ಅಂತರ ಜಿಲ್ಲಾ ಚದುರಂಗ ಸ್ಪರ್ಧೆ: ಹಾಸನ ಎಂ.ಎಚ್‌.ಆಕಾಶ್ ಪ್ರಥಮ

KannadaprabhaNewsNetwork |  
Published : May 22, 2024, 12:49 AM IST
ಕ್ಯಾಪ್ಷನಃ21ಕೆಡಿವಿಜಿ37ಃದಾವಣಗೆರೆಯಲ್ಲಿ ನಡೆದ ಅಂತರ್ ಜಿಲ್ಲಾ ಮಟ್ಟದ ಚದುರಂಗ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳು. | Kannada Prabha

ಸಾರಾಂಶ

U-19 Chess Competition by District Chess Association, ಜಿಲ್ಲಾ ಚೆಸ್ ಅಸೋಸಿಯೇಷನ್ ವತಿಯಿಂದ ಯು-19 ಚದುರಂಗ ಸ್ಪರ್ಧೆ

- ವಿವಿಧ ಜಿಲ್ಲೆಗಳಿಂದ 130ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗಿ - - - ಕನ್ನಡಪ್ರಭ ವಾರ್ತೆ, ದಾವಣಗೆರೆ ನಗರದ ಗುರು ಭವನದಲ್ಲಿ ದಾವಣಗೆರೆ ಜಿಲ್ಲಾ ಚೆಸ್ ಅಸೋಸಿಯೇಷನ್ ವತಿಯಿಂದ ಯು-19 ಅಂತರ ಜಿಲ್ಲಾಮಟ್ಟದ ಚದುರಂಗ ಸ್ಪರ್ಧೆ ನಡೆಯಿತು. ಪಂದ್ಯಾವಳಿಯಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಸುಮಾರು 130ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿದ್ದರು.

ಸ್ವಿಸ್ ಲೀಗ್ ಮಾದರಿ ಪಂದ್ಯಾವಳಿಯಲ್ಲಿ ಹಾಸನದ ಎಂ.ಎಚ್.ಆಕಾಶ್ ಪ್ರಥಮ ಸ್ಥಾನ, ದಾವಣಗೆರೆ ವರದ್ ಕುಬ್ಸದ್ ದ್ವಿತೀಯ ಸ್ಥಾನ, ಶಿವಮೊಗ್ಗದ ವಿಲಾಸ್ ಆಂಡ್ರೆ ತೃತೀಯ ಸ್ಥಾನ, ಧಾರವಾಡದ ಪೃಥ್ವಿ ಬಳ್ಳಾರಿಮಠ, 4ನೇ ಸ್ಥಾನ ತನುಷ್ ಕುಲಕರ್ಣಿ, 5ನೇ ಸ್ಥಾನ ಜಿ.ಎಸ್.ನಿಶ್ಚಲ್ 6ನೇ ಸ್ಥಾನ ಬಿ.ಜಿ.ಇಬ್ಬನಿ 7ನೇ ಸ್ಥಾನ, ಕೆ.ಜತಿನ್ 8ನೇ ಸ್ಥಾನ, ಸಿಂಚನ ಗಿರೀಶ್ 9ನೇ ಸ್ಥಾನ, ಶೌರ್ಯ ವಿ.ಭಾರತಿ 10ನೇ ಸ್ಥಾನವನ್ನು ಪಡೆದರು.

ವಿಜೇತರಿಗೆ ದಾವಣಗೆರೆ ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷರಾದ ದಿನೇಶ್ ಕೆ. ಶೆಟ್ಟಿ ಬಹುಮಾನ ವಿತರಿಸಿದರು.

ವಿಶೇಷ ಬಹುಮಾನವಾಗಿ 7 ವರ್ಷದೊಳಗಿನ ಮಕ್ಕಳ ವಿಭಾಗದಲ್ಲಿ ಬಳ್ಳಾರಿಯ ಎಸ್.ಎಸ್.ಸೌರ್ಯ ಸೌರಭ (ಪ್ರಥಮ), ಸಮರ್ಥ್ ಪೂಜಾರ್ (ದ್ವಿತೀಯ), ಎಂ.ಎಂ. ಜನನಿ (ತೃತೀಯ), ಚಂದನ್ ವಿಷ್ಣು (4ನೇ ಸ್ಥಾನ), ತ್ರೇ ಕಾಸ್ಕರ್ (6ನೇ ಸ್ಥಾನ), ಎಸ್. ರಿತ್ತು ಸಿರಿ (7ನೇ ಸ್ಥಾನ), 8 ವರ್ಷದೊಳಗಿನ ವಿಭಾಗದಲ್ಲಿ ಎಸ್.ಬಿ. ಅಭಿಮನ್ಯು (ಪ್ರಥಮ), ಎಂ.ಎಂ. ಸಾನ್ವಿಕ (ದ್ವಿತೀಯ), ಸ್ವರೂಪ್ ಮಲ್ನಾಡ್ (ನಾಲ್ಕನೇ), ಡಿ.ಅದ್ವಿಕ್ (5ನೇ ಸ್ಥಾನ), 10 ವರ್ಷದೊಳಗಿನ ವಿಭಾಗದಲ್ಲಿ ಚಿತ್ರದುರ್ಗದ ಆಧ್ಯಾ ಡಿ.ಎಂ. ಗೌರಿ (ಪ್ರಥಮ), ದಾವಣಗೆರೆಯ ಮೊಹಮ್ಮದ್ ಆರ್ಯನ್ (ದ್ವಿತೀಯ), ಎ.ಎಸ್. ಮಣಿಕಂಠ (ತೃತೀಯ), ಎಸ್.ಕೆ. ಕಿಶನ್ (4ನೇ ಸ್ಥಾನ), ಸ್ಕಂದ ಎಡ್ವರ್ಡ್ (5ನೆ ಸ್ಥಾನ).

12 ವರ್ಷದ ವಿಭಾಗದಲ್ಲಿ ಶಿವಮೊಗ್ಗದ ಎಚ್.ಎಸ್. ರಾಘವೇಂದ್ರ ಭೂಷಣ್ (ಪ್ರಥಮ), ಸಿದ್ಧಾರ್ಥ್ ಸೋಮು ಸನ್ಗನಗೌಡ (ದ್ವಿತೀಯ), ವಿರಾಟ್ ಎಂ.ಜಾವಲಿ (ತೃತೀಯ), ಆಮುಂಜಿ ವಿರಾಟ್ ನಾಯಕ್ (4ನೇ), ಜಿ.ವೈಭವ್ (5ನೇ ಸ್ಥಾನ).

14 ವರ್ಷದೊಳಗಿನ ವಿಭಾಗದಲ್ಲಿ ಹುಬ್ಬಳ್ಳಿಯ ಶ್ರೇಯಸ್ ಹುಬ್ಬಳ್ಳಿ (ಪ್ರಥಮ), ಎಂ.ಎಸ್. ಅವ್ಯತ್ (ದ್ವಿತೀಯ), ಎಸ್.ಡಿ. ಜೀವನ ಗೌಡ (ತೃತೀಯ), ಎಂ.ಎನ್. ಶರತ್ ಕುಮಾರ್ (4ನೇ), ಭುವನ್ ಎಸ್.ಸೂರ್ಯ (5ನೇ).

16 ವರ್ಷದೊಳಗಿನ ವಿಭಾಗದಲ್ಲಿ ದಾವಣಗೆರೆಯ ಎಂ.ಎಸ್. ದಿಗಂತ್ (ಪ್ರಥಮ), ಗ್ರೀಷ್ಮ ವೈ. (ದ್ವಿತೀಯ), ಎಸ್.ಆರ್. ಪ್ರಜ್ವಲ್ (ತೃತೀಯ), ಎಸ್.ಎಸ್. ಸುಚೇತನ್ (4ನೇ), ಜಿ.ಎನ್. ವೇದಾಂತ್ ಜಿ.ಎನ್. 5ನೇ ಸ್ಥಾನ ಪಡೆದಿದ್ದಾರೆ.

ಈ ಸಂದರ್ಭ ಸಂಘದ ಆಯೋಜಕ ಯುವರಾಜ, ಮಂಜುಳಾ ಯುವರಾಜ್, ವೈ.ಎಂ. ತರುಣ್, ಅಂತರ ರಾಷ್ಟ್ರೀಯ ತೀರ್ಪುಗಾರರಾದ ಪ್ರಾಣೇಶ್ ಯಾದವ್, ವಿಜಯ್ ಕುಮಾರ್ ಇತರರು ಇದ್ದರು.

- - - -21ಕೆಡಿವಿಜಿ37ಃ:

ದಾವಣಗೆರೆಯಲ್ಲಿ ನಡೆದ ಅಂತರ್ ಜಿಲ್ಲಾಮಟ್ಟದ ಚದುರಂಗ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳನ್ನು ಅಭಿನಂದಿಸಲಾಯಿತು.

PREV

Recommended Stories

ದಕ್ಷಿಣ ಭಾರತದ ಮೊದಲ ಆ್ಯಪಲ್ ಸ್ಟೋರ್ ಬೆಂಗಳೂರಲ್ಲಿ ಆರಂಭ
ಜೈಲಲ್ಲಿರುವ ಸಿಎಂ, ಸಚಿವರ ಆಗಬೇಕು. ಏಕೆ ಗೊತ್ತಾ?