ನಮ್ಮ ಮಠಕ್ಕೆ ದೀಪವೆಂದರೆ ಮಕ್ಕಳು: ಸಿದ್ಧಗಂಗಾ ಶ್ರೀ

KannadaprabhaNewsNetwork |  
Published : Nov 28, 2024, 12:31 AM IST
ದೀಪೋತ್ಸವಕ್ಕೆ ಚಾಲನೆ ನೀಡಿದ ಸಿದ್ಧಲಿಂಗ ಸ್ವಾಮೀಜಿ | Kannada Prabha

ಸಾರಾಂಶ

ತುಮಕೂರುದೀಪ ಹಚ್ಚುವುದು ಒಳ್ಳೆಯ ಕೆಲಸ, ಸಮಾಜದ ಕೊಳೆಯನ್ನು ತೊಳೆಯಲು ಇದು ಸಹಕಾರಿಯಾಗಲಿ ಎಂದು ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ, ತುಮಕೂರುದೀಪ ಹಚ್ಚುವುದು ಒಳ್ಳೆಯ ಕೆಲಸ, ಸಮಾಜದ ಕೊಳೆಯನ್ನು ತೊಳೆಯಲು ಇದು ಸಹಕಾರಿಯಾಗಲಿ ಎಂದು ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು. ನಗರದ ಸಿದ್ದಗಂಗಾ ಮಠದ ಅವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ತಿಕ ದೀಪೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.ಹಿರಿಯ ಮಾತಿನಂತೆ ಹಚ್ಚುವುದಾದರೆ ದೀಪವನ್ನು ಹಚ್ಚು, ಬೆಂಕಿಯನ್ನಲ್ಲ. ಆರಿಸುವುದಾದರೆ ನೋವನ್ನು ಆರಿಸಿ, ನಗುವನ್ನಲ್ಲ. ಈ ಕಾರ್ತಿಕ ದೀಪೋತ್ಸವ ಎಲ್ಲರ ಮನದಲ್ಲಿಯೂ ಸಂತೋಷವನ್ನು ತರುವಂತಾಗಲಿ,ಆದೇ ನಿಜವಾದ ಹಬ್ಬ.ರಾತ್ರಿಗೆ ಚಂದ್ರ ಬೆಳಕಾದರೆ,ಹಗಲಿಗೆ ಸೂರ್ಯ ಬೆಳಕು, ಜಗತ್ತಿಗೆ ಧರ್ಮ ಬೆಳಕು ಹಾಗೂ ಮನೆ ಮಕ್ಕಳೇ ಬೆಳಕು ಎಂದರು.ಈ ಜಗತ್ತಿನಲ್ಲಿ ಎಲ್ಲರಿಗಿಂತ ಶ್ರೇಷ್ಠರು ಎಂದಿದ್ದರೆ ಆದು ತಂದೆ ತಾಯಿ ಮಾತ್ರ.ಭಾರತೀಯ ಪರಂಪರೆಯಲ್ಲಿ ಕಾರ್ತಿಕ ಮಾಸಕ್ಕೆ ಬಹಳ ಮಹತ್ವವಿದೆ.ಭಾರತೀಯರು ಬೆಳಕನ್ನು ಸ್ವೀಕರಿಸುವಂತಹವರು. ದೀಪದಿಂದಲೇ ನಮ್ಮ ಶುಭ ಕಾರ್ಯ ಆರಂಭವಾಗಲಿದೆ. ದೀಪವನ್ನು ದೇವರೆಂದೇ ಭಾವಿಸಲಾಗುತ್ತದೆ. ಶ್ರೀಮಠದಲ್ಲಿ ಹಿಂದಿನಿಂದಲೂ ದೀಪೋತ್ಸವಕ್ಕೆ ಅವಕಾಶ ಇಲ್ಲ. ನಮಗೆ ದೀಪವೆಂದರೆ ಈ ಮಕ್ಕಳು, ಅವರಲ್ಲಿ ದೇವರನ್ನು ಕಾಣುವ ಪ್ರಯತ್ನ ನಮ್ಮದು. ಆದರೆ ಭಕ್ತರ ಕೋರಿಕೆಗೆ ಇಲ್ಲ ಎನ್ನಲಾಗದೆ ದೀಪೋತ್ಸವಕ್ಕೆ ಒಪ್ಪಿಕೊಂಡಿದ್ದೇವೆ.ಭಕ್ತರು ದೀಪೋತ್ಸವದ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸುತ್ತಿದ್ದಾರೆ. ಅವರೆಲ್ಲರಿಗೂ ಒಳ್ಳೆಯದಾಗಲಿ ಎಂದು ಸಿದ್ದಲಿಂಗಸ್ವಾಮೀಜಿಗಳು ಶುಭ ಹಾರೈಸಿದರು.ಹಿರಿಯ ಭಕ್ತರಾದ ಎಂ.ವಿ.ನಾಗಣ್ಣ ಮಾತನಾಡಿ, ಶ್ರೀಮಠದ ಸುತ್ತಮುತ್ತಲಿನ ಸುಮಾರು 10-15 ಹಳ್ಳಿಗಳ ಭಕ್ತರು ಒಗ್ಗೂಡಿ, ಶ್ರೀಗಳಲ್ಲಿ ಮನವಿ ಮಾಡಿದ ಪರಿಣಾಮ ಕಳೆದ ವರ್ಷದಿಂದ ಕಾರ್ತಿಕ ಮಾಸದ ದೀಪೋತ್ಸವವನ್ನು ಆಚರಿಸಿಕೊಂಡು ಬರುತ್ತಿದ್ದೇವೆ. ಈ ದೀಪೋತ್ಸವದಲ್ಲಿ ಶ್ರೀಮಠದ ಹಳೆಯ ವಿದ್ಯಾರ್ಥಿಗಳು, ಅಕ್ಕಪಕ್ಕದ ಗ್ರಾಮಗಳ ಭಕ್ತರು ಸೇರಿ ದೀಪರಾಧನೆ ಮಾಡಿದ್ದೇವೆ. ಮುಂದಿನ ವರ್ಷದಿಂದ ಮತ್ತಷ್ಟು ವಿಜೃಂಭಣೆಯಿಂದ ನಡೆಸಲು ತೀರ್ಮಾನಿಸಿದ್ದೇವೆ ಎಂದರು.ಈ ವೇಳೆ ಶಾಸಕರಾದ ಜಿ.ಬಿ.ಜೋತಿಗಣೇಶ್, ಶ್ರೀಮಠದ ಹಳೆಯ ವಿದ್ಯಾರ್ಥಿಗಳಾದ ಎಂ.ವಿ.ನಾಗಣ್ಣ, ಬಸವರಾಜು ಮತ್ತಿತರರು ಪಾಲ್ಗೊಂಡಿದ್ದರು.

PREV

Recommended Stories

ಉಪರಾಷ್ಟ್ರಪತಿ ಹುದ್ದೆ ರೇಸಲ್ಲಿ ರಾಜ್ಯ ಗೌರ್ನರ್‌ ಗೆಹಲೋತ್‌?
ಮಕ್ಕಳಲ್ಲಿ ಬಾಲ್ಯದಿಂದಲೇ ದೇಶಪ್ರೇಮ ತುಂಬಿ