ಗಜೇಂದ್ರಗಡ: ದೇಶದ ಸಂಪತ್ತನ್ನು ಲೂಟಿ ಮಾಡುತ್ತಿದ್ದ ಬ್ರಿಟಿಷರಿಗೆ ಬೆಂಕಿಯ ಉಂಡೆಯಾಗಿದ್ದ ದಿಟ್ಟ ಮಹಿಳೆ ವೀರ ರಾಣಿ ಚೆನ್ನಮ್ಮ ನಡೆಸಿದ ಹೋರಾಟ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಿಂದ ದಾಖಲಾಗಿದೆ ಎಂದು ಪ್ರಾಚಾರ್ಯ ಶಿವಾನಂದ ಮೇಟಿ ಹೇಳಿದರು.
ಹೋರಾಟಕ್ಕೂ ಸೈ ಎನ್ನುವ ಸಿಂಹಿಣಿಯಂತೆ ಹಾಗೂ ಸಂಸ್ಥಾನದ ಜನರ ಆಶೋತ್ತರಗಳಿಗೆ ತಾಯಿಯಂತೆ ಅಕ್ಕರೆಯಿಂದ ಜನರ ನೋವು, ನಲಿವುಗಳಿಗೆ ಸ್ಪಂದಿಸುವ ಮೂಲಕ ಮಾತೃ ಹೃದಯಿಯಾಗಿದ್ದ ಚೆನ್ನಮ್ಮ ಬ್ರಿಟಿಷರ ಆಳ್ವಿಕೆಯಲ್ಲಿ ಗುಲಾಮಗಿರಿ, ಒಡೆದಾಳುವ ನೀತಿಗೆ ತಕ್ಕಪಾಠ ಕಲಿಸಿದ ಕೀರ್ತಿ ಕಿತ್ತೂರ ಚೆನ್ನಮ್ಮ ಸಲ್ಲುತ್ತದೆ ಎಂದ ಅವರು, ಕಿತ್ತೂರು ಸಂಸ್ಥಾನದ ರಕ್ಷಣೆಗಾಗಿ ಹಾಗೂ ಬ್ರಿಟಿಷರ ಆಡಳಿತ ನೀತಿಗಳ ವಿರೋಧಿಸಿ ದೇಶದಲ್ಲಿ ಸ್ವಾತಂತ್ರ‍್ಯ ಸಾಭಿಮಾನ ಬಡಿದೆಬ್ಬಿಸುವ ಕೆಲಸ ಮಾಡಿದ ಹೋರಾಟಗಾರ್ತಿ ವೀರರಾಣಿ ಚೆನ್ನಮ್ಮ ಅಗ್ರಗಣ್ಯಳು ಎಂದರು.
ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಸಿದ್ದಣ್ಣ ಬಂಡಿ, ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ, ಬಿಇಒ ಆರ್.ಎನ್. ಹುರಳಿ, ಪಿಎಸ್‌ಐ ಸೋಮನಗೌಡ ಗೌಡ್ರ, ಪುರಸಭೆ ಸ್ಥಾಯಿ ಸಮಿತಿ ಚೇರಮನ್ ಮುದಿಯಪ್ಪ ಮುಧೋಳ, ಸದಸ್ಯರಾದ ರಾಜು ಸಾಂಗ್ಲೀಕರ, ಡಾ. ಅಬ್ದುಲ್ ಕಲಾಂ ಟ್ರಸ್ಟ್ ಅಧ್ಯಕ್ಷ ರಫೀಕ್ ತೋರಗಲ್, ಸಿದ್ದಪ್ಪ ಚೋಳಿನ, ಟಿ.ವಿ. ರಾಜೂರ, ಚಂಬಣ್ಣ ಚವಡಿ, ಶರಣಪ್ಪ ರೇವಡಿ, ಮಹೇಶ ಪಲ್ಲೇದ, ಶರಣಪ್ಪ ಚಳಗೇರಿ, ಸುರೇಶ ಚವಡಿ, ಶರಣು ಸೊಬರದ ಸೇರಿ ಇತರರು ಇದ್ದರು.ಬ್ರಿಟಿಷರಿಗೆ ಸೋಲುಣಿಸಿದ ಏಕೈಕ ಸಂಸ್ಥಾನ: ಪಟ್ಟಣದ ಎಸ್.ಎಂ.ಭೂಮರಡ್ಡಿ ಪದವಿ ಕಾಲೇಜಿನಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮಳ ೨೦೦ನೇ ವಿಜಯೋತ್ಸವ ಆಚರಣೆ ನಡೆಯಿತು. ಹಿರಿಯ ಉಪನ್ಯಾಸಕ ಬಿ.ವಿ.ಮುನವಳ್ಳಿ ಮಾತನಾಡಿ, ಈ ರಾಷ್ಟ್ರ ಕಂಡ ಶ್ರೇಷ್ಠ ಹೋರಾಟಗಾರ್ತಿ ಕಿತ್ತೂರಿನ ರಾಣಿ ಚೆನ್ನಮ್ಮ ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ ಹೋರಾಡಿ ಬ್ರಿಟಿಷರನ್ನು ಸೋಲಿಸುವ ಮೂಲಕ ರಾಷ್ಟ್ರದಲ್ಲಿ ಬ್ರಿಟಿಷ್ ಸೈನ್ಯಕ್ಕೆ ಮೊದಲ ಬಾರಿಗೆ ಸೋಲು ಉಣಿಸಿದ ರಾಷ್ಟ್ರದ ಏಕೈಕ ಸಂಸ್ಥಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.
ಪ್ರಾಚಾರ್ಯ ಡಾ. ಎಸ್.ಎನ್.ಶಿವರೆಡ್ಡಿ ಮಾತನಾಡಿ, ಇಡೀ ದೇಶ ಬ್ರಿಟಿಷ್ ಪ್ರಭುತ್ವಕ್ಕೆ ಒಳಪಟ್ಟಿದ್ದ ವೇಳೆ ಬ್ರಿಟಿಷರ ಸೈನ್ಯದ ವಿರುದ್ಧ ಸಮರ್ಥವಾಗಿ ಹೋರಾಡಿ ಬ್ರಿಟಿಷ್ ಸೈನ್ಯ ಸೋಲಿಸಿದ ಕೀರ್ತಿ ವೀರರಾಣಿ ಕಿತ್ತೂರು ಚೆನ್ನಮ್ಮ ಅವರಿಗೆ ಸಲ್ಲುತ್ತದೆ ಎಂದರು.ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಎಸ್.ಕೆ. ಕಟ್ಟಿಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಎಸ್. ಚುಂಚಾ, ವೀನಾ ಎಸ್ ಗಡ್ಡಂ, ಎಸ್.ಎಚ್. ಪವಾರ್, ಎಲ್.ಕೆ. ವದ್ನಾಳ್, ಎಂ.ಎಲ್. ಕ್ವಾಟಿ, ಎಲ್.ಕೆ. ಹಿರೇಮಠ, ಮಹಾದೇವಿ ವಕ್ರಾಣಿ, ಸಂಗಮೇಶ್ ಬೆಟಗೇರಿ, ಯು.ಎನ್.ತಿಮ್ಮನಗೌಡ್ರುಸೇರಿ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಜರಿದ್ದರು.ಬಿಜೆಪಿ ಕಾರ್ಯಾಲಯ: ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ವೀರರಾಣಿ ಕಿತ್ತೂರ ಚೆನ್ನಮ್ಮ ವಿಜಯೋತ್ಸವ ಆಚರಿಸಲಾಯಿತು. ಬಿಜೆಪಿ ನಗರ ಘಟಕದ ಅಧ್ಯಕ್ಷ ರಾಜೇಂದ್ರ ಘೋರ್ಪಡೆ, ಪುರಸಭೆ ಸದಸ್ಯ ವೀರಪ್ಪ ಪಟ್ಟಣಶೆಟ್ಟಿ, ಅಂದಪ್ಪ ಅಂಗಡಿ ಸೇರಿ ಬಿಜೆಪಿ ಪಕ್ಷದ ಕಾರ್ಯಕರ್ತರು ಇದ್ದರು.