ತಾಳ್ಮೆಯ ಪಾಠ ಕಲಿಸುವ ಚೆಸ್‌ ಕ್ರೀಡೆ

KannadaprabhaNewsNetwork | Published : Sep 11, 2024 1:06 AM

ಸಾರಾಂಶ

ಭಾರತೀಯರು ಜಗತ್ತಿಗೆ ಕೊಟ್ಟ ಬಹು ದೊಡ್ಡ ಕೊಡುಗೆ ಚದುರಂಗ ಆಟ. ಈ ಆಟ ಮನುಷ್ಯನ ಬುದ್ಧಿ ಚುರುಕಾಗುವಂತೆ ಮಾಡುತ್ತದೆ. ತಾಳ್ಮೆಯ ಪಾಠ ಕಲಿಸುತ್ತದೆ ಎಂದು ಮಹಾಲಿಂಗಪುರ ಪುರಸಭೆ ಅಧ್ಯಕ್ಷ ಯಲ್ಲಣ್ಣಗೌಡ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಭಾರತೀಯರು ಜಗತ್ತಿಗೆ ಕೊಟ್ಟ ಬಹು ದೊಡ್ಡ ಕೊಡುಗೆ ಚದುರಂಗ ಆಟ. ಈ ಆಟ ಮನುಷ್ಯನ ಬುದ್ಧಿ ಚುರುಕಾಗುವಂತೆ ಮಾಡುತ್ತದೆ. ತಾಳ್ಮೆಯ ಪಾಠ ಕಲಿಸುತ್ತದೆ ಎಂದು ಮಹಾಲಿಂಗಪುರ ಪುರಸಭೆ ಅಧ್ಯಕ್ಷ ಯಲ್ಲಣ್ಣಗೌಡ ಪಾಟೀಲ ಹೇಳಿದರು.

ಸ್ಥಳೀಯ ಶ್ರೀ ಬಸವಾನಂದ ಶಾಲೆಯಲ್ಲಿ ನಡೆದ ಶಾಲಾ ಶಿಕ್ಷಣ ಇಲಾಖೆ, ಜಿಪಂ ಬಾಗಲಕೋಟೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಪದನಿಮಿತ್ತ ಯೋಜನಾ ಸಮನ್ವಯಾಧಿಕಾರಿಗಳ ಕಾರ್ಯಾಲಯ ಮುಧೋಳ, ಶ್ರೀ ಬಸವಾನಂದ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಮಹಾಲಿಂಗಪುರ ಇವರ ಸಹಯೋಗದಲ್ಲಿ ಮುಧೋಳ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮಟ್ಟದ ಚೆಸ್ ಕ್ರೀಡಾಕೂಟ ಉದ್ಘಾಟಸಿ ಮಾತನಾಡಿದ ಅವರು, ಮಕ್ಕಳು ಆಟದಲ್ಲಿ ಪಾಲ್ಗೊಳ್ಳುವುದು ಬಹಳ ಮುಖ್ಯ. ಸೋಲು ಗೆಲವು ಮುಖ್ಯ ಅಲ್ಲ. ಭಾಗವಹಿಸುವುದು ಮುಖ್ಯವಾಗುತ್ತದೆ ಎಂದರು.

ನಂತರ ಮಾತನಾಡಿದ ಶಾಲೆಯ ನಿರ್ದೇಶಕ ಡಾ.ಬಿ.ಡಿ.ಸೋರಗಾಂವಿ ಭಾರತೀಯರಾದ ನಾವು ವಿಶ್ವಕ್ಕೆ ಕೊಡುಗೆ ಕೊಡುತ್ತೇವೆ. ಆದರೆ ಅದನ್ನು ಕಲಿತು ಅವರು ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳುತ್ತಾರೆ. ಕಳಿಸಿದವರು ನಾವು ಹಿಂದೆ ಉಳಿಯುತ್ತೇವೆ. ಇದು ವಿಪರ್ಯಾಸವೇ ಸರಿ. ಹಾಕಿ, ಕಬ್ಬಡಿ, ಚೆಸ್ ಇನ್ನು ಅನೇಕ ಆಟಗಳು ನಮ್ಮ ದೇಶದ ಹೆಮ್ಮೆಯ ಆಟಗಳು. ಇವು ಹುಟ್ಟಿದ್ದು ಭಾರತದಲ್ಲೇಯಾದರು ಇಂದು ವಿಶ್ವ ಮಟ್ಟದಲ್ಲಿ ಬೆಳೆದು ನಿಂತಿವೆ. ಇದು ನಮ್ಮ ಹೆಮ್ಮೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮುಧೋಳ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್.ಎಂ.ಕುರಣಿ, ಇಂದಿನ ಮಕ್ಕಳು ಮೊಬೈಲ್ ಕಡೆ ಹೆಚ್ಚು ಆಸಕ್ತಿ ಹೊಂದಿದ್ದು, ಇದು ಅವರನ್ನು ಮಾನಸಿಕ ಮತ್ತು ದೈಹಿಕವಾಗಿ ದುರ್ಬಲರನ್ನಾಗಿ ಮಾಡುತ್ತದೆ. ಪಾಲಕರು ಮಕ್ಕಳನ್ನು ಮೈದಾನದಲ್ಲಿ ಆಡಲು ಕಳುಹಿಸಿಬೇಕೆ ಹೊರತು ಅವರ ಕೈಗೆ ಮೊಬೈಲ್ ಕೊಡಬಾರದು. ಅತಿಯಾದ ಮೊಬೈಲ್ ಬಳಕೆಯಿಂದ ಮಕ್ಕಳು ಮಾನಸಿಕ ಸೀಮಿತ ಕಳೆದುಕೊಳ್ಳುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ದಾಖಲಾಗುತ್ತಿರುವುದು. ಈ ಯುಗದ ದುರಂತವೇ ಆಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಲೆಯ ಟ್ರಸ್ಟ್ ಕಮಿಟಿ ಸದಸ್ಯರಾದ ಚನ್ನಪ್ಪ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಿವಾನಂದ ತಾಳಿಕೋಟಿ, ಕಲ್ಲಪ್ಪ ಚಿಂಚಲಿ, ಮಹಾದೇವಪ್ಪಾ ಅಂಗಡಿ, ಪ್ರಭು ಬೆಳಗಲಿ, ಎಸ್.ಎಂ.ಕಟಗಿ, ಪುರಸಭೆ ಉಪಾಧ್ಯಕ್ಷೆ ಶೀಲಾ ರಾಜೇಶ ಭಾವಿಕಟ್ಟಿ, ವಲಯ ಮುಖ್ಯಸ್ಥರು ಪ್ರೌಢ ಶಾಲಾ ವಿಭಾಗದ ಪಿ.ಸಿ.ಪಕೀರನವರ, ರಬಕವಿ ಬನಹಟ್ಟಿ ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಸಂಗಮೇಶ ಮುಖರ್ತಿಹಾಳ, ಸಿದ್ಧಾರೂಢ ಮುಗಳಖೋಡ, ಎಸ್.ಕೆ.ಗಿಂಡೆ ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ಹುಮಾಯಿನ ಸುತಾರ ನಿರೂಪಿಸಿ, ವಂದಿಸಿದರು. ಎಸ್ ಕೆ ಗಿಂಡೆ ಸ್ವಾಗತಿಸಿದರು. ಎಸ್.ಡಿ.ಕಾಂಬಳ್ಕೆರ ಮಾಲಾರ್ಪಣೆ ಕಾರ್ಯಕ್ರಮ ನಡೆಸಿಕೊಟ್ಟರು.

Share this article