ಯುವಕರಿಗೆ ಚೆನ್ನಮ್ಮ, ರಾಯಣ್ಣ ಸ್ಫೂರ್ತಿ: ಸಂಸದ ಜಗದೀಶ ಶೆಟ್ಟರ

KannadaprabhaNewsNetwork |  
Published : Jan 27, 2025, 12:45 AM IST
26ಎಚ್‌ಯುಬಿ47, 48ಹುಬ್ಬಳ್ಳಿ ಚೆನ್ನಮ್ಮ ವೃತ್ತದಲ್ಲಿ ಭಾನುವಾರ ಸಂಜೆ ನಡೆದ ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ ಮಹಿಳೆಯರಿಗೆ ಕಿತ್ತೂರುರಾಣಿ ಚೆನ್ನಮ್ಮ ಪ್ರಶಸ್ತಿ ಪ್ರದಾನ ಮಾಡಲಾಯಿತು.26ಎಚ್‌ಯುಬಿ49ಕಾರ್ಯಕ್ರಮದಲ್ಲಿ ಕನ್ನಡಪ್ರಭದ ಮುಖ್ಯ ಉಪಸಂಪಾದಕ ಶಿವಾನಂದ ಅಂಗಡಿ ಅವರಿಗೆ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. | Kannada Prabha

ಸಾರಾಂಶ

ಹುಬ್ಬಳ್ಳಿ ಚೆನ್ನಮ್ಮ ವೃತ್ತದಲ್ಲಿ ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿ ವತಿಯಿಂದ ಭಾನುವಾರ ಸಂಜೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಒಟ್ಟು 92 ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಹುಬ್ಬಳ್ಳಿ: ಬ್ರಿಟಿಷರ ವಿರುದ್ಧ ಹೋರಾಡಿದ ವೀರರಾಣಿ ಕಿತ್ತೂರು ಚೆನ್ನಮ್ಮ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಾಡಿನ ಯುವಕರಿಗೆ ಸ್ಫೂರ್ತಿಯಾಗಿದ್ದಾರೆ. ಅವರನ್ನು ನಿತ್ಯ ಸ್ಮರಿಸುವ ಜತೆಗೆ ಅವರ ಜೀವನ ಮತ್ತು ಸಾಧನೆಗಳನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕು ಎಂದು ಸಂಸದ ಜಗದೀಶ ಶೆಟ್ಟರ ಹೇಳಿದರು.

ಇಲ್ಲಿನ ಚೆನ್ನಮ್ಮ ವೃತ್ತದಲ್ಲಿ ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿ ವತಿಯಿಂದ ಭಾನುವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಒಟ್ಟು 72 ಜನ ಸಾಧಕರಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ 20 ಮಹಿಳಾ ಸಾಧಕಿಯರಿಗೆ ಕಿತ್ತೂರುರಾಣಿ ಚೆನ್ನಮ್ಮ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ರಾಯಣ್ಣ ಮತ್ತು ಚೆನ್ನಮ್ಮನ ಹೆಸರು ಚಿರಾಯುವಾಗಿ ಉಳಿಯುವಂತಾಗಲು ರಾಜ್ಯದ ಪ್ರಮುಖ ವಿಮಾನ ನಿಲ್ದಾಣಕ್ಕೆ ಅವರ ಹೆಸರನ್ನು ಇಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಅದರಂತೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ, ಬೆಳಗಾವಿ ವಿಮಾನ ನಿಲ್ದಾಣಕ್ಕೆ ವೀರರಾಣಿ ಕಿತ್ತೂರು ಚೆನ್ನಮ್ಮ, ವಿಜಯಪುರ ನಿಲ್ದಾಣಕ್ಕೆ ಬಸವಣ್ಣ ಹಾಗೂ ಶಿವಮೊಗ್ಗದ ನಿಲ್ದಾಣಕ್ಕೆ ಕುವೆಂಪು ಅವರ ಹೆಸರಿಡಲು ಸ್ವತಃ ನಾನೂ ಹಲವಾರು ಬಾರಿ ಮನವಿ ಮಾಡಿದ್ದೇನೆ ಎಂದರು.

ರಾಯಣ್ಣನ ನೆನಪು ಅಜರಾಮರವಾಗಿ ಉಳಿಯಲು ಪ್ರತಿವರ್ಷ ಹುಬ್ಬಳ್ಳಿ ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಿಕೊಂಡು ಬರುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಅತಿಥಿಗಳಾಗಿ ಆಗಮಿಸಿದ್ದ ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ದೇಶದ ಹೆಮ್ಮೆಯ ಪ್ರತೀಕವಾದ ಸಂಗೊಳ್ಳಿ ರಾಯಣ್ಣ ಹಾಗೂ ಕಿತ್ತೂರು ರಾಣಿ ಚೆನ್ನಮ್ಮಳನ್ನು ನಿತ್ಯ ಸ್ಮರಿಸುವಂತಾಗಬೇಕು. ಅವರ ಹೆಸರಿನಲ್ಲಿ ಪ್ರಶಸ್ತಿ ಪಡೆದ ಸಾಧಕರು ಮತ್ತಷ್ಟು ಮಾದರಿ ಸೇವೆ ಸಲ್ಲಿಸುವಂತಾಗಲಿ ಎಂದರು.

ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಾನಂದ ಮುತ್ತಣ್ಣವರ ಮಾತನಾಡಿದರು. ಜಿಪಂ ಮಾಜಿ ಉಪಾಧ್ಯಕ್ಷ ಶಿವಾನಂದ ಕರಿಗಾರ, ಮುಖಂಡರಾದ ನಾಗೇಶ ಕಲ್ಬುರ್ಗಿ, ಮಲ್ಲಿಕಾರ್ಜುನ ಸಾವಕಾರ, ಸದಾನಂದ ಡಂಗನವರ, ವಿಜಯಕುಮಾರ ಅಪ್ಪಾಜಿ, ಮಲ್ಲಿಕಾರ್ಜುನ ತಾಲೂರ, ಚಂದ್ರಶೇಖರ ಮಾದಣ್ಣವರ, ಯಲ್ಲಪ್ಪ ಕುಂದಗೋಳ, ಜಗದೀಶ ರಿತ್ತಿ, ಗುರು ಚಲವಾದಿ ಸೇರಿದಂತೆ ಹಲವರಿದ್ದರು.

92 ಸಾಧಕರಿಗೆ ಪ್ರಶಸ್ತಿ ಪ್ರದಾನ

ಕನ್ನಡಪ್ರಭದ ಮುಖ್ಯ ಉಪಸಂಪಾದಕ ಶಿವಾನಂದ ಅಂಗಡಿ, ಪತ್ರಕರ್ತ ನಿಜಗುಣಿ ದಿಂಡಲಕೊಪ್ಪ, ಪ್ರಕಾಶ ಚಳಗೇರಿ, ವಿಜಯಕುಮಾರ ಪೂಜಾರಿ, ಎಸ್‌.ಎನ್‌. ಗೋವರ್ಧನ, ಹೇಮರಡ್ಡಿ ಸೈದಾಪುರ, ಸಂಗಮೇಶ ಮೆಣಸಿನಕಾಯಿ, ವೈದ್ಯಕೀಯ ಕ್ಷೇತ್ರದಲ್ಲಿ ಡಾ. ಬಸವರಾಜ ಬಳಿಗಾರ ಸೇರಿ ಐವರು, ಸಾರಿಗೆ ಕ್ಷೇತ್ರದಲ್ಲಿ ಎಚ್‌. ರಾಮನಗೌಡರ, ಆರ್‌.ಎಫ್‌. ಕವಳಿಕಾಯಿ ಸೇರಿ ಐವರು, ಕ್ರೀಡಾ ಕ್ಷೇತ್ರದಲ್ಲಿ ಪಾಂಡಪ್ಪ ಮಾದರ ಸೇರಿ ಐವರು, ಸುದ್ದಿ ವಾಹಿನಿ ಕ್ಷೇತ್ರದಲ್ಲಿ ನಾಲ್ವರು, ನ್ಯಾಯವಾದಿ ಕ್ಷೇತ್ರದಲ್ಲಿ ಇಬ್ಬರು, ಕೃಷಿ ಕ್ಷೇತ್ರದಲ್ಲಿ ನಾಲ್ವರು, ಕಲಾ ಸೇವೆ ಕ್ಷೇತ್ರದಲ್ಲಿ ಮೂವರು, ಸಮಾಜ ಸೇವೆ ಕ್ಷೇತ್ರದಲ್ಲಿ ಶ್ರೀಕಾಂತ ಪೂಜಾರ ಸೇರಿ 15, ಪೊಲೀಸ್ ಇಲಾಖೆ-16, ವಿಮಾನ ನಿಲ್ದಾಣ ಸರ್ಕಾರಿ ಸೇವಾ ಕ್ಷೇತ್ರದಲ್ಲಿ-2, ಶಿಕ್ಷಣ ಕ್ಷೇತ್ರ-3 ಸಾಧಕರಿಗೆ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ಹಾಗೂ ವಿವಿಧ ಮಹಿಳಾ ಕ್ಷೇತ್ರದಲ್ಲಿ ಸೇವೆಗೈದ 20 ಮಹಿಳೆಯರಿಗೆ ವೀರರಾಣಿ ಕಿತ್ತೂರ ಚೆನ್ನಮ್ಮ ಪ್ರಶಸ್ತಿ ಪ್ರದಾನ ಮಾಡಲಾಯಿತು.

PREV

Recommended Stories

ವಿಶ್ವದಲ್ಲೇ ಮೊದಲ ಬಾರಿ ಬನ್ನೇರುಘಟ್ಟದಲ್ಲಿ ಕರಡಿಗೆ ಕೃತಕ ಕಾಲು ಜೋಡಣೆ
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ