ರೈತರಿಂದ ಚೆಸ್ಕಾಂ ಅಧಿಕಾರಿ ಎಇಇ ಶಂಕರ್ ತರಾಟೆ

KannadaprabhaNewsNetwork |  
Published : Jan 30, 2025, 12:34 AM IST
29ಸಿಎಚ್‌ಎನ್‌51 ಹನೂರು ತಾಲೂಕಿನ ವಿವಿಧ ಗ್ರಾಮದ ರೈತ ಮುಖಂಡರು ಅಸಮರ್ಪಕ ವಿದ್ಯುತ್ ಪೂರೈಕೆ ಖಂಡಿಸಿ ಎ ಇ. ಇ ಶಂಕರ್ ಅವರನ್ನು ಹನೂರು ಪಟ್ಟಣದ ಕಚೇರಿ ಮುಂಭಾಗತೆಗೆದುಕೊಂಡಿರುವುದು. | Kannada Prabha

ಸಾರಾಂಶ

ಹನೂರು ತಾಲೂಕಿನ ವಿವಿಧ ಗ್ರಾಮದ ರೈತ ಮುಖಂಡರು ಅಸಮರ್ಪಕ ವಿದ್ಯುತ್ ಪೂರೈಕೆ ಖಂಡಿಸಿ ಎಇಇ ಶಂಕರ್‌ ಅವರನ್ನು ಹನೂರು ಕಚೇರಿ ಮುಂಭಾಗ ರೈತರು ತರಾಟೆ ತೆಗೆದುಕೊಂಡಿರುವುದು.

ಕನ್ನಡಪ್ರಭ ವಾರ್ತೆ ಹನೂರು

ಅಸಮರ್ಪಕ ವಿದ್ಯುತ್ ಸರಬರಾಜಿನಿಂದ ರೈತರ ಜಮೀನುಗಳಲ್ಲಿ ಫಸಲಿಗೆ ನೀರು ಹರಿಸಲು ವಿದ್ಯುತ್ ಸರಬರಾಜು ಪೂರೈಸುವಂತೆ ಒತ್ತಾಯಿಸಿ ರೈತರು ಪಟ್ಟಣದ ಕಚೇರಿ ಮುಂಭಾಗ ಚೆಸ್ಕಾಂ ಅಧಿಕಾರಿ ಎಇಇ ಶಂಕರ್ ಅವರಿಗೆ ತರಾಟೆಗೆ ತೆಗೆದುಕೊಂಡರು.

ಪಟ್ಟಣದ ಎಇಇ ಶಂಕರ್ ಅವರನ್ನು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ತಾಲೂಕು ಘಟಕ ಅಧ್ಯಕ್ಷ ಚಂಗಡಿ ಕರಿಯಪ್ಪ ತರಾಟೆಗೆ ತೆಗೆದುಕೊಂಡು ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲೇಮಾಳ ಗ್ರಾಪಂಗೆ ಒಳಪಡುವ ಗಾಂಧಿನಗರ ಕೆವಿಎಂ ದೊಡ್ಡಿ, ಡಿಎಂ ಸಮುದ್ರ, ಎಲ್ಲೇಮಾಳ ಹಾಗೂ ವಿವಿಧ ಗ್ರಾಮಗಳ ರೈತರ ತೋಟದ ಜಮೀನುಗಳಲ್ಲಿ ಅಸಮರ್ಪಕ ವಿದ್ಯುತ್ ಸರಬರಾಜುನಿಂದ ರೈತರ ಜಮೀನುಗಳಲ್ಲಿ ಬೆಳೆಯಲಾಗಿರುವ ಫಸಲಿಗೆ ನೀರು ಹರಿಸಲಾಗುತ್ತಿಲ್ಲ. ಸಮರ್ಪಕ ವಿದ್ಯುತ್ ಸರಬರಾಜು ರೈತರ ಪಂಪ್‌ಸೆಂಟ್‌ಗಳಿಗೆ ನೀಡುವಂತೆ ಒತ್ತಾಯಿಸಿದರು.

ರೈತರ ಪಂಪ್‌ಸೆಟ್ಟುಗಳಿಗೆ ಸರಿಯಾದ ಕ್ರಮದಲ್ಲಿ ಕಳೆದ ಮೂರು ತಿಂಗಳಿನಿಂದ ವಿದ್ಯುತ್‌ ನೀಡದೆ ಪದೇ ಪದೇ ನಿಲುಗಡೆಗೊಂಡು ವಿದ್ಯುತ್ ಬರುವುದರಿಂದ ರೈತರ ಜಮೀನಿನಲ್ಲಿರುವ ಪಂಪ್‌ಸೆಟ್ ಪರಿಕರಗಳು ಹಾಳಾಗುತ್ತಿದೆ. ಜೊತೆಗೆ ಲೋ ವೋಲ್ಟೇಜ್‌ನಿಂದ ಲೋಡ್ ಶೆಡ್ಡಿಂಗ್ ಆಗುತ್ತಿದ್ದು, ರೈತರಿಗೆ ರಾತ್ರಿ ವೇಳೆ ಬೆಳೆಗಳಿಗೆ ನೀರು ಹರಿಸಲು ಆಗದೆ ಫಸಲು ಒಣಗುತ್ತಿದೆ. ತೋಟದ ಮನೆಗಳಲ್ಲಿ ವಾಸಿಸುತ್ತಿರುವ ರೈತ ಜನ ಜಾನುವಾರುಗಳಿಗೆ ನೀರಿಲ್ಲದೆ ಸಮಸ್ಯೆ ಉಂಟಾಗಿದೆ. ಕೂಡಲೇ ವಿದ್ಯುತ್ ಸಮಸ್ಯೆ ಬಗೆಹರಿಸಿ ರೈತರ ಪಂಪ್‌ಸೆಟ್‌ಗಳಿಗೆ ಗುಣಮಟ್ಟದ ವಿದ್ಯುತ್ ನೀಡುವಂತೆ ಒತ್ತಾಯಿಸಿದರು.

ಇದೇ ಸಂದರ್ಭದಲ್ಲಿ ಎಇಇ ಶಂಕರ್ ಮಾತನಾಡಿ, ಎಲ್ಲೇಮಾಳ ಗ್ರಾಪಂ ವ್ಯಾಪ್ತಿಯ ತೋಟದ ಮನೆಗಳಲ್ಲಿ ಹೆಚ್ಚುವರಿ ಪಂಪ್‌ಸೆಟ್‌ಗಳು ಇರುವುದರಿಂದ ಪದೇಪದೇ ಲೋಡ್ ಶೆಡ್ಡಿಂಗ್ ಉಂಟಾಗುತ್ತಿದೆ. ಇದರ ಬಗ್ಗೆ 15 ದಿನಗಳಲ್ಲಿ ಇರುವ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ವಿದ್ಯುತ್ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಇದೇ ವೇಳೆ ರೈತ ಮುಖಂಡರಾದ ಪಳನಿಸ್ವಾಮಿ ನಂದೀಶ, ಮುರುಗೇಶ ಮೈಕಲ್ ಮತ್ತು ರಾಜು ವಿವಿಧ ಗ್ರಾಮದ ರೈತ ಮುಖಂಡರು ಉಪಸ್ಥಿತರಿದ್ದರು.

PREV

Recommended Stories

ಗುತ್ತಲದಲ್ಲಿ ಸಂಭ್ರಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ
ಹಳಿಯಾಳದ ಮೆಕ್ಕೆಜೋಳದಲ್ಲಿ ಕೀಟನಾಶಕಗಳ ಪ್ರಮಾಣ ಅಧಿಕ