ಚಿಕ್ಕಮಗಳೂರು: ಇಂದು ವಿವಿಧ ದೇವಸ್ಥಾನಗಳಲ್ಲಿ ರಾಮ ತಾರಕ ಹೋಮ, ಭಜನೆ

KannadaprabhaNewsNetwork |  
Published : Jan 22, 2024, 02:22 AM IST
ರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನಾ | Kannada Prabha

ಸಾರಾಂಶ

ಅಗ್ರಹಾರದ ಉಮಾ ಮಹೇಶ್ವರ ದೇವಸ್ಥಾನದಲ್ಲಿ ಪುರೋಹಿತ ವೃಂದದವರಿಂದ ಬೆಳಗ್ಗೆ 7ಗಂಟೆಯಿಂದ ರಾಮತಾರಕ ಹೋಮ ನಡೆಯಲಿದೆ. ಸಂಜೆ 5ಗಂಟೆಯಿಂದ ಲಲಿತ ಭಜನಾ ಮಂಡಳಿಯವರಿಂದ ಭಜನೆ, ಪ್ರಾಕಾರೋತ್ಸವ, ಅಷ್ಠವಧಾನ ಸೇವೆ, ದೀಪೋತ್ಸವ, ಪ್ರಸಾದ ವಿನಿಯೋಗ ನಡೆಯಲಿದೆ.

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಅಯೋದ್ಯೆಯಲ್ಲಿ ಸೋಮವಾರ ನಡೆಯಲಿರುವ ರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದ ಅಂಗವಾಗಿ ತಾಲೂಕಿನ ವಿವಿಧ ದೇವಸ್ಥಾನಗಳಲ್ಲಿ ರಾಮತಾರಕ ಹೋಮ, ಭಜನೆ ನಡೆಯಲಿದೆ.

ಅಗ್ರಹಾರದ ಉಮಾ ಮಹೇಶ್ವರ ದೇವಸ್ಥಾನದಲ್ಲಿ ಪುರೋಹಿತ ವೃಂದದವರಿಂದ ಬೆಳಗ್ಗೆ 7ಗಂಟೆಯಿಂದ ರಾಮತಾರಕ ಹೋಮ ನಡೆಯಲಿದೆ. ಸಂಜೆ 5ಗಂಟೆಯಿಂದ ಲಲಿತ ಭಜನಾ ಮಂಡಳಿಯವರಿಂದ ಭಜನೆ, ಪ್ರಾಕಾರೋತ್ಸವ, ಅಷ್ಠವಧಾನ ಸೇವೆ, ದೀಪೋತ್ಸವ, ಪ್ರಸಾದ ವಿನಿಯೋಗ ನಡೆಯಲಿದೆ. ಬಸ್‌ ನಿಲ್ದಾಣ ಸಮೀಪದ ಪೇಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ರಾಮತಾರಕ ಹೋಮ ನಡೆಯಲಿದೆ. ಪ್ರವಾಸಿ ಮಂದಿರ ಸಮೀಪದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಬೆಳಗ್ಗೆ 9 ಗಂಟೆಯಿಂದ ರಾಮತಾರಕ ಹೋಮ, ಭಜನೆ, ಮಹಾ ಮಂಗ‍ಳಾರತಿ, ತೀರ್ಥಪ್ರಸಾದ, ಅನ್ನ ಸಂತರ್ಪಣೆ, ಶ್ರೀ ರಾಮ ಭಜನೆ ನಡೆಯಲಿದೆ.

ಹಾತೂರು:

ತಾಲೂಕಿನ ಹಾತೂರು ಗ್ರಾಮದ ಖಂಡಿಕ ಶ್ರೀ ರಾಮಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸೋಮವಾರ ಬೆಳಗ್ಗೆ 10 ಗಂಟೆಯಿಂದ ರಾಮ ತಾರಕ ಯಜ್ಞ,12ಗಂಟೆಗೆ ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ, 1ಗಂಟೆಗೆ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ, ಸಂಜೆ 6 ಗಂಟೆಯಿಂದ ರಾಮಾಂಜನೇಯ ಸ್ವಾಮಿಗೆ ದೀಪೋತ್ಸವ, ಗ್ರಾಮಸ್ಥರಿಂದ ಭಜನೆ, ಶ್ರೀ ಸ್ವಾಮಿಗೆ ಮಹಾ ಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ. ದೇವಸ್ಥಾನದಲ್ಲಿ ಅಯೋದ್ಯೆಯಲ್ಲಿ ನಡೆಯವ ಶ್ರೀ ರಾಮನ ಪ್ರತಿಷ್ಠಾಪನಾ ಕಾರ್ಯಕ್ರಮದ ನೇರ ಪ್ರಸಾರದ ವೀಕ್ಷಣೆ ಮಾಡಲಾಗುವುದು ಎಂದು ಖಂಡಕ ಉಮೇಶ್ ತಿಳಿಸಿದ್ದಾರೆ.

ಕಾನೂರು:

ಕಾನೂರು ರಾಮ ದೇವಸ್ಥಾನದಲ್ಲಿ ಬೆಳಗ್ಗೆ ರಾಮ ತಾರಕ ಹೋಮ, ರಾಮ ಬಾಲಕಾಂಡ ಪಾರಾಯಣ ನಡೆಯಲಿದೆ. ಸಂಜೆ 6.30ಗಂಟೆಯಿಂದ ಭಜನೆ, ದೀಪೋತ್ಸವ, ಮಂಗಳಾರತಿ ನಡೆಯಲಿದೆ. ಯಡಗೆರೆ ರಾಮನಾಥೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆ ರಾಮತಾರಕ ಹೋಮ, ಸಂಜೆ ಭಜನೆ ನಡೆಯಲಿದೆ. ಸೀತೂರು ಗೋಪಾಲಕೃಷ್ಣ ದೇವಸ್ಥಾನದಲ್ಲಿ ಬೆಳಗ್ಗೆ ರಾಮತಾರಕ ಹೋಮ, ಸಂಜೆ ಕುದುರೆಗುಂಡಿ ಗಾಯಿತ್ರಿ ವಿಪ್ರ ಮಹಿಳಾ ಬಳಗದವರಿಂದ ಭಜನೆ ನಡೆಯಲಿದೆ.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌