ಮಕ್ಕಳೇ..ಸಂಗೀತದ ಅಭಿರುಚಿ ಬೆಳೆಸಿಕೊಳ್ಳಿ: ನಿವೃತ್ತ ಪ್ರಾಧ್ಯಾಪಕ ಎಸ್.ನಾರಾಯಣ್

KannadaprabhaNewsNetwork |  
Published : Feb 13, 2024, 12:47 AM IST
ದೊಡ್ಡಬಳ್ಳಾಪುರದಲ್ಲಿ ಸುಸ್ವರ ರಜತ ಮಹೋತ್ಸವ ಅಂಗವಾಗಿ ಪಿಳ್ಳಾರಿ ಗೀತೆಗಳು, ಪಂಚರತ್ನ ಕೃತಿಗಳ ಸಮೂಹ ಗಾಯನ ನಡೆಯಿತು. | Kannada Prabha

ಸಾರಾಂಶ

ದೊಡ್ಡಬಳ್ಳಾಪುರದಂತಹ ಸಂಕೀರ್ಣ ಪ್ರದೇಶದಲ್ಲಿ ಸೃಜನಾತ್ಮಕ ಅಭಿವ್ಯಕ್ತಿಯನ್ನು ಹೊಂದಿರುವ ಹಲವು ಸಂಗೀತಾಸಕ್ತರಿರುವುದು ವಿಶೇಷ. ಕಳೆದ 25 ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಸುಸ್ವರ ತನ್ನ ನಿರಂತರ ಅಭಿಯಾನವನ್ನು ಮುಂದುವರೆಸುತ್ತಿರುವುದು ಶ್ಲಾಘನೀಯ.

ದೊಡ್ಡಬಳ್ಳಾಪುರದಲ್ಲಿ ಸುಸ್ವರ ಟ್ರಸ್ಟ್ ನ ರಜತ ಮಹೋತ್ಸವ । ಪುರಂದರದಾಸರು, ತ್ಯಾಗರಾಜರ ಆರಾಧನೆ । ಶಾಸ್ತ್ರೀಯ ಸಂಗೀತ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ಸಂಗೀತ ಪರಂಪರೆಯ ಅಭಿರುಚಿಯನ್ನು ಮಕ್ಕಳು ಹಾಗೂ ಯುವಪೀಳಿಗೆಯಲ್ಲಿ ಮೂಡಿಸುವ ಅಗತ್ಯವಿದೆ ಎಂದು ನಿವೃತ್ತ ಪ್ರಾಧ್ಯಾಪಕ ಎಸ್.ನಾರಾಯಣ್ ಹೇಳಿದರು.

ಸುಸ್ವರ ಟ್ರಸ್ಟ್‌ನ ರಜತ ಮಹೋತ್ಸವದ ಅಂಗವಾಗಿ ಶ್ರೀ ಗುರುಸಾರ್ವಭೌಮ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ತ್ಯಾಗರಾಜರು ಮತ್ತು ಪುರಂದರದಾಸರ ಆರಾಧನೆ, ದಾಸವರೇಣ್ಯರ ಪೂಜೆ, ಅಭಿನಂದನಾ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಕರ್ನಾಟಕ ಶಾಸ್ತ್ರೀಯ ಸಂಗೀತ ಉಳಿಸಿ ಬೆಳೆಸುವುದರಲ್ಲಿ ಕಲಾ ರಸಿಕರ ಪಾತ್ರ ವಿಚಾರದ ಬಗ್ಗೆ ಉಪನ್ಯಾಸ ನೀಡಿದ ಅವರು, ದೊಡ್ಡಬಳ್ಳಾಪುರದಂತಹ ಸಂಕೀರ್ಣ ಪ್ರದೇಶದಲ್ಲಿ ಸೃಜನಾತ್ಮಕ ಅಭಿವ್ಯಕ್ತಿಯನ್ನು ಹೊಂದಿರುವ ಹಲವು ಸಂಗೀತಾಸಕ್ತರಿರುವುದು ವಿಶೇಷ. ಕಳೆದ 25 ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಸುಸ್ವರ ತನ್ನ ನಿರಂತರ ಅಭಿಯಾನವನ್ನು ಮುಂದುವರೆಸುತ್ತಿರುವುದು ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು.

ಸುಸ್ವರ ಅಭಿನಂದನೆ:

ಇದೇ ವೇಳೆ ಇಲ್ಲಿನ ಹಿರಿಯ ಮೃದಂಗ ವಿದ್ವಾನ್‌ ಎ.ಎಸ್.ಅಶ್ವತ್ಥ ನಾರಾಯಣಾಚಾರ್ ರಿಗೆ ಸುಸ್ವರ ವಾರ್ಷಿಕ ಪುರಸ್ಕಾರ ನೀಡಿ ಗೌರವಿಸಲಾಯಿತು. ಸುಸ್ವರ 25ನೇ ವಾರ್ಷಿಕೋತ್ಸವ ಅಂಗವಾಗಿ ವಿವಿಧ ಹಂತಗಳಲ್ಲಿ ನಡೆಸಲಾದ ಸಂಗೀತ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಟ್ರಸ್ಟ್‌ನ ಅಧ್ಯಕ್ಷ ಎ.ಆರ್.ನಾಗರಾಜನ್‌ ಮಾತನಾಡಿದರು.

ಸುಸ್ವರ ಸಂಗೀತ ಕಚೇರಿ:

ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾಗಿದ್ದ ಸಂಗೀತ ಕಚೇರಿಯಲ್ಲಿ ಚೆನ್ನೈನ ಸಂಗೀತ ವಿದೂಷಿ ಕೃತಿ ಭಟ್ ಹಾಡುಗಾರಿಕೆಗೆ ಚೆನ್ನೈನ ಪಿಟೀಲು ವಿದ್ವಾನ್ ಬಿ.ವಿಠಲ ರಂಗನ್, ಬೆಂಗಳೂರಿನ ಮೃದಂಗ ವಿದ್ವಾನ್ ಬಿ.ಎಸ್.ಪ್ರಶಾಂತ್ ವಾದ್ಯ ಸಹಕಾರ ನೀಡಿದರು.

ವಿವಿಧ ಕಾರ್ಯಕ್ರಮಗಳ ಆಯೋಜನೆ:

ಆರಾಧನೆ ಹಾಗೂ ರಜತೋತ್ಸವ ನಿಮಿತ್ತ ದಾಸವರೇಣ್ಯರಿಗೆ ಪೂಜೆ, ಮಂಗಳ ವಾದ್ಯ ವಾದನ, ಸ್ಥಳೀಯ ಕಲಾವಿದರಿಂದ ಗಾಯನ ಸೇವೆ, ಪುರಂದರ ದಾಸರ ಪಿಳ್ಳಾರಿ ಗೀತೆಗಳ ಗಾಯನ, ತ್ಯಾಗರಾಜರ ಪಂಚರತ್ನ ಕೀರ್ತನೆಗಳ ಸಮೂಹ ಗಾಯನ ನಡೆದವು.

ಟ್ರಸ್ಟ್‌ನ ಅಧ್ಯಕ್ಷ ಎ.ಆರ್.ನಾಗರಾಜನ್, ಮ್ಯಾನೆಜಿಂಗ್ ಟ್ರಸ್ಟಿ ಬಿ.ಪಿ.ಶ್ರೀನಿವಾಸಮೂರ್ತಿ, ಖಜಾಂಚಿ ಎಂ.ಬಿ.ಗುರುದೇವ್, ಸಂಚಾಲಕ ಎಸ್.ನಾರಾಯಣ್, ಎನ್.ದೇವರಾಜ್, ಟ್ರಸ್ಟಿ ಎ.ಓ.ಆವಲಮೂರ್ತಿ, ಎಸ್.ರಾಜಲಕ್ಷ್ಮಿ, ಆಯೋಜನಾ ಸಮಿತಿ ಅಧ್ಯಕ್ಷೆ ಶಾರದಾ ಶ್ರೀಧರ್, ಉಪಾಧ್ಯಕ್ಷ ರಘುನಾಥ್‌ರಾವ್, ಕಾರ್ಯದರ್ಶಿ ಸುಮಾಸುನಿಲ್, ಸಹ ಕಾರ್ಯದರ್ಶಿ ವಿಜಯ, ಖಜಾಂಚಿ ವರಲಕ್ಷ್ಮೀ, ಸದಸ್ಯರಾದ ಶ್ವೇತಾ, ಲತಾ, ಸಂಧ್ಯಾ, ಗಿರೀಶ್, ಶ್ರೀಭಾಸ್ಕರ್, ಮಧುಶ್ರೀ ಮತ್ತಿತರರು ಭಾಗವಹಿಸಿದ್ದರು.

---------------

ಫೋಟೋ-

12ಕೆಡಿಬಿಪಿ2- ದೊಡ್ಡಬಳ್ಳಾಪುರದಲ್ಲಿ ಸುಸ್ವರ ರಜತ ಮಹೋತ್ಸವ ಅಂಗವಾಗಿ ಪಿಳ್ಳಾರಿ ಗೀತೆಗಳು, ಪಂಚರತ್ನ ಕೃತಿಗಳ ಸಮೂಹ ಗಾಯನ ನಡೆಯಿತು.

--

12ಕೆಡಿಬಿಪಿ3- ದೊಡ್ಡಬಳ್ಳಾಪುರದ ಸುಸ್ವರ ರಜತ ಮಹೋತ್ಸವ ಸಮಾರಂಭದಲ್ಲಿ ಮೃದಂಗ ವಿದ್ವಾನ್ ಅಶ್ವತ್ಥನಾರಾಯಣಾಚಾರ್ ಅವರಿಗೆ ವಾರ್ಷಿಕ ಪುರಸ್ಕಾರ ನೀಡಲಾಯಿತು.

--

12ಕೆಡಿಬಿಪಿ4- ದೊಡ್ಡಬಳ್ಳಾಪುರದಲ್ಲಿ ಚೆನ್ನೈನ ಕಲಾವಿದೆ ಕೃತಿ ಭಟ್‌ ಅವರ ಸಂಗೀತ ಕಚೇರಿ ನಡೆಯಿತು.

PREV

Recommended Stories

KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?