ಎಸ್‌ಆರ್‌ಎಸ್ ಹೆರಿಟೇಜ್ ಶಾಲೆಯಲ್ಲಿ ಮಕ್ಕಳ ಹಣ್ಣಿನ ಸಂತೆ

KannadaprabhaNewsNetwork |  
Published : Jan 19, 2024, 01:47 AM IST
ಚಿತ್ರ:ನಗರದ ಎಸ್‌ ಆರ್‌ ಎಸ್‌ ಹೆರಿಟೇಜ್‌ ಶಾಲೆಯಲ್ಲಿ ಆಯೋಜಿಸಿದ್ದ ಮಕ್ಕಳ ಹಣ್ಣಿನ ಸಂತೆಯಲ್ಲಿ ಪಾಲ್ಗೊಂಡಿದ್ದ ಚಿಣ್ಣರು. | Kannada Prabha

ಸಾರಾಂಶ

ನಗರದ ಎಸ್‌ಆರ್‌ಎಸ್ ಹೆರಿಟೇಜ್ ಶಾಲೆ 1ನೇ ತರಗತಿ ವಿದ್ಯಾರ್ಥಿಗಳು ಶಾಲೆಯಲ್ಲಿ ಇಂದು ಹಣ್ಣಿನ ಸಂತೆ ಕಾರ್ಯಕ್ರಮ ಆಯೋಜಿಸಲಾಗಿತ್ತು.ದೈನಂದಿನ ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಮಕ್ಕಳಲ್ಲಿ ಬದುಕಿನ ಪ್ರಾಯೋಗಿಕ ಕಲಿಕೆ ಉತ್ತೇಜಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ.

ಚಿತ್ರದುರ್ಗ: ನಗರದ ಎಸ್‌ಆರ್‌ಎಸ್ ಹೆರಿಟೇಜ್ ಶಾಲೆ 1ನೇ ತರಗತಿ ವಿದ್ಯಾರ್ಥಿಗಳು ಶಾಲೆಯಲ್ಲಿ ಇಂದು ಹಣ್ಣಿನ ಸಂತೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ದೈನಂದಿನ ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಮಕ್ಕಳಲ್ಲಿ ಬದುಕಿನ ಪ್ರಾಯೋಗಿಕ ಕಲಿಕೆ ಉತ್ತೇಜಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಇದರಿಂದ ಮಕ್ಕಳ ಮನಸ್ಸು ಪ್ರಫುಲ್ಲವಾಗಿ ಬೆಳೆಯಲು ಸಹಾಯಕವಾಗುತ್ತದೆ ಎಂದು ಸಂಸ್ಥೆಯ ಕಾರ್ಯದರ್ಶಿ ಸುಜಾತ ಲಿಂಗಾರೆಡ್ಡಿ ಹೇಳಿದರು.

150 ವಿದ್ಯಾರ್ಥಿಗಳು ಶಾಲೆಯ ಆವರಣದಲ್ಲಿ ಹಣ್ಣಿನ ಅಂಗಡಿ ಮೇಳ ಹಮ್ಮಿಕೊಳ್ಳಲಾಗಿದ್ದು, ಹಣ್ಣುಗಳನ್ನು ಖರೀದಿ ಮಾಡುವ ಮೂಲಕ ಮುಖ್ಯ ಅತಿಥಿಗಳು ಸುಜಾತಲಿಂಗಾರೆಡ್ಡಿ ಎಸ್ಆರ್‌ಎಸ್ ಶಿಕ್ಷಣ ಸಮೂಹ ಸಂಸ್ಥೆಯ ಕಾರ್ಯದರ್ಶಿಗಳು ಚಿತ್ರದುರ್ಗ, ಕಾರ್ಯಕ್ರಮ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮಾರುಕಟ್ಟೆಯಿಂದ ಬಗೆಬಗೆಯ ಹಣ್ಣುಗಳಾದ ಬಾಳೆಹಣ್ಣು, ಸೇಬು, ಸಿತಾಫಲ, ಕಿತ್ತಳೆ, ಪಪ್ಪಾಯ, ದ್ರಾಕ್ಷಿ, ಸ್ಟ್ರಾಬೇರಿ, ಕಲ್ಲಂಗಡಿ, ಮೋಸಂಬಿ, ಅನಾನಸ್ ಇನ್ನೀತರ ಬಗೆಬಗೆ ಮತ್ತು ತಾಜಾ ಹಣ್ಣು ಮಾರಾಟ ಮಾಡುವುದರೊಂದಿಗೆ ಮಕ್ಕಳು ವ್ಯವಹಾರ ಚತುರತೆಯನ್ನು ತೋರ್ಪಡಿಸಿದರು.

ಪ್ರಾಂಶುಪಾಲ ಎಂ.ಎಸ್.‌ಪ್ರಭಾಕರ್ ಮಾತನಾಡಿ, ಮಕ್ಕಳಲ್ಲಿ ವ್ಯಾಪಾರ ಮನೋಭಾವನೆ ಮತ್ತು ವ್ಯವಹಾರಿಕ ಜೀವನ ನಿರ್ವಹಣೆಯ ಮಹತ್ವ ತಿಳಿಸುವ ಉದ್ದೇಶವಾಗಿದೆ. ವ್ಯವಹಾರಿಕ ಗಣಿತ ತಮ್ಮೆಲ್ಲರ ಜೀವನದಲ್ಲಿ ಹಾಸುಹೊಕ್ಕಾಗಿದೆ ವ್ಯವಹಾರ ಗಣಿತವನ್ನು ವಿದಾರ್ಥಿಗಳಿಗೆ ಪರಿಚಯಿಸುವ ದೃಷ್ಟಿಯಿಂದ ಈ ಮೇಳ ಹಮ್ಮಿಕೊಂಡಿದ್ದು ಎಂದು ನೆರೆದವರಿಗೆ ತಿಳಿದರು.

ಈ ಮೇಳದಲ್ಲಿ ಪೋಷಕರು, ಶಿಕ್ಷಕರು, ಸಾರ್ವಜನಿಕರು, ಗ್ರಾಹಕರು ಉತ್ಸಾಹದಿಂದ ತಮಗಿಷ್ಟವಾದ ಹಣ್ಣುಗಳನ್ನು ವಿದ್ಯಾರ್ಥಿಗಳು ನಿಗದಿಪಡಿಸಿದ ದರಕ್ಕೆ ತರಕಾರಿಗಳನ್ನು ಖರೀದಿಸಿದರು. ವ್ಯವಹಾರಿಕ ಗಣಿತ ತಮ್ಮೇಲ್ಲರ ಜೀವನದಲ್ಲಿ ಹಾಸುಹೊಕ್ಕಾಗಿದೆ ವ್ಯವಹಾರ ಗಣಿತ ವಿದ್ಯಾರ್ಥಿಗಳಿಗೆ ಪರಿಚಯಿಸುವ ದೃಷ್ಟಿಯಿಂದ ಈ ಕಾರ್ಯಕ್ರಮ ಆಯೋಜಿಸಿದೆ. ಕಾರ್ಯಕ್ರಮದಲ್ಲಿ ಎಸ್‌ಆರ್‌ಎಸ್ ಸಂಸ್ಥೆಯ ಆಡಳಿತಾಧಿಕಾರಿ ಡಾ.ರವಿ ಟಿಎಸ್ ಹಾಗೂ ಎಲ್ಲಾ ವಿಭಾಗದ ಶೈಕ್ಷಣಿಕ ಸಂಯೋಜಕರು ಮತ್ತು ಶಿಕ್ಷಕವೃಂದದವರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!