ಮಕ್ಕಳು ಮಾನವೀಯ ಮೌಲ್ಯಗಳನ್ನು ಮರೆತಿದ್ದಾರೆ- ಶಿವಾನಂದ ಶಾಸ್ತ್ರಿ

KannadaprabhaNewsNetwork |  
Published : Jul 16, 2025, 12:45 AM IST
(16ಎನ್.ಆರ್.ಡಿ5 ಶಿವಾನುಭವ ಕಾರ್ಯಕ್ರಮದಲ್ಲಿ ಶಿವಾನಂದ ಶಾಸ್ತ್ರೀ ಉಣಿಮಠ ಮಾತನಾಡುತ್ತಿದ್ದಾರೆ.) | Kannada Prabha

ಸಾರಾಂಶ

ಈ ಆಧುನಿಕ ಯುಗದಲ್ಲಿ ಮೊಬೈಲ್‌ ಗೀಳಿನಿಂದ ಮಕ್ಕಳು ಮಾನವೀಯ ಮೌಲ್ಯಗಳನ್ನು ಮರೆತು ಗುರುಗಳನ್ನು ನಿಂದಿಸುತ್ತಿರುವುದು ಸಮಾಜದ ಅವನತಿಯ ಮುನ್ಸೂಚನೆಯಾಗಿದೆ. ಪಾಲಕರು ತಮ್ಮ ಮಕ್ಕಳಿಗೆ ನಯ-ವಿನಯತೆಯನ್ನು ಅವಶ್ಯವಾಗಿ ಕಲಿಸಬೇಕು. ನಮ್ಮ ಮಕ್ಕಳ ವರ್ತನೆಯಿಂದ ಆ ಕುಟುಂಬದ ಸಂಸ್ಕಾರವನ್ನು ಕಂಡು ಹಿಡಿಯಬಹುದು. ಹೀಗಾಗಿ ಮಕ್ಕಳು ಸುಸಂಸ್ಕೃತರಾಗಿ ಬಾಳಬೇಕು ಎಂದು ಕೊಂಗವಾಡದ ಶಿವಾನಂದ ಶಾಸ್ತ್ರಿಗಳು ಉಣ್ಣಿಮಠ ಹೇಳಿದರು.

ನರಗುಂದ: ಈ ಆಧುನಿಕ ಯುಗದಲ್ಲಿ ಮೊಬೈಲ್‌ ಗೀಳಿನಿಂದ ಮಕ್ಕಳು ಮಾನವೀಯ ಮೌಲ್ಯಗಳನ್ನು ಮರೆತು ಗುರುಗಳನ್ನು ನಿಂದಿಸುತ್ತಿರುವುದು ಸಮಾಜದ ಅವನತಿಯ ಮುನ್ಸೂಚನೆಯಾಗಿದೆ. ಪಾಲಕರು ತಮ್ಮ ಮಕ್ಕಳಿಗೆ ನಯ-ವಿನಯತೆಯನ್ನು ಅವಶ್ಯವಾಗಿ ಕಲಿಸಬೇಕು. ನಮ್ಮ ಮಕ್ಕಳ ವರ್ತನೆಯಿಂದ ಆ ಕುಟುಂಬದ ಸಂಸ್ಕಾರವನ್ನು ಕಂಡು ಹಿಡಿಯಬಹುದು. ಹೀಗಾಗಿ ಮಕ್ಕಳು ಸುಸಂಸ್ಕೃತರಾಗಿ ಬಾಳಬೇಕು ಎಂದು ಕೊಂಗವಾಡದ ಶಿವಾನಂದ ಶಾಸ್ತ್ರಿಗಳು ಉಣ್ಣಿಮಠ ಹೇಳಿದರು.

ಅವರು ತಾಲೂಕಿನ ಭೈರನಹಟ್ಟಿ ಗ್ರಾಮದ ಶ್ರೀ ದೊರೆಸ್ವಾಮಿ ವಿರಕ್ತಮಠದಲ್ಲಿ ಶ್ರೀ ಗುರು ಬ್ರಹ್ಮಾನಂದ ಶಿವಾನುಭವ ಧರ್ಮ ಸಂಸ್ಥೆ, ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಹಾಗೂ ದೊರೆಸ್ವಾಮಿ ವಿವಿಧೋದ್ದೇಶ ಟ್ರಸ್ಟಿನ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 372ನೇ ಮಾಸಿಕ ಶಿವಾನುಭವ ಹಾಗೂ ಗುರುಪೌರ್ಣಿಮೆ ಕಾರ್ಯಕ್ರಮದಲ್ಲಿ ಮಾತನಾಡಿ, ಹರಮುನಿದರು ಗುರು ಕಾಯುವನು ಎಂಬ ವಾಣಿಯಂತೆ ನಾವು ಇಡುವ ಪ್ರತಿಯೊಂದು ಹಜ್ಜೆಯಲ್ಲಿಯೂ ಗುರುಗಳ ಕೃಪೆಯನ್ನು ಪಡೆಯಬೇಕು. ಇಂದು ಜಗತ್ತಿನಲ್ಲಿ ಅನ್ಯಾಯ, ಅತ್ಯಾಚಾರ, ಕೊಲೆ-ಸುಲಿಗೆಗಳು ಹೆಚ್ಚಾಗುತ್ತಿವೆ. ಇದಕ್ಕೆ ಬಹು ಮುಖ್ಯಕಾರಣ ಮಕ್ಕಳಲ್ಲಿ ನೈತಿಕ ಶಿಕ್ಷಣದ ಕೊರತೆ ಮಕ್ಕಳಿಗೆ ಮೊಬೈಲ ನೀಡುವುದನ್ನು ಕಡಿಮೆ ಮಾಡಿ ಪುಸ್ತಕಗಳನ್ನು ನೀಡಿ ಓದುವ ಹವ್ಯಾಸವನ್ನು ಬೆಳೆಸಬೇಕೆಂದು ಪಾಲಕರಿಗೆ ಕರೆ ನೀಡಿದರು.ಯುವ ಕವಿ ಲಕ್ಷ್ಮಣಗೌಡ ಕರಿಗೌಡ್ರ ಮಾತನಾಡಿ, ಮನುಷ್ಯನ ಅಜ್ಞಾನವನ್ನು ದೂರಮಾಡಿ ಸುಜ್ಞಾನದ ಬೆಳಕನ್ನು ನೀಡುವ ಶ್ರೇಷ್ಠ ವ್ಯಕ್ತಿ ಗುರುಗಳು. ವ್ಯಕ್ತಿ ಸಮಾಜದಲ್ಲಿ ಬೆಳೆದು ನಿಲ್ಲಲು ಗುರುವಿನ ಮಾರ್ಗದರ್ಶನ ಅವಶ್ಯವಾಗಿ ಬೇಕೆ ಬೇಕು ಎಲ್ಲರೂ ಗುರುಗಳಿಗೆ ವಿಧೇಯರಾಗಿ ಬದುಕಿ ಜೀವನದಲ್ಲಿ ಯಶಸ್ಸನ್ನು ಕಾಣಬೇಕು. ಗುರುಗಳು ಮಕ್ಕಳ ಭವಿಷ್ಯದಲ್ಲಿ ಬಹುಮುಖ್ಯವಾದ ಪಾತ್ರವಹಿಸುವುದರ ಜೊತೆಗೆ ಶಿಷ್ಯನ ಏಳ್ಗೆಯನ್ನು ಬಯಸುತ್ತಾರೆ ಹೀಗಾಗಿ ವಿದ್ಯಾರ್ಥ ಜೀವನದಲ್ಲಿರುವ ಪ್ರತಿಯೊಬ್ಬರು ಗುರುಗಳನ್ನು ಅತ್ಯಂತ ಶ್ರದ್ಧೆ-ಭಕ್ತಿಯಿಂದ ಕಾಣಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ವೇದಿಕೆ ಮೇಲೆ ವಿಶ್ರಾಂತ ಪ್ರಾಧ್ಯಾಪಕ ಪ್ರಕಾಶ ಅಣ್ಣಿಗೇರಿ, ಕುಮಾರಗೌಡ ಗುರಪ್ಪಗೌಡ್ರ, ಪ್ರೊ. ಆರ್. ಬಿ. ಚಿನಿವಾಲರ, ಪಾರ್ವತೆವ್ವ ಹಾದಿಮನಿ, ಶ್ರೀ ಗುರು ಬ್ರಹ್ಮಾನಂದ ಭಜನಾ ಸಂಘ, ಶ್ರೀ ಶರಣಬಸವೇಶ್ವರ ಭಜನಾ ಸಂಘದ ಪದಾಧಿಕಾರಿಗಳು ಇದ್ದರು.

ಶಿಕ್ಷಕ ಮಹಾಂತೇಶ ಹಿರೇಮಠ ಸ್ವಾಗತಿಸಿದರು. ಪ್ರೊ. ಆರ್. ಕೆ. ಐನಾಪೂರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾನೂನಿನ ಜ್ಞಾನ ಪಡೆಯುವುದು ಅರಣ್ಯವಾಸಿಯ ಮೂಲಭೂತ ಕರ್ತವ್ಯ: ರಂಜಿತಾ
ನೋಂದಾಯಿಸಿದ ಎಲ್ಲ ರೈತರ ಮೆಕ್ಕೆಜೋಳ ಖರೀದಿ: ಸೋಮಣ್ಣ ಉಪನಾಳ