ಚೆಯ್ಯಂಡಾಣೆ: ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ

KannadaprabhaNewsNetwork |  
Published : Nov 07, 2026, 02:45 AM IST
ಚೆಯ್ಯಂಡಾಣೆ ಕನ್ನಡ ರಾಜ್ಯೋತ್ಸವ ಕ್ರೀಡಾ ಸಮಿತಿಯ ಅಧ್ಯಕ್ಷರಾದಚೇನಂಡ ಸಂಪತ್ ಅವರು ತೆಂಗಿನಕಾಯಿಗೆ ಗುಂಡುಹೊಡೆಯುವ ಸ್ಪರ್ಧೆಯನ್ನು ಉದ್ಘಾಟಿಸಿದರು | Kannada Prabha

ಸಾರಾಂಶ

ಚೆಯ್ಯಂಡಾಣೆ ಕನ್ನಡ ರಾಜ್ಯೋತ್ಸವ ಕ್ರೀಡಾ ಸಮಿತಿ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನರಿಯಂದಡ ಕೇಂದ್ರ ಪ್ರೌಢಶಾಲೆಯ ಮೈದಾನದಲ್ಲಿ ನರಿಯಂದಡ, ಕೊಕೇರಿ ಹಾಗೂ ಚೇಲಾವರ ಗ್ರಾಮಸ್ಥರಿಗಾಗಿ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಆಯೋಜಿಸಲಾಯಿತು.

ನಾಪೋಕ್ಲು : ಚೆಯ್ಯಂಡಾಣೆ ಕನ್ನಡ ರಾಜ್ಯೋತ್ಸವ ಕ್ರೀಡಾ ಸಮಿತಿ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನರಿಯಂದಡ ಕೇಂದ್ರ ಪ್ರೌಢಶಾಲೆಯ ಮೈದಾನದಲ್ಲಿ ನರಿಯಂದಡ, ಕೊಕೇರಿ ಹಾಗೂ ಚೇಲಾವರ ಗ್ರಾಮಸ್ಥರಿಗಾಗಿ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಆಯೋಜಿಸಲಾಯಿತು.

ಸ್ಪರ್ಧೆಯಲ್ಲಿ 0.22 ಎಂ.ಎಂ. ಹಾಗೂ 12 ಬೋರ್ ಎಂಬ ಎರಡು ವಿಭಾಗಗಳಲ್ಲಿ ಪ್ರತ್ಯೇಕ ಸ್ಪರ್ಧೆಗಳನ್ನು ನಡೆಸಲಾಯಿತು. 0.22 ಎಂ.ಎಂ. ವಿಭಾಗದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯ ಬಹುಮಾನ ಪ್ರಾಯೋಜಕರು ಹಾಗೂ ಕ್ರೀಡಾಕೂಟ ಸಮಿತಿಯ ಅಧ್ಯಕ್ಷರಾದ ಚೇನಂಡ ಸಂಪತ್ ಸ್ಪರ್ಧೆಯನ್ನು ಉದ್ಘಾಟಿಸಿದರು. 12ನೇ ಬೋರ್ ವಿಭಾಗದ ಸ್ಪರ್ಧೆಯ ಬಹುಮಾನ ಪ್ರಾಯೋಜಕರಾದ ಚೇನಂಡ ಸಚಿನ್ ಅಯ್ಯಪ್ಪ ಅವರು ಈ ವಿಭಾಗದ ಸ್ಪರ್ಧೆಗೆ ಚಾಲನೆ ನೀಡಿದರು. ವಿಜೇತರ ವಿವರ: 0.22 ಎಂ.ಎಂ. ವಿಭಾಗ: ಪ್ರಥಮ ಸ್ಥಾನ: ಬಿದ್ದಂಡ ನಮೂ ಚಿಯಣ್ಣ , ದ್ವಿತೀಯ ಸ್ಥಾನ: ಬಿದ್ದಂಡ ರಾಜೇಶ್ ಅಚ್ಚಯ್ಯ, ತೃತೀಯ ಸ್ಥಾನ: ಚೇನಂಡ ಹರ್ಷ ಅಯ್ಯಣ್ಣ , 12 ಬೋರ್ ವಿಭಾಗ: ಪ್ರಥಮ ಸ್ಥಾನ: ಚೇನಂಡ ಬೋಪಣ್ಣ , ದ್ವಿತೀಯ ಸ್ಥಾನ: ಚೆಯ್ಞಂಡ ಲವ ಅಪ್ಪುಚ್ಚು , ತೃತೀಯ ಸ್ಥಾನ: ಚೇನಂಡ ಸಚಿನ್ ಅಯ್ಯಪ್ಪ ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಈ ಕ್ರೀಡಾಕೂಟದಲ್ಲಿ ಕನ್ನಡ ರಾಜ್ಯೋತ್ಸವ ಕ್ರೀಡಾಕೂಟ ಸಮಿತಿ ಪದಾಧಿಕಾರಿಗಳು ಸದಸ್ಯರು ಹಾಗೂ ಕ್ರೀಡಾಭಿಮಾನಿಗಳು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಬ್ಬಿಗೆ ಸ್ಥಳೀಯ ರಿಕವರಿ ಆಧಾರದಲ್ಲಿ ನ್ಯಾಯಯುತ ಬೆಲೆ ನೀಡಲು ಆಗ್ರಹ
ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಿದ್ದರೆ ಸೂಕ್ತ ಕ್ರಮ