ ನಗರದ ಹಳೇ ಪಿ.ಬಿ. ರಸ್ತೆಯ ರೇಣುಕಾ ಬಡಾವಣೆಯ ದೈವಜ್ಞ ಕಲ್ಯಾಣ ಮಂಟಪದಲ್ಲಿ ಜು.10ರಿಂದ ಸೆ.7 ರವರೆಗೆ ಹೊನ್ನಾವರ ತಾಲೂಕಿನ ಕರ್ಕಿ ಸುಕ್ಷೇತ್ರದ ದೈವಜ್ಞ ಬ್ರಾಹ್ಮಣ ಮಠ ಶ್ರೀ ಜ್ಞಾನೇಶ್ವರಿ ಪೀಠದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಸ್ವಾಮೀಜಿ ಹಾಗೂ ಶ್ರೀ ಸುಜ್ಞಾನೇಶ್ವರ ಭಾರತೀ ಸ್ವಾಮಿಗಳ ಚಾತುರ್ಮಾಸ್ಯ ವ್ರತ-2025 ನಡೆಯಲಿದೆ.
ನಗರದಲ್ಲಿ ಸೋಮವಾರ ಸಮಿತಿ ಅಧ್ಯಕ್ಷ ಪ್ರಶಾಂತ ವಿ.ವರ್ಣೇಕರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜು.10ರಂದು ಬೆಳಗ್ಗೆ 10ರಿಂದ ಶ್ರೀಗಳಿಂದ ವ್ಯಾಸ ಪಂಚಕ ಪೂಜೆ ಮೂಲಕ ಚಾತುರ್ಮಾಸ್ಯ ವ್ರತ ಪೂಜೆ ಆರಂಭವಾಗಲಿದೆ. 2 ತಿಂಗಳ ಕಾಲ ನಡೆಯಲಿದ್ದು, ಸಮಾಜದಿಂದ ಪಾದುಕಾ ಪೂಜೆ, ಸಭಾ ಕಾರ್ಯಕ್ರಮ, ಆಶೀರ್ವಚನ ಎಂದರು.2 ದಿನಗಳ ಕಾಲ ನಿತ್ಯ ಬೆಳಗ್ಗೆ 10.30ರಿಂದ ಸಾಮೂಹಿಕ ಪಾದುಕಾ ಪೂಜೆ, ಶ್ರೀಗಳಿಂದ ವ್ಯಾಸಾಕ್ಷತೆ, ಮಧ್ಯಾಹ್ನ 12.30ಕ್ಕೆ ಶ್ರೀಗಳ ಪಟ್ಟದ ದೇವರ ಮಹಾಪೂಜೆ, ಸಂಜೆ 6.30ರಿಂದ ಭಜನೆ, ಸಹಸ್ರನಾಮ ಪಠಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 8ರಿಂದ ಶ್ರೀಗಳಿಂದ ಪಟ್ಟದ ದೇವರ ಪೂಜೆ, ಆಶೀರ್ವಚನ ನಡೆಯಲಿದೆ ಎಂದು ತಿಳಿಸಿದರು.
ಆ.9 ಮತ್ತು 10ರಂದು ಶ್ರೀ ಸತ್ಯನಾರಾಯಣ ಸ್ವಾಮಿ ವ್ರತ, ಉದ್ಯಾಪನೆ ಇದ್ದು, ಚಿನ್ನ-ಬೆಳ್ಳಿ ಕೆಲಸಗಾರರ ಸಂಘದಿಂದ ಮಹಾಪ್ರಸಾದವಿದೆ. ಆ.12, 13ರಂದು ಸಂಕಷ್ಟಹರ ಚತುರ್ಥಿ ಉದ್ಯಾಪನೆ, ಆ.21ಕ್ಕೆ ಮಂಗಲ ಚಂಡಿ ಹವನ, ಆ.22 ಮತ್ತು 23ರಂದು ಶ್ರೀ ಲಲಿತಾ ಸಹಸ್ರನಾಮ ಸ್ತೋತ್ರ ಪಾರಾಯಣವಿದೆ. ಆ.23ರಂದು ಶ್ರೀದುರ್ಗಾದೀಪಾ ನಮಸ್ಕಾರದ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.ಸೆ.7ರಂದು ಚಾತುರ್ಮಾಸ್ಯ ವ್ರತದ ಸೀಮೋಲ್ಲಂಘನ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ ಸೀಮೋಲ್ಲಂಘನ ಪೂಜೆ, ಮಹಾಪೂಜೆ, ಮಹಾಪ್ರಸಾದವಿದೆ. ಸುಧೀರ ಜಿ. ವರ್ಣೇಕರ್, ರಾಘವೇಂದ್ರ ಜಿ. ವರ್ಣೇಕರ್ ಕಡೆಯ ದಿನದ ಮಹಾಪ್ರಸಾದ ಸೇವಾಕರ್ತರಾಗಿದ್ದಾರೆ. ಈ ಸಂವತ್ಸರದ ಚಾತುರ್ಮಾಸ್ಯದ ವ್ರತ ಸಂಕಲ್ಪವನ್ನು ಉಭಯ ಶ್ರೀಗಳು ಮಾಡಿದ್ದು, ಚಾತುರ್ಮಾಸ್ಯ ಮಹಾ ಪರ್ವದಲ್ಲಿ ದೈವಜ್ಞ ಸಮಾಜ ಬಾಂಧವರು ಕುಟುಂಬ ಸಮೇತರಾಗಿ ಪಾಲ್ಗೊಳ್ಳಲು ಮನವಿ ಮಾಡಿದರು.
ಸಮಿತಿ ಕಾರ್ಯಾಧ್ಯಕ್ಷ ಸತೀಶ ಎಸ್.ಸಾನು, ಉಪಾಧ್ಯಕ್ಷರಾದ ಸತ್ಯನಾರಾಯಣ ಆರ್. ರಾಯ್ಕರ್, ರಮಾಕಾಂತ ಎಸ್.ವರ್ಣೇಕರ್, ಶಂಕರ್ ಎನ್.ವಿಠ್ಠಲಕರ್, ವಾಸುದೇವ ವಿ.ರಾಯ್ಕರ್, ರಾಘವೇಂದ್ರ ಡಿ.ರೇವಣಕರ್, ಸಚಿನ್ ಅಣ್ವೇಕರ್, ಸಾಯಿಪ್ರಕಾಶ ಸುಪರ ರಾವ್ ವರ್ಣೇಕರ್, ಮಂಜುನಾಥ ಜಿ.ವಿಠ್ಠಲಕರ್, ರಾಜೀವ್ ಜಿ.ವರ್ಣೇಕರ, ಸೂರಜ್ ವೆಂಕಟರಮಣ ರೇವಣಕರ್ ಇತರರು ಇದ್ದರು.- - -
-7ಕೆಡಿವಿಜಿ2: ದಾವಣಗೆರೆಯಲ್ಲಿ ಸೋಮವಾರ ದೈವಜ್ಞ ಸಮಾಜದ ಚಾತುರ್ಮಾಸ್ಯ ವಜ್ರೋತ್ಸವ ಸಮಿತಿ ಅಧ್ಯಕ್ಷ ಪ್ರಶಾಂತ ವಿ.ವರ್ಣೇಕರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.