ಸಿಮ್ಸ್‌ನಲ್ಲಿ ಶುಶ್ರೂಷಕರ ವೇತನದಲ್ಲಿ ಅವ್ಯವಹಾರ

KannadaprabhaNewsNetwork |  
Published : Mar 28, 2024, 12:52 AM IST
27ಸಿಎಚ್‌ಎನ್51ಚಾಮರಾಜನಗರದ ಜಿಲ್ಲಾಕಾರ್ಯನಿರತ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಚಾಮರಾಜನಗರ ವೈದ್ಯಕೀಯ  ವಿಜ್ಞಾನಗಳ  ಸಂಸ್ಥೆಯಕಾರ್ಮಿಕರ ಸಂಘದಅಧ್ಯಕ್ಷ ಚಂದ್ರಶೇಖರ್ ಮೇಟಿ ಪತ್ರಿಕಾಗೋಷ್ಠಿ ನಡೆಸಿದರು. | Kannada Prabha

ಸಾರಾಂಶ

ನಗರದ ಸಿಮ್ಸ್ ಆಸ್ಪತ್ರಯೆಲ್ಲಿ 2022 ರಲ್ಲಿ 63 ಜನ ಶುಶ್ರೂಷಕರನ್ನು ನೇಮಕಮಾಡಿಕೊಂಡು, 73 ಜನರ ಹೆಸರಿನಲ್ಲಿ ಬಿಲ್ ಮಾಡಿಕೊಂಡು ಏಜೆನ್ಸಿದಾರರು ಅವ್ಯವಹಾರ ನಡೆಸಿದ್ದಾರೆ ಎಂದು ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕಾರ್ಮಿಕರ ಸಂಘದ ಅಧ್ಯಕ್ಷ ಚಂದ್ರಶೇಖರ್ ಮೇಟಿ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರನಗರದ ಸಿಮ್ಸ್ ಆಸ್ಪತ್ರಯೆಲ್ಲಿ 2022 ರಲ್ಲಿ 63 ಜನ ಶುಶ್ರೂಷಕರನ್ನು ನೇಮಕಮಾಡಿಕೊಂಡು, 73 ಜನರ ಹೆಸರಿನಲ್ಲಿ ಬಿಲ್ ಮಾಡಿಕೊಂಡು ಏಜೆನ್ಸಿದಾರರು ಅವ್ಯವಹಾರ ನಡೆಸಿದ್ದಾರೆ ಎಂದು ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕಾರ್ಮಿಕರ ಸಂಘದ ಅಧ್ಯಕ್ಷ ಚಂದ್ರಶೇಖರ್ ಮೇಟಿ ಆರೋಪಿಸಿದರು.

ನಗರದ ಜಿಲ್ಲಾಕಾರ್ಯನಿರತ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲಸ ಮಾಡದ ನಕಲಿ ಹೆಸರುಗಳಿಗೆ ಸಂಸ್ಥೆಯ ನಿವಾಸಿ ವೈದ್ಯರು ಮತ್ತು ಜಿಲ್ಲಾ ಶಸ್ತ್ರಚಿಕಿತ್ಸಕರು ಪರಿಶೀಲನೆ ಮಾಡದೇ ದೃಢೀಕರಿಸುತ್ತಾ ಬಂದಿದ್ದಾರೆ. ಸುಮಾರು 10 ಮಂದಿ ನಕಲಿ ಹೆಸರಿನಲ್ಲಿ ವೇತನ ಪಡೆಯುತ್ತಿರುವ ಗುತ್ತಿಗೆದಾರರು ಹೆರಿಗೆ ಸಮಯದ ಭತ್ಯೆಗಾಗಿ ಪ್ರಕರಣ ದಾಖಲಿಸಿರುವ ಪೂರ್ಣಿಮಾ ಮತ್ತು ರಂಜಿತಾ ಅವರಿಗೆ ಕೆಲಸ ನೀಡದೇ ಪ್ರತಿನಿತ್ಯ ಅಲೆಯುವಂತೆ ಮಾಡಿದ್ದಾರೆ ಎಂದು ಆರೋಪಿಸಿದರು.ಸಿಮ್ಸ್ ಅಸ್ಪತ್ರೆಯಲ್ಲಿ ಗುತ್ತಿಗೆ ನೌಕರರನ್ನು ನೇಮಕ ಮಾಡಿಕೊಳ್ಳುವ ವಿಷಯದಲ್ಲಿ ಬಹಳ ಶೋಷಣೆ ನಡೆಯುತ್ತಿದೆ. ನೌಕರರಿಗೆ ಸರಿಯಾಗಿ ಸಂಬಳ ನೀಡದಿರುವುದು. ಹೆಚ್ಚು ದುಡಿಸಿಕೊಳ್ಳುವುದು ಸೇರಿದಂತೆ ಕಾರ್ಮಿಕ ಕಾಯಿದೆಯನ್ನು ಸಂಪೂರ್ಣವಾಗಿ ಉಲ್ಲಂಘನೆ ಮಾಡಲಾಗುತ್ತಿದೆ ಎಂದರು. ಹೊರಗುತ್ತಿಗೆ ಏಜೆನ್ಸಿಯವರು ಸುಮಾರು 2 ವರ್ಷಗಳ ಕಾಲ ಪ್ರತಿ ತಿಂಗಳು ಸುಮಾರು 2 ಸಾವಿರ ರು.ಗಳನ್ನು ಕಾನೂನು ಬಾಹಿರವಾಗಿ ಕಡಿತ ಮಾಡಿದ್ದಾರೆ, ಕೋಟ್ಯಾಂತರ ರು. ಅವ್ಯವಹಾರ ನಡೆದಿದೆ. ಸಿಮ್ಸ್ ಪ್ರಾರಂಭದಿಂದಲೂ ಒಂದೇ ಏಜೆನ್ಸಿ, ವಿಎಸ್‌ಎಸ್‌ನವರಿಗೆ ಗುತ್ತಿಗೆ ಕೊಡುತ್ತಿದ್ದು, ಈಗ ಹೊಸ ಏಜೆನ್ಸಿಗೆ ಕೊಡಲಾಗಿದೆ, ಅದರಲ್ಲೂ ಸೆಕ್ಯೂರಿಟಿ ಗಾರ್ಡ್‌ಗಳ ಗುತ್ತಿಗೆಯನ್ನು ಹಳೇ ಏಜೆನ್ಸಿಯವರಿಗೆ ಕೊಡಲಾಗಿದೆ ಎಂದರು.ಶುಶ್ರೂಷಕರಿಗೆ ಮೂಲ ವೇತನ 25 ಸಾವಿರ ಇದ್ದರೂ, 5 ಸಾವಿರ ಕಡಿತ ಮಾಡಿಕೊಂಡು, ವೇತನ ಪಾವತಿ ಮಾಡಲಾಗಿದೆ ಇದರಲ್ಲಿ ಸಂಸ್ಥೆಯ ಡೀನ್, ನಿವಾಸಿ ವೈದ್ಯರು, ಜಿಲ್ಲಾ ಶಸ್ತ್ರಚಿಕಿತ್ಸಕರು ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು. ಪತ್ರಿಕಾಗೋಷ್ಠಿಯಲ್ಲಿ ಉಗ್ರನರಸಿಂಹಗೌಡ, ಸಂಘದ ಪ್ರಧಾನ ಕಾರ್ಯದರ್ಶಿ ಡಿ. ಮಹದೇವ್, ಖಜಾಂಚಿ ಕುಮಾರ್, ಜಂಟಿ ಕಾರ್ಯದರ್ಶಿ ಮಹೇಶ್ ಇದ್ದರು.

PREV

Recommended Stories

ಮದ್ದೂರು ಗಣೇಶ ಗಲಾಟೆಗೆ ಪೂರ್ಣ ಮುಸ್ಲಿಮರೇ ಕಾರಣ: ಸಚಿವ ಚಲುವ
ಬುರುಡೆ ಕೇಸ್‌ : ಸಾಕ್ಷಿದಾರರ ಬಂಧನ..? ಮಟ್ಟಣ್ಣವರ್‌, ಜಯಂತ್‌, ಅಭಿಷೇಕ್, ಮನಾಫಾ ವಿಠಲಗೆ ಗ್ರಿಲ್