ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಮೈಸೂರು ಸಂಸ್ಥಾನದ 14ನೇ ದೊರೆ ಚಿಕ್ಕದೇವರಾಜ ಒಡೆಯರ್ ಅವರ 259ನೇ ಜನ್ಮದಿನ, ಎನ್ಎಸ್ಎಸ್ ದಿನಾಚರಣೆ ಅಂಗವಾಗಿ ಪಟ್ಟಣದ ಅಚೀವರ್ಸ್ ಅಕಾಡೆಮಿಯಿಂದ ಇತ್ತೀಚೆಗಷ್ಟೇ ಗುರುತಿಸಿದ್ದ ಜೋಡಿ ನೆಲಮಾಳಿಗೆ ಸ್ವಚ್ಛತಾ ಅಭಿಯಾನ ನಡೆಯಿತು.ಅಚೀವರ್ಸ್ ಅಕಾಡೆಮಿ ಸಂಸ್ಥಾಪಕ ಡಾ.ರಾಘವೇಂದ್ರ ಮಾತನಾಡಿ, ಚಿಕ್ಕದೇವರಾಜ ಒಡೆಯರ್ ಅವರು ಮಂಡ್ಯ ಜಿಲ್ಲಾ ರೈತರ ಹಿತದೃಷ್ಟಿಯಿಂದ ಚಿಕ್ಕದೇವರಾಜ ಅಣೆಕಟ್ಟೆ ಎಂಬ ನೀರಾವರಿ ಯೋಜನೆಯನ್ನು 350 ವರ್ಷಗಳ ಹಿಂದೆ ನಿರ್ಮಿಸಿದರು. ಅಲ್ಲದೇ, ಮೈಸೂರು ರಾಜ್ಯದ ಅತ್ಯುತ್ತಮ ಆಡಳಿತಗಾರರಾಗಿದ್ದ ಇವರು ಮೈಸೂರು ಪ್ರಾಂತ್ಯದ ಜನಗಳ ಹಿತದೃಷ್ಟಿಯಿಂದ ಉತ್ತಮ ಆಡಳಿತವನ್ನು ನೀಡಿದ್ದಾರೆ ಎಂದರು.
ಜಿಲ್ಲೆಯ ಹಳ್ಳಿಗಾಡಿನಲ್ಲಿ ಹಳೆ ಕಾಲುವೆ ಎಂದೇ ಪ್ರಸಿದ್ಧಿಯಾಗಿರುವ ಸಿಡಿಎಸ್ ನಾಲೆಯು ಇಂದಿಗೂ ರೈತರ ಜೀವನಾಡಿಯಾಗಿದೆ ಎಂದರು. ಶೇಷಾದ್ರಿಪುರಂ ಕಾಲೇಜಿನ ವಿದ್ಯಾರ್ಥಿಗಳು ಶ್ರಮದಾನದಲ್ಲಿ ಭಾಗವಹಿಸಿದರು.ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಸದಸ್ಯೆ ಎನ್. ಸರಸ್ವತಮ್ಮ, ಹಿರಿಯ ಗಾಂಧಿವಾದಿ ಡಾ.ಬಿ ಸುಜಯ್ ಕುಮಾರ್, ಸಮರ್ಪಣಾ ಟ್ರಸ್ಟ್ ಅಧ್ಯಕ್ಷ ಎಸ್ ಜಯಶಂಕರ್, ಪ್ರಜ್ಞಾವಂತರ ವೇದಿಕೆ ಕಾರ್ಯದರ್ಶಿ ಚಿಕ್ಕ ತಮ್ಮೆಗೌಡ, ಶೇಷಾದ್ರಿಪುರಂ ಪದವಿ ಕಾಲೇಜಿನ ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಗುರುಮೂರ್ತಿ ಭಟ್, ಅಧ್ಯಾಪಕ ಕುಮಾರ್, ಮುಸ್ಲಿಂ ಸೌಹಾರ್ದ ವೇದಿಕೆ ಅಧ್ಯಕ್ಷ ಅಪ್ಸರ್ ಖಾನ್, ಆಯುಬ್, ವಿದ್ಯಾರ್ಥಿಗಳಾದ ವಿದ್ಯಾ, ದುಶ್ಯಂತ್, ಅಮಿತ್, ಇಂಚರ ಸೇರಿದಂತೆ ಇತರರು ಇದ್ದರು.
ಶಿಂಷಾ ನದಿಗೆ ಕಾಲುಜಾರಿ ಬಿದ್ದು ವೃದ್ಧೆ ಸಾವುಮದ್ದೂರು:ದೇವರ ದರ್ಶನಕ್ಕೆ ಬಂದಿದ್ದ ವೃದ್ಧೆ ಕಾಲು ಜಾರಿ ನದಿಗೆ ಬಿದ್ದು ಮೃತಪಟ್ಟಿರುವ ಘಟನೆ ತಾಲೂಕಿನ ವೈದ್ಯನಾಥಪುರದ ಶಿಂಷಾ ನದಿಯಲ್ಲಿ ಭಾನುವಾರ ಬೆಳಗ್ಗೆ ಜರುಗಿದೆ. ಮಳವಳ್ಳಿ ತಾಲೂಕಿನ ಹಲಗೂರು ಹೋಬಳಿಯ ಒಡೆಯರ ಬಸಾಪುರ ಗ್ರಾಮದ ಮಾದೇಗೌಡರ ಪತ್ನಿ ಗೌರಮ್ಮ (60) ಮೃತರು. ತಮ್ಮ ಮನೆದೇವರು ವೈದ್ಯನಾಥಪುರದ ಶ್ರೀವೈದ್ಯನಾಥೇಶ್ವರ ದೇವರ ದರ್ಶನಕ್ಕೆ ಶನಿವಾರ ತಮ್ಮ ಗ್ರಾಮದಿಂದ ಬಂದಿದ್ದ ಗೌರಮ್ಮ ರಾತ್ರಿ ದೇವಸ್ಥಾನದಲ್ಲಿ ತಂಗಿದ್ದರು. ಭಾನುವಾರ ಬೆಳಗ್ಗೆ ಕೈಕಾಲು ತೊಳೆಯಲು ದೇಗುಲದ ಮುಂಭಾಗದ ಶಿಂಷಾ ನದಿ ದಡದ ಸೋಪಾನಕಟ್ಟೆಯಿಂದ ಇಳಿಯುತ್ತಿದ್ದಾಗ ಕಾಲು ಜಾರಿ ನದಿಗೆ ಬಿದ್ದು ಸಾವನ್ನಪ್ಪಿದ್ದಾರೆ. ಈ ಸಂಬಂಧ ಮದ್ದೂರು ಪೊಲೀಸರು ಪ್ರಕರಣ ದಾಖಲ ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.