ಕನ್ನಡಪ್ರಭ ವಾರ್ತೆ ಪಾವಗಡ
ಚಿಕ್ಕಹಳ್ಳಿ ಗ್ರಾಪಂ ಅಧಿಕಾರ ಸ್ವೀಕರಿಸಿದ ಬಳಿಕ ನೂತನ ಅಧ್ಯಕ್ಷೆ ರಾಮಾಂಜಿನಪ್ಪ ಮಾಧ್ಯಮದ ಜತೆ ಮಾತನಾಡಿ, ನನ್ನ ಅಧಿಕಾರದ ಅವಧಿಯಲ್ಲಿ ವಿವಿಧ ಯೋಜನೆ ಅಡಿಯ ಅನುದಾನದಲ್ಲಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳ ಸರ್ವತೋಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು. ಅಧ್ಯಕ್ಷರದ ಆಯ್ಕೆಗೆ ಸಹಕರಿಸಿದ ಮಾಜಿ ಸಚಿವರಾದ ವೆಂಕಟರಮಣಪ್ಪ,ಶಾಸಕ ಎಚ್.ವಿ.ವೆಂಕಟೇಶ್ ಹಾಗೂ ಗ್ರಾಪಂ ಸದಸ್ಯರಿಗೆ ಅಭಾರಿಯಾಗಿದ್ದೇನೆ. ನಾಗಲಾಪುರ ಗ್ರಾಮದ ಮಾಜಿ ತಾಪಂ ಸದಸ್ಯರಾದ ನಾಗರಾಜು, ಗೋವಿಂದಪ್ಪ, ಚಿಕ್ಕಹಳ್ಳಿ ಮಾಜಿ ತಾಪಂ ಸದಸ್ಯರಾದ ಮಾರಪ್ಪ, ದೊಡ್ಡಹಳ್ಳಿ ಗ್ರಾಮದ ಮಾಜಿ ಗ್ರಾಪಂ ಅದ್ಯಕ್ಷರಾದ ಅಕ್ಕಲಪ್ಪ, ಮೀನಾಕ್ಷಮ್ಮ ಅಂಜಿನಪ್ಪ, ಲಕ್ಷ್ಮಿ ವಿರೇಶ್, ರಾಮು, ಆರ್.ಟಿ.ರಾಮಾಂಜಿ ಅಂಜಿ ನಾಯಕ, ಶ್ರೀಧರಪ್ಪ, ಕೆ.ರಾಮಪುರ ಗ್ರಾಮದ ಮಾಜಿ ಗ್ರಾಪಂ ಸದಸ್ಯರಾದ ನರಸಿಂಹಮೂರ್ತಿ, ದೇವೆಂದ್ರ, ರಾಜು ಸೇರಿದಂತೆ ಬೆಂಬಲಿಸಿದ ಎಲ್ಲಾ ಕಾರ್ಯಕರ್ತರಿಗೆ ಕೃತಜ್ಞತೆ ಅರ್ಪಿಸುವುದಾಗಿ ಹೇಳಿದರು. ಇದೇ ವೇಳೆ ಗ್ರಾಪಂ ಪಿಡಿಒ ಹಾಗೂ ಇತರೆ ಆನೇಕ ಮಂದಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರಿದ್ದರು.