ಕನ್ನಡಪ್ರಭ ವಾರ್ತೆ ಬೀದರ್
ಇಲ್ಲಿನ ಋಷಿಕೇಶ ಶಿಕ್ಷಣ ಸಂಸ್ಥೆ ಸಂಚಾಲಿತ ಅರುಣೋದಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಗುರುವಾರ ತಂದೆ-ತಾಯಿ ಪೂಜೆ ದಿನಾಚರಣೆ ಕಾರ್ಯಕ್ರಮದಲ್ಲಿ ಮಕ್ಕಳು ಪಾಲಕರ ಪಾದಪೂಜೆ ಮಾಡಿದರು.
ಈ ವೇಳೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳು ಪಾಲಕರು, ಗುರು ಹಾಗೂ ಹಿರಿಯರನ್ನು ಸದಾ ಗೌರವಿಸಬೇಕು ಎಂದು ಸಲಹೆ ನೀಡಿದರು.ಶಾಲೆಯ ಆಡಳಿತಾಧಿಕಾರಿ ಸಂತೋಷಕುಮಾರ ಮಂಗಳೂರೆ ಮಾತನಾಡಿ, ಅರುಣೋದಯ ಶಾಲೆಯು ಶಿಕ್ಷಣದ ಜತೆಗೆ ಮಕ್ಕಳಲ್ಲಿ ಉತ್ತಮ ಸಂಸ್ಕಾರವನ್ನೂ ಬೆಳೆಸಲು ಶ್ರಮಿಸುತ್ತಿದೆ ಎಂದು ತಿಳಿಸಿದರು.
ವೇದಾಂತ ಯೋಗ ಸೇವಾ ಸಮಿತಿಯ ಅಧ್ಯಕ್ಷ ಸಂಜೀವಕುಮಾರ ಪಾಟೀಲ, ಕಾರ್ಯದರ್ಶಿ ಡಾ. ಸುರೇಂದ್ರ, ಸದಸ್ಯ ಶರಣು ಬಿರಾದಾರ, ಸುನೀಲ್ ಗೌಳಿ, ಮುಖ್ಯಶಿಕ್ಷಕರಾದ ಈಶ್ವರಿ ಬೇಲೂರೆ, ಶಿಕ್ಷಕರಾದ ನೀಲಮ್ಮ, ಸಾರಿಕಾ, ಮಾರುತೆಪ್ಪ, ಪಲ್ಲವಿ, ಸುಮೀತ್, ಜ್ಯೋತಿ, ಪೂಜಾರಾಣಿ, ಶೈಲಜಾ, ಸುಜಾತಾ, ಭಾಗ್ಯಶ್ರೀ, ಪೂಜಾ, ಚಂದ್ರಕಲಾ, ಅಲ್ಕಾವತಿ ಎಚ್,.ಸುನೀತಾ ಇದ್ದರು.