ಚೆನ್ನಮ್ಮಳ ಶೌರ್ಯ, ಸಾಹಸ ಎಂದಿಂದೆಗೂ ಮಾದರಿ: ವೆಂಕಟೇಶ ತಂಗಡಗಿ

KannadaprabhaNewsNetwork |  
Published : Oct 24, 2024, 12:37 AM IST
1ನೇ ಸುದ್ದಿಗೆ ಈ ಪೋಟೋ ಬಳಸಿಕೊಳ್ಳಿ  | Kannada Prabha

ಸಾರಾಂಶ

ಕಿತ್ತೂರು ರಾಣಿ ಚೆನ್ನಮ್ಮನ ಶೌರ್ಯ ಮತ್ತು ದಿಟ್ಟತನ ಇಂದಿನ ಸಮಾಜದಲ್ಲಿ ಮಹಿಳೆಯರಿಗೆ, ಮಕ್ಕಳಿಗೆ ಮಾದರಿಯಾಗಬೇಕು.

ಕನ್ನಡಪ್ರಭ ವಾರ್ತೆ ಕಾರಟಗಿಕಿತ್ತೂರು ರಾಣಿ ಚೆನ್ನಮ್ಮನ ಶೌರ್ಯ ಮತ್ತು ದಿಟ್ಟತನ ಇಂದಿನ ಸಮಾಜದಲ್ಲಿ ಮಹಿಳೆಯರಿಗೆ, ಮಕ್ಕಳಿಗೆ ಮಾದರಿಯಾಗಬೇಕು ಎಂದು ಕಾಂಗ್ರೆಸ್ ಮುಖಂಡ ವೆಂಕಟೇಶ ತಂಗಡಗಿ ಹೇಳಿದರು.ಪಟ್ಟಣದ ಆರ್.ಜಿ. ರಸ್ತೆಯಲ್ಲಿನ ಬಸವೇಶ್ವರ ನಗರ ಬಳಿಯ (9ನೇ ವಾರ್ಡಿನ) ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಹಮ್ಮಿಕೊಂಡಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯಲ್ಲಿ ಪುಷ್ಪನಮನ ಸಲ್ಲಿಸಿ ಮಾತನಾಡಿದರು.ಸಮಾಜದ ಒಳತಿಗಾಗಿ ಹೋರಾಡಿದ ಧೀರಮಹಿಳೆ ರಾಣಿ ಚೆನ್ನಮ್ಮನ ತ್ಯಾಗ ಬಲಿದಾನವನ್ನು ಶ್ಲಾಘನೆ ಮಾಡುವ ಮೂಲಕ ಮಕ್ಕಳಲ್ಲಿ ಸಾಧನೆಯ ಛಲವನ್ನು ತುಂಬಬೇಕು ಎಂದರು.ನಂತರ ಬಿಜೆಪಿ ಮುಖಂಡ ವೀರೇಶ ಸಾಲೋಣಿ ಮಾತನಾಡಿ, ಕಿತ್ತೂರು ರಾಣಿ ಚೆನ್ನಮ್ಮ ಎಂದರೆ ಕಿರಿಯರಿಂದ ಹಿರಿಯರಿಗೆ ಸಂಚಲನ ಮೂಡಿಸುವಂಥ ಅಪ್ರತಿಮ ವೀರ ಮಹಿಳೆ. ಅವರು ಕರ್ನಾಟಕದ ಹೆಮ್ಮೆ ಎಂದರು. ಬ್ರಿಟಿಷರೇ ದೇಶ ಬಿಟ್ಟು ತೊಲಗಿ ಎಂದು ಗಟ್ಟಿ ಧ್ವನಿಯಲ್ಲಿ ಹೇಳಿದ್ದು ರಾಣಿ ಚೆನ್ನಮ್ಮ. ಬ್ರಿಟಿಷ್ ಕಲೆಕ್ಟರನ್ನೇ ಹತ್ಯೆ ಮಾಡುವ ಮೂಲಕ ಆಂಗ್ಲರನ್ನು ನಡುಗಿಸಿದ್ದ ವೀರ ರಾಣಿ ಚೆನ್ನಮ್ಮ ಇತಿಹಾಸ ರೋಚಕವಾದುದು ಎಂದು ಸ್ಮರೀಸಿದರು.ಕಾಂಗ್ರೆಸ್ ಮುಖಂಡ ಶಿವರೆಡ್ಡಿ ನಾಯಕ ಮಾತನಾಡಿ, ಯುದ್ಧದಲ್ಲಿ ಅವರು ಸೈನ್ಯ ಮುನ್ನಡೆಸಿದ ರೀತಿ, ಧೈರ್ಯ, ಸಾಹಸ, ಕಿಚ್ಚು ಎಂದಿಗೂ ಪ್ರಸ್ತುತ ಎಂದರು.ಭವ್ಯ ಮೆರವಣಿಗೆ:ಇದಕ್ಕೂ ಮುಂಚೆ ಬಸವೇಶ್ವರ ನಗರದ ಬಸವಣ್ಣ ದೇವಸ್ಥಾನದಿಂದ ಪಂಚಮಸಾಲಿ ಸಮಾಜ ಬಾಂಧವರ ನೇತೃತ್ವದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮಳ ಭಾವಚಿತ್ರದ ಭವ್ಯ ಮೆರವಣಿಗೆ ಆರ್.ಜಿ. ರಸ್ತೆಯ ಕಿತ್ತೂರು ರಾಣಿ ಚೆನ್ನಮ್ಮ ನಾಮಫಲಕದ ವರೆಗೆ ನಡೆಯಿತು. ಈ ಸಂದರ್ಭದಲ್ಲಿ ಕುಂಭ-ಕಳಸ ಹೊತ್ತ ಮಹಿಳೆಯರು ಮೆರವಣಿಗೆಗೆ ಕಳೆಗಟ್ಟಿದರು.ಡೊಳ್ಳಿನ ಸದ್ದಿಗೆ ಯುವಕರು ಹೆಜ್ಜೆ ಹಾಕಿ ಸಂಭ್ರಮಿಸಿದರು. ಅದರಲ್ಲೂ ಪುಠಾಣಿ ಮಕ್ಕಳು ಕಿತ್ತೂರು ಚೆನ್ನಮ್ಮ ವೇಷಭೂಷಣ ತೊಟ್ಟು ಸಂಭ್ರಮಿಸಿದರು.ಮೆರವಣಿಗೆ ಬಳಿಕ ಕಿತ್ತೂರು ಚೆನ್ನಮ್ಮ ನಾಮಫಲಕಕ್ಕೆ ನೆರೆದಿದ್ದ ಗಣ್ಯರು, ಸಮಾಜ ಬಾಂಧವರು ಪೂಜೆ ಸಲ್ಲಿಸಿ ಪುಷ್ಪ ಅರ್ಪಿಸಿ ನಮಿಸಿದರು. ಈ ಸಂದರ್ಭದಲ್ಲಿ ಜಿಪಂ ಮಾಜಿ ಅಧ್ಯಕ್ಷ ಅಮರೇಶ ಕುಳಗಿ, ಪಂಚಮಸಾಲಿ ಸಮಾಜದ ಪ್ರಮುಖರಾದ ಚನ್ನಬಸಪ್ಪ ಸುಂಕದ, ಗುಂಡಪ್ಪ ಕುಳಗಿ, ಉದ್ಯಮಿಗಳಾದ ಕೆ. ನಾಗಪ್ಪ ಎಲ್ವಿಟಿ ಸಣ್ಣ ವೀರೇಶಪ್ಪ ಚಿನಿವಾಲ, ವಿಜಯಲಕ್ಷ್ಮೀ ಮೇಲಿನಮನಿ, ಬಸವರಾಜ ಕೂಡ್ಲೂರು, ಗುರುಸಿದ್ದಪ್ಪ ಯರಕಲ್, ಶರಣೇಗೌಡ ಮಾಲಿ ಪಾಟೀಲ್, ಶಿವಶರಣೇಗೌಡ ಯರಡೋಣಾ, ಚಂದ್ರಣ್ಣ ಕಾಮಧೇನು, ಶಿವಶರಣಪ್ಪ ಶಿವಪೂಜಿ, ಶರಣಪ್ಪ ಅಯೋಧ್ಯ, ಈರಣ್ಣ, ಮಲ್ಲಪ್ಪ ಕಲಿಕೇರಿ, ಜಾಲಿಹಾಳ ಬಸವರಾಜ್, ಬಸವನಗೌಡ ಮಾ.ಪಾ, ಗಂಗಪ್ಪ ನಂದಿಹಾಳ, ಮಲ್ಲಪ್ಪ ಕೂಡ್ಲೂರು, ವೀರೇಶ ಜಾಲಿಹಾಳ, ಅಮರೇಶ ಪೊ.ಪಾ, ಮುತ್ತು ಕೂಡ್ಲೂರು, ಬಸವರಾಜ ಬೇವಿನಕಟ್ಟಿ, ಶಂಕರಗೌಡ ಹಳ್ಳಳ್ಳಿ, ಶೇಖರಗೌಡ ಸೋಮಲಾಪುರ, ಶಿವಪ್ಪ ಯತ್ನಟ್ಟಿ, ದೊಡ್ಡಪ್ಪ ಮೇಳಿ, ಪುರಸಭೆ ಮುಖ್ಯಾಧಿಕಾರಿ ಸುರೇಶ, ಸದಸ್ಯರಾದ ಈಶಪ್ಪ ಇಟ್ಟಂಗಿ, ಕೆ.ಎಸ್. ಸಂಗನಗೌಡ, ದೊಡ್ಡ ಬಸವರಾಜ ಬೂದಿ, ಹಿರೇಬಸಪ್ಪ ಸಜ್ಜನ್, ಅಯ್ಯಪ್ಪ ಉಪ್ಪಾರ, ಸೋಮನಾಥ ದೊಡ್ಡಮನಿ, ಶರಣಯ್ಯಸ್ವಾಮಿ ಯರಡೋಣಿ ಸೇರಿ ಇನ್ನಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ