ಕೇಂದ್ರ ಸಾಹಿತ್ಯ ಅಕಾಡಮಿ ಯುವ ಪುರಸ್ಕಾರ ಪಡೆದ ತರೀಕೆರೆ ಡಾ.ಶ್ರುತಿ ಬಿ.ಆರ್.ಅಭಿಮತ
ಅನಂತ ನಾಡಿಗ್ಕನ್ನಡಪ್ರಭ ವಾರ್ತೆ, ತರೀಕೆರೆಬಾಲ್ಯದಿಂದಲೇ ಮಕ್ಕಳ ಕುರಿತಾದ ಪುಸ್ತಕಗಳು ಹಾಗೂ ನಿಯತಕಾಲಿಕೆಗಳನ್ನು ಓದುವುದರಲ್ಲಿ ನಾನು ಆಸಕ್ತಿ ಬೆಳೆಸಿ ಕೊಂಡಿದ್ದೇ ನಾನು ಕವನ ರಚನೆಯಲ್ಲಿ ತೊಡಗಲು ಪ್ರೇರಣೆ ನೀಡಿತು ಎಂದು 2024 ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರಕ್ಕೆ ಭಾಜನರಾದ ಬೆಂಗಳೂರು ಕರ್ನಾಟಕ ರಾಜ್ಯ ಪಾನೀಯ ನಿಗಮ ತಹಸೀಲ್ದಾರ್ ತರೀಕೆರೆ ಡಾ.ಶ್ರುತಿ ಬಿ.ಆರ್. ಹೇಳುತ್ತಾರೆ.
ತಮ್ಮ ಜೀರೋ ಬ್ಯಾಲೆನ್ಸ್ ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ ದೊರಕಿದ ಸಂದರ್ಭದಲ್ಲಿ ಕನ್ನಡಪ್ರಭದೊಂದಿಗೆ ತಮ್ಮ ಸಂತೋಷ ಹಂಚಿಕೊಂಡ ಅವರು, ಈ ಹಿಂದೆ ತರೀಕೆರೆಯಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಈಗ ಪಂಚಾಯತ್ ರಾಜ್ ಇಲಾಖೆ ನಿವೃತ್ತ ಉಪ ಕಾರ್ಯದರ್ಶಿಯಾಗಿರುವ ಬಿ.ಜೆ. ರವೀಂದ್ರ ಮತ್ತು ಎ.ಪಿ.ರೇಣುಕಾ ಇವರ ಪುತ್ರಿಯಾದ ಡಾ.ಶೃತಿ ಬಿ.ಆರ್. ತಾವು 5ನೇ ತರಗತಿಯಲ್ಲಿದ್ದಾಗಲೇ ಶಾಲೆ ಪುಸ್ತಕಗಳ ಜೊತೆಗೆ ಬಾಲ ಮಂಗಳ, ಚಂಪಕ ಇತ್ಯಾದಿ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಂಡಿದ್ದಲ್ಲದೆ, ತರೀಕೆರೆಯಲ್ಲಿ ಮನೆಯಂಗಳದ ಕವಿಗೋಷ್ಠಿಯಲ್ಲಿ ಶಿಶು ಪ್ರಾಸಗಳನ್ನು ಸ್ಫುಟವಾಗಿ ಓದಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದರು ಎಂದು ಸ್ಮರಿಸಿದರು.ಮನೆಯಲ್ಲಿ ಅವರ ತಂದೆ ತಾಯಿ, ಸೋದರತ್ತೆ ಲೇಖನ ಬರೆಯುತ್ತಿದ್ದರಲ್ಲದೆ, ಶೃತಿ ಅವರಿಗೆ ಉತ್ತೇಜನವನ್ನು ನೀಡುತ್ತಿದ್ದ ರಂತೆ. ಹಾಗಾಗಿ ಶಾಲೆಯ ಬಿಡುವಿನ ಸಮಯದಲ್ಲಿ ತರೀಕೆರೆ ಸಾರ್ವಜನಿಕ ಗ್ರಂಥಾಲಯದಲ್ಲಿ ಅನೇಕ ಉಪಯುಕ್ತ ಪುಸ್ತಕ ಗಳನ್ನುತಾವು ತಪ್ಪದೇ ಓದುತ್ತಿದ್ದೆ ಎಂದು ನುಡಿದರು.ಇಂಕ್ ಪೆನ್ನು ಬಹುಮಾನಃ ತರೀಕೆರೆ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ 9ನೇ ತರಗತಿಯಲ್ಲಿ ಓದುತ್ತಿದ್ದಾಗ ಭದ್ರಾವತಿ ಆಕಾಶವಾಣಿಯಲ್ಲಿ ಹಾರು ಹನುಮ ಮಕ್ಕಳ ಧಾಆರಾವಾಹಿಗೆ ಮಕ್ಕಳಿಗೂ ಸಂಚಿಕೆ ಪೂರ್ಣಗೊಳಿಸುವ ಸ್ಪರ್ಧೆಯ 2 ಸಂಚಿಕೆಯಲ್ಲಿ ಬಹುಮಾನ ಪಡೆದಿದ್ದಾಗ ಭದ್ರಾವತಿ ಆಕಾಶವಾಣಿ ಕೇಂದ್ರದಲ್ಲಿ ಸಮಾರಂಭ ಏರ್ಪಡಿಸಿ ವಿಜೇತರಾದ ಮಕ್ಕಳಿಗೆ ಆಕಾಶವಾಣಿ ನಿರ್ದೇಶಕರು ಇಂಕ್ ಪೆನ್ನು ಮತ್ತು ಪುಸ್ತಕಗಳ ಬಹುಮಾನ ನೀಡಿ ಬೆನ್ನು ತಟ್ಟಿದ್ದರು, ಅಂದು ನೀಡಿದ ಬಹುಮಾನ ಇಂಕ್ ಪೆನ್ನು ಮತ್ತು ಪುಸ್ತಕ ಇಂದಿಗೂ ಕೂಡ ನನ್ನ ಬಳಿ ಜೋಪಾನವಾಗಿಟ್ಟುಕೊಂಡಿರುದಾಗಿ ಶೃತಿ ತಮ್ಮ ಸಾಹಿತ್ಯ ಪ್ರೇಮವನ್ನು ಕಾಪಿಟ್ಟುಕೊಂಡು ಬಗೆಯನ್ನು ವಿವರಿಸಿದರು.37 ಕವನಗಳ ಸಂಕಲನಃ
ಮೈಸೂರು ವಿವಿ ಮಾಸನಗಂಗೋತ್ರಿಯಲ್ಲಿ ಅರ್ಥಶಾಸ್ತ್ರದಲ್ಲಿ ಪ್ರಥಮ ರ್ಯಾಂಕ್ ಮತ್ತು 5 ಚಿನ್ನದ ಪದಕಗಳೊಂದಿಗೆ ಸ್ನಾತಕೋತ್ತರ ಪದವಿ ಮತ್ತು ಪಿಎಚ್ ಡಿ ಪಡೆದು, ನಂತರ ಕೆಎಎಸ್ ಪರೀಕ್ಷೆಯಲ್ಲಿ ತೇರ್ಗಡೆಯಾದ ಶೃತಿ ಇದೆಲ್ಲದರ ನಡುವೆ ನನ್ನ ಬರವಣಿಗೆ ಅವ್ಯಾಹತವಾಗಿ ಸಾಗಿತು. ಓದು-ಬರಹ, ಕಾವ್ಯ ಪೋಟೋ ಗ್ರಫಿ, ಚೆಸ್ ಆಟಗಳನ್ನು ರೂಢಿಸಿಕೊಂಡ ನನಗೆ ಕವಿತೆಗಳನ್ನು ರಚಿಸುವುದರಲ್ಲಿ ಗಟ್ಟಿಗೊಳಿಸಿತು. 12 ವರ್ಷಗಳಲ್ಲಿ ನಾನು ಬರೆದ ಕವಿತೆಗಳಲ್ಲಿ ಆಯ್ದ 37 ಕವಿತೆಗಳ ಸಂಗ್ರಹವೇ ಈ ಜೀರೋ ಬ್ಯಾಲೆನ್ಸ್ ಕವನ ಸಂಕಲನ ಎಂದು ತಮ್ಮ ಕಾವ್ಯಸಾಂಗತ್ಯದ ಬಗ್ಗೆ ಮನದುಂಬಿ ನುಡಿದರು.ಅಪರೂಪದ ಅವಕಾಶಃ ತಂದೆ-ತಾಯಿಗಳು ಗುರು ಹಿರಿಯರ ಆಶೀರ್ವಾದದಿಂದ ಜೀರೋ ಬ್ಯಾಲೆನ್ಸ್ ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡಮಿ ಯುವ ಪುರಸ್ಕಾರ ದೊರಕಿದಾಗ ನನಗಾದ ಸಂತೋಷ ಅಷ್ಟಿಷ್ಟಲ್ಲ, ಕಥೆ, ಕಾದಂಬರಿ ಪುನರ್ ಮುದ್ರಣ ಭಾಗ್ಯವನ್ನು ಪಡೆಯುವುದು ಸಹಜ, ಆದರೆ ಕವನ ಸಂಕಲನ ಪ್ರಕಟಿಸಲು ಪ್ರಕಾಶಕರು ಮುಂದೆ ಬಾರದ ಈ ಹೊತ್ತಿನಲ್ಲಿ ಜೀರೋ ಬ್ಯಾಲೆನ್ಸ್ ಕವನ ಸಂಕಲನ 2ನೆ ಮುದ್ರಣ ಕಂಡಿರುವುದು ಕನ್ನಡ ಕಾವ್ಯ ಲೋಕದಲ್ಲಿ ಒಳ್ಳೆಯ ಬರವಣಿಗೆ ನಿಲ್ಲುತ್ತದೆ ಎಂಬ ಭರವಸೆ ಮೂಡಿಸುತ್ತಿದೆ ಎಂದು ಡಾ.ಶ್ರತಿ ಸಂತಸ ವ್ಯಕ್ತಪಡಿಸಿದ್ದಾರೆ.
ನಮ್ಮ ತಾಯಿ ಮನೆ ತರೀಕೆರೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ನನ್ನನ್ನು ಗೌರವಿಸಿರುವುದು ಹೆಚ್ಚಿನ ಸಂತೋಷ ಉಂಟುಮಾಡಿದೆ ಎಂದು ಅಭಿಮಾನದಿಂದ ಹೇಳುತ್ತಾರೆ.26ಕೆಟಿಆರ್.ಕೆ.04ಃ
ಡಾ.ಶ್ರುತಿ ಬಿ.ಆರ್.26ಕೆಟಿಆರ್.ಕೆ.05ಃಜೀರೋ ಬ್ಯಾಲೆನ್ಸ್ ಕವನ ಸಂಕಲನ