ದುಗ್ಗಳ ಸದಾನಂದ
ಕನ್ನಡಪ್ರಭ ವಾರ್ತೆ ನಾಪೋಕ್ಲುಇಲ್ಲಿಗೆ ಸಮೀಪದ ಚೆರಿಯ ಪರಂಬು- ಕಲ್ಲು ಮೊಟ್ಟೆ ರಸ್ತೆ ಕಾಮಗಾರಿ ಆರಂಭಗೊಂಡಿದ್ದು ಕಾಮಗಾರಿ ಕಳಪೆಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.ನಾಗರಿಕ ಹಿತರಕ್ಷಣಾ ವೇದಿಕೆ ಹಾಗೂ ಅಂಬೇಡ್ಕರ್ ಯುವಕ ಸಂಘದ ಸತತ ಪ್ರಯತ್ನದಿಂದ ಶಾಸಕ ಪೊನ್ನಣ್ಣ ಮುತುವರ್ಜಿಯಿಂದ 10 ಲಕ್ಷ ರು. ವೆಚ್ಚದಲ್ಲಿ ಕಾಮಗಾರಿ ಆರಂಭಗೊಂಡಿದೆ. ಆದರೆ ನಿರ್ಮಾಣವಾಗುತ್ತಿರುವ ರಸ್ತೆ ಉತ್ತಮ
ಗುಣಮಟ್ಟದಿಂದ ಕೂಡಿಲ್ಲ . ರಸ್ತೆ ನಿರ್ಮಾಣ ಹಂತದಲ್ಲೇ ಬಿರುಕು ಬಿಟ್ಟು ಕಳಪೆ ಕಾಮಗಾರಿಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದು ಉತ್ತಮ ಗುಣಮಟ್ಟದ ರಸ್ತೆ ನಿರ್ಮಿಸಬೇಕೆಂದು ಒತ್ತಾಯಿಸಿದ್ದಾರೆ.ಗ್ರಾಮಸ್ಥರಾದ ಚೆರಿಯಪರಂಬುವಿನ ಪುಲಿಯಂಡ ಮೊಯಿದು,ಮೊಹಮ್ಮದ್ ರಫೀಕ್ ,ರಶೀದ್, ಅಬ್ದುಲ್
ರೆಹಮಾನ್ ,ಅಬ್ಬಾಸ್ ಮತ್ತಿತರರು ಆರೋಪ ಮಾಡಿದ್ದಾರೆ.ರಸ್ತೆ ಕಾಮಗಾರಿ ಕೈಗೊಳ್ಳುತ್ತಿದ್ದಂತೆ ಬಿರುಕು ಬಿಟ್ಟು ಕಳಪೆ ಕಾಮಗಾರಿ ಆಗುತ್ತಿದೆ. ಇದರಲ್ಲಿ
ಅಧಿಕಾರಿಗಳೂ ಶಾಮೀಲಾಗಿದ್ದಾರೆ. ಕಾಮಗಾರಿ ನಡೆಯುವ ಸಂದರ್ಭ ಕಾಮಗಾರಿಗಳ ವಿವರ ಗಳ ಮಾಹಿತಿಯನ್ನು ನೀಡಬೇಕಾಗಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.ಸಾರ್ವಜನಿಕರ ಆರೋಪವನ್ನು ಎಂಜಿನಿಯರ್ ಹಾಗೂ ಗುತ್ತಿಗೆದಾರರ ಗಮನಕ್ಕೆ ತರಲಾಗಿದೆ. ಸಮಸ್ಯೆಯನ್ನು ಸರಿಪಡಿಸಿ ಕೊಡುವ ಭರವಸೆಯನ್ನು ಅವರು ನೀಡಿದ್ದಾರೆ.-ಚೋಂದಕ್ಕಿ, ನಾಪೋಕ್ಲು ಗ್ರಾ.ಪಂ. ಪಿಡಿಒ.
----ಈ ಬಗ್ಗೆ ಇಂಜಿನಿಯರ್ ಹಾಗೂ ಗ್ರಾಮ ಪಂಚಾಯತಿಯ ಗ್ರಾಮ ಅಭಿವೃದ್ಧಿ ಅಧಿಕಾರಿ(ಪಿಡಿಒ)
ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಶಾಸಕರಿಗೆ ಕಳಂಕ ತರುವ ಕೆಲಸ ಮಾಡಬೇಡಿ. ಉತ್ತಮ ಗುಣಮಟ್ಟದ ರಸ್ತೆ ನಿರ್ಮಿಸಿ ಕೊಡಿ. ಕಾಮಗಾರಿಯನ್ನು ಸಂಬಂಧಿಸಿದವರು ಕೂಡಲೇ ಪರಿಶೀಲಿಸಿ ಕ್ರಮಕೈಗೊಳ್ಳಬೇಕು.-ಬಶೀರ್ ಆಲಿ, ಸಾಮಾಜಿಕ ಕಾರ್ಯಕರ್ತ ಚೆರಿಯ ಪರಂಬು.
---------------ರಸ್ತೆ ಕಾಮಗಾರಿಗೆ ಮರಳು ಹಾಕಿ ಕಾಂಕ್ರೀಟ್ ನಿರ್ಮಾಣ ಮಾಡಿದರೆ ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣವಾಗುತ್ತದೆ.
ಈಗ ಕಲ್ಲಿನ ಪುಡಿ ಹಾಕುತ್ತಿದ್ದಾರೆ. ಮಳೆ ಬಂದಾಗ ರಸ್ತೆ ದುಸ್ಥಿತಿಗೆ ಬರುತ್ತದೆ. ಎಂ ಸ್ಯಾಂಡ್ ಹಾಗೂ ಮರಳು ಬಳಕೆ ಮಾಡಿ ಗುಣಮಟ್ಟದ ರಸ್ತೆ ನಿರ್ಮಿಸಿ ಕೊಡಬೇಕು.-ಮೊಹಮ್ಮದ್ ರಫಿ, ಸ್ಥಳೀಯ ನಿವಾಸಿ. ಚೆರಿಯಪರಂಬು.