ಒಕ್ಕಲಿಗರಿಗೆ ಸೂಕ್ತ ಸ್ಥಾನಮಾನ ನೀಡಲು ಮುಖ್ಯಮಂತ್ರಿಗೆ ಆಗ್ರಹ

KannadaprabhaNewsNetwork |  
Published : Sep 11, 2026, 02:30 AM IST
ಜಿಲ್ಲೆಯ ಒಕ್ಕಲಿಗ ಮುಖಂಡರು ಸಿಎಂ ಡಿ.ಕೆ. ಶಿವಕುಮಾರ ಅವರನ್ನು ಸನ್ಮಾನಿಸಿದರು. | Kannada Prabha

ಸಾರಾಂಶ

ಹಿಂದೆ ಉತ್ತರ ಕನ್ನಡ ಜಿಲ್ಲೆಯ ಭೇಟಿಯ ಸಂದರ್ಭದಲ್ಲಿ ನಮ್ಮ ಸರ್ಕಾರ ಬಂದರೆ ಒಕ್ಕಲಿಗ ಸಮುದಾಯಕ್ಕೆ ಸೂಕ್ತ ರಾಜಕೀಯ ಸ್ಥಾನಮಾನ ನೀಡುವ ಭರವಸೆಯನ್ನು ನೀವು ನೀಡಿದ್ದೀರಿ. ಇದೀಗ ಮುಖ್ಯಮಂತ್ರಿಯಾಗಿರುವ ನೀವು ಒಕ್ಕಲಿಗರಿಗೆ ಸೂಕ್ತ ಸ್ಥಾನಮಾನ ನೀಡಬೇಕು ಎಂದು ಮುಖಂಡರು ಆಗ್ರಹಿಸಿದರು.

ಕುಮಟಾ: ಜಿಲ್ಲೆಯ ವಿವಿಧೆಡೆಗಳಿಂದ ಬೆಂಗಳೂರಿಗೆ ತೆರಳಿದ ಹಾಲಕ್ಕಿ ಒಕ್ಕಲಿಗ, ಗ್ರಾಮ ಒಕ್ಕಲಿಗ ಹಾಗೂ ಇತರ ಒಕ್ಕಲಿಗ ಸಮುದಾಯದ ಪ್ರಮುಖರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರನ್ನು ಗೃಹಕಚೇರಿ ಕೃಷ್ಣಾದಲ್ಲಿ ಭೇಟಿಯಾಗಿ ಜಿಲ್ಲೆಯ ಸಮಗ್ರ ಒಕ್ಕಲಿಗ ಸಮುದಾಯದ ವತಿಯಿಂದ ಗೌರವಿಸಿದರು.

ಬಳಿಕ ಮನವಿ ಸಲ್ಲಿಸಿ, ಉತ್ತರ ಕನ್ನಡ ಜಿಲ್ಲೆಯ ಒಕ್ಕಲಿಗರು ಆರ್ಥಿಕವಾಗಿ, ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿಯೂ ಹಿಂದುಳಿದವರಾಗಿದ್ದಾರೆ. ಪ್ರತಿ ಹಂತದಲ್ಲೂ ರಾಜಕೀಯ ಸ್ಥಾನಮಾನವನ್ನು ನೀಡುವಾಗ ಜಿಲ್ಲೆಯ ಒಕ್ಕಲಿಗರನ್ನು ಕಡೆಗಣಿಸಲಾಗುತ್ತಿದೆ. ಸೂಕ್ತ ರಾಜಕೀಯ ಸ್ಥಾನಮಾನ ಇಲ್ಲದಿರುವುದು ಒಕ್ಕಲಿಗರ ಹಿನ್ನಡೆಗೆ ಕಾರಣವಾಗಿದೆ.

ಹಿಂದೆ ಉತ್ತರ ಕನ್ನಡ ಜಿಲ್ಲೆಯ ಭೇಟಿಯ ಸಂದರ್ಭದಲ್ಲಿ ನಮ್ಮ ಸರ್ಕಾರ ಬಂದರೆ ಒಕ್ಕಲಿಗ ಸಮುದಾಯಕ್ಕೆ ಸೂಕ್ತ ರಾಜಕೀಯ ಸ್ಥಾನಮಾನ ನೀಡುವ ಭರವಸೆಯನ್ನು ನೀವು ನೀಡಿದ್ದೀರಿ. ಇದೀಗ ನಿಮ್ಮದೇ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿರುವ ನೀವು ಒಕ್ಕಲಿಗರಿಗೆ ಸೂಕ್ತ ಸ್ಥಾನಮಾನ ನೀಡಬೇಕು.

ಜಿಲ್ಲೆಯ ಎಲ್ಲ ಒಕ್ಕಲಿಗರು ಸಭೆ ಸೇರಿ ನಿರ್ಣಯ ಕೈಗೊಂಡಿದ್ದು ಜಿಲ್ಲೆಯ ಒಕ್ಕಲಿಗರಿಗೆ ಸ್ಥಾನಮಾನ ನೀಡುವ ನಿಟ್ಟಿನಲ್ಲಿ ಕಾಂಗ್ರೆಸ್ ಮುಖಂಡ, ಹೋರಾಟಗಾರ ಭಾಸ್ಕರ ಪಟಗಾರ ಅವರಿಗೆ ನಿಗಮ ಮಂಡಳಿಯಲ್ಲಿ ಅಧ್ಯಕ್ಷ ಸ್ಥಾನ ನೀಡಬೇಕೆಂದು ಒತ್ತಾಯಿಸಿದರು.

ಈ ವೇಳೆ ಜಿಲ್ಲಾ ಹಾಲಕ್ಕಿ ಒಕ್ಕಲಿಗ ಸಂಘದ ಅಧ್ಯಕ್ಷ ಹನುಮಂತ ಗೌಡ, ತಾಲೂಕಾಧ್ಯಕ್ಷ ಗೋವಿಂದ ಗೌಡ ಗೋಕರ್ಣ, ಗ್ರಾಮ ಒಕ್ಕಲಿಗ ಸಮುದಾಯದ ಜಿ.ಕೆ. ಪಟಗಾರ ಕಾಗಾಲ, ಚಂದಾವರ ಸೀಮೆ ಹನುಮಂತ ದೇವಸ್ಥಾನದ ಮೊಕ್ತೇಸರ ಎಂ.ಕೆ. ಪಟಗಾರ, ಉದ್ಯಮಿ ಗಣಪತಿ ಪಟಗಾರ ಹಿತ್ತಲಮಕ್ಕಿ, ಗ್ರಾಮ ಒಕ್ಕಲಿಗ ಸಂಘದ ತಾಲೂಕಾಧ್ಯಕ್ಷ ಮಂಜುನಾಥ ಪಟಗಾರ, ವಕೀಲ ವಿನಾಯಕ ಪಟಗಾರ, ಸಿದ್ದಾಪುರ ಸಂಘದ ಅಧ್ಯಕ್ಷ ಮೋಹನ ಗೌಡ ಕಿಲವಳ್ಳಿ, ಶಿರಸಿ ಸಂಘದ ಅಧ್ಯಕ್ಷ ಉದಯ ಗೌಡ, ಯಲ್ಲಾಪುರ ಸಂಘದ ಅಧ್ಯಕ್ಷ ಶೇಖರ ಪಟಗಾರ, ಗ್ಯಾರಂಟಿ ಸಮಿತಿ ಕುಮಟಾ ತಾಲೂಕಾಧ್ಯಕ್ಷ ಅಶೋಕ ಗೌಡ, ಕೃಷ್ಣ ಗೌಡ ದೀವಗಿ, ಕುಪ್ಪು ಗೌಡ ಹೊನ್ನಾವರ, ಅರುಣ ಗೌಡ ಗೋಕರ್ಣ, ಕೆ.ಪಿ. ಗೌಡ ಸಿದ್ದಾಪುರ, ಉಮೇಶ ಗೌಡ ಸಿದ್ದಾಪುರ, ಎನ್.ಡಿ. ಗೌಡ ಸಿದ್ದಾಪುರ, ಮಾರುತಿ ಗೌಡ ಅಘನಾಶಿನಿ, ಬಲೀಂದ್ರ ಗೌಡ ಮೂಲಿಕೇರಿ, ಪ್ರಭು ಪಟಗಾರ ಹೊನ್ನಾವರ, ಎಂ.ಎನ್. ಪಡಗಾರ ಕುಮಟಾ, ಶಿರಸಿ ಕರೆ ಒಕ್ಕಲಿಗ ಸಂಘದ ಚಂದ್ರಕಾಂತ ಗೌಡ ಶಿರಸಿ, ಶ್ರೀಧರ ಗೌಡ, ಒಕ್ಕಲಿಗ ಹನುಮಂತ ಪಟಗಾರ ಊರಕೇರಿ, ಈಶ್ವರ ಪಟಗಾರ ಯಲ್ಲಾಪುರ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

80 ಡೆಸಿಬಲ್‌ ಮೀರಿದರೆ ಡಿಜೆ ಬಾಕ್ಸ್‌ ವಶ, ಪ್ರಕರಣ ದಾಖಲು
ಜನಾರ್ದನ ಪೂಜಾರಿ ಆಪ್ತ ಪದ್ಮರಾಜ್‌ ಪೂಜಾರಿ ದ.ಕ. ಕಾಂಗ್ರೆಸ್‌ ಅಧ್ಯಕ್ಷ