ಹಿರೇಕೆರೂರು: ಸಾಧನೆಗೆ ವೀರ ರಾಣಿ ಕಿತ್ತೂರ ಚೆನ್ನಮ್ಮ ಸ್ಫೂರ್ತಿ, ಅಪ್ರತಿಮ ದೇಶಭಕ್ತೆ - ಕೆಚ್ಚೆದೆಯ ಹೋರಾಟಗಾರ್ತಿಯಾಗಿದ್ದ ಚೆನ್ನಮ್ಮನ ಸ್ವಾತಂತ್ರ‍್ಯಪ್ರೇಮ, ಆಕೆ ನಡೆಸಿದ ಹೋರಾಟ ಇಂದಿನ ಇಂದಿನ ಯುವ ಪೀಳಿಗೆಗೆ ಆದರ್ಶಪ್ರಾಯ ಎಂದು ತಹಸೀಲ್ದಾರ್ ಎಂ. ರೇಣುಕಾ ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಲಾಗಿದ್ದ ವೀರ ರಾಣಿ ಕಿತ್ತೂರು ಚೆನ್ನಮ್ಮನ ವಿಜಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಮ್ಮ ಕನ್ನಡ ನಾಡಲ್ಲಿ ಹಿಂದಿನಿಂದಲೂ ಸಾಕಷ್ಟು ವೀರರು, ಶೂರರು ಇದ್ದರು. ಅದರಲ್ಲಿಯೂ ಉತ್ತರ ಕರ್ನಾಟಕದ ಭಾಗವು ಗಂಡುಗಲಿಗಳ ನಾಡೆಂದೇ ಪ್ರಸಿದ್ಧಿ ಹೊಂದಿದೆ. ಬೆಳಗಾವಿಯ ಕಿತ್ತೂರು ಸಂಸ್ಥಾನವನ್ನಾಳಿದ ವೀರ ಮಹಿಳೆ ರಾಣಿ ಚೆನ್ನಮ್ಮ ಬ್ರಿಟಿಷರನ್ನು ಗಡಗಡನೆ ನಡುಗುವಂತೆ ಮಾಡಿದ್ದಳು. ಏಕಾಂಗಿಯಾಗಿ ಅವರ ವಿರುದ್ಧ ಹೋರಾಡಿ ಕನ್ನಡಿಗರ ಕೆಚ್ಚೆದೆಯ ಹೋರಾಟಕ್ಕೆ ಸಾಕ್ಷಿಯಾದವಳು ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಶ್ರೀಧರ ಮಾತನಾಡಿ, ಬ್ರಿಟಿಷರ ವಿರುದ್ಧ ಸೆಣಸಿದ ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ ತನ್ನ ಶೌರ್ಯ, ಸಾಹಸಕ್ಕೆ ಮಾತ್ರವಲ್ಲ, ಅಂತಃಕರಣದಿಂದಾಗಿಯೂ ಜಗಮೆಚ್ಚಿದ ಮಗಳು. ಚಿಕ್ಕಂದಿನಿಂದಲೂ ಧೈರ್ಯವಂತೆಯಾಗಿದ್ದ ಚೆನ್ನಮ್ಮ ಎಂತಹ ಕಷ್ಟದ ಪರಿಸ್ಥಿತಿಯನ್ನೂ ಎದುರಿಸಬಲ್ಲವಳಾಗಿದ್ದಳು ಎಂದರು,
ಪಪಂ ಮಾಜಿ ಅಧ್ಯಕ್ಷ ಕಂಠಾಧರ ಅಂಗಡಿ, ಪಪಂ ಉಪಾಧ್ಯಕ್ಷ ರಾಜು ಕರಡಿ, ಚಂದ್ರಕಲಾ ಕೋರಿಶೆಟ್ರ, ರುದ್ರಮುನಿ ಹುಲಮನಿ, ಎಂ.ಡಿ. ಸೀಮಿಕೇರಿ, ನಾಗಪ್ಪ ಹೆಗ್ಗೇರಿ, ಎಂ.ಜಿ. ಈಶ್ವರಗೌಡ್ರ, ಸತೀಶ ಕೋರಿಗೌಡ್ರ, ರಾಜು ತಿಪ್ಪಶೆಟ್ಟಿ, ನೀಲಮ್ಮ ಹೊಸಮನಿ, ಬಸಮ್ಮ ಅಬಲೂರ, ಗೀತಾ ಪಾಟೀಲ, ಪ್ರಜಾ ಅಂಗಡಿ, ರುದ್ರಗೌಡ ಪಾಟೀಲ, ವೀರೇಶ ಕೋರಿಶೆಟ್ರ, ಹೊಳಬಸಪ್ಪ ಬಣಕಾರ, ಕುಮಾರ ಬಣಕಾರ, ಕೊಟ್ರೇಶ ಅಂಗಡಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.