ಮಕ್ಕಳಿಗೆ ವ್ಯವಹಾರಿಕ ಜ್ಞಾನದ ಅರಿವು ಅಗತ್ಯ

KannadaprabhaNewsNetwork |  
Published : Dec 17, 2024, 12:45 AM IST
ಫೋಟೊ:೧೬ಕೆಪಿಸೊರಬ-೦೪ : ಸೊರಬ ಪಟ್ಟಣದ ಕಾನುಕೇರಿ ಮಠದ ಸಮಾಧಾನ ಸಭಾಂಗಣದಲ್ಲಿ ಸ್ಮಾರ್ಟ್ ಕಿಟ್ ಪ್ರೀ ಎಜ್ಯುಕೇಶನ್ ಸ್ಕೂಲ್ ವತಿಯಿಂದ ಮಾದರಿ ಗ್ರಾಮ ಮತ್ತು ಸಮುದಾಯ ಸಹಾಯಕರ ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ಸೊರಬ ಪಟ್ಟಣದ ಕಾನುಕೇರಿ ಮಠದ ಸಮಾಧಾನ ಸಭಾಂಗಣದಲ್ಲಿ ಸ್ಮಾರ್ಟ್ ಕಿಟ್ ಪ್ರೀ ಎಜ್ಯುಕೇಶನ್ ಸ್ಕೂಲ್ ವತಿಯಿಂದ ಮಾದರಿ ಗ್ರಾಮ ಮತ್ತು ಸಮುದಾಯ ಸಹಾಯಕರ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಸೊರಬ

ಮಕ್ಕಳಿಗೆ ಬಾಲ್ಯದಲ್ಲಿಯೇ ವ್ಯವಹಾರಿಕ ಜ್ಞಾನ ಮತ್ತು ಪರಿಸರದಲ್ಲಿ ಅವಶ್ಯಕ ವಸ್ತುಗಳ ಕುರಿತು ಮಾಹಿತಿ ಅಗತ್ಯ ಎಂದು ಸಮರ್ಪಣಾ ಎಜ್ಯುಕೇಶನಲ್ ಟ್ರಸ್ಟ್ ಕಾರ್ಯದರ್ಶಿ ಬಿ.ಎಂ.ಮಮತಾ ರಾಜೇಶ್ ಹೇಳಿದರು.

ಶನಿವಾರ ಪಟ್ಟಣದ ಕಾನುಕೇರಿ ಮಠದ ಸಮಾಧಾನ ಸಭಾಂಗಣದಲ್ಲಿ ಸ್ಮಾರ್ಟ್ ಕಿಟ್ ಪ್ರೀ ಎಜ್ಯುಕೇಶನ್ ಸ್ಕೂಲ್ ವತಿಯಿಂದ ಹಮ್ಮಿಕೊಂಡಿದ್ದ ಮಾದರಿ ಗ್ರಾಮ ಮತ್ತು ಸಮುದಾಯ ಸಹಾಯಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕೇವಲ ಪಠ್ಯ ಶಿಕ್ಷಣಕ್ಕೆ ಮಾತ್ರ ಪೂರಕವಾಗಿರದೇ ನಮ್ಮ ಸಂಸ್ಕೃತಿ, ಸಂಸ್ಕಾರ ಹಾಗೂ ಬಾಲ್ಯದಲ್ಲಿ ಮಕ್ಕಳಿಗೆ ವ್ಯವಹಾರಿಕ ಜ್ಞಾನವನ್ನು ನೀಡಬೇಕಾದ ಅಗತ್ಯವಿದೆ. ಇದರಿಂದ ಮಕ್ಕಳ ಮನೋ ವಿಕಸನಕ್ಕೆ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿ ನಡೆಯುವ ಮತ್ತು ಅಲ್ಲಿನ ಪರಿಸರವನ್ನು ಪರಿಚಯಿಸುವ ಉದ್ದೇಶದಿಂದ ಮಾದರಿ ಗ್ರಾಮ ಮತ್ತು ಸಮುದಾಯಕ್ಕೆ ಅಗತ್ಯವಿರುವ ಸಹಾಯಕರು ಎನ್ನುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಇತಿಹಾಸ ಸಂಶೋಧಕ ಶ್ರೀಪಾದ ಬಿಚ್ಚುಗತ್ತಿ ಮಾತನಾಡಿ, ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ಸಾಮಾಜಿಕ ಚಿಂತನೆ ಮತ್ತು ಜವಾಬ್ದಾರಿಯನ್ನು ತಿಳಿಸುತ್ತಿರುವುದು ಉತ್ತಮ ಕಾರ್ಯವಾಗಿದೆ. ಇಂತಹ ಕಾರ್ಯಕ್ರಮ ನಡೆಯಲು ಪೋಷಕರ ಶ್ರಮವೂ ಸಹ ಸಾಕಷ್ಟಿದೆ. ಮಕ್ಕಳಿಗೆ ಅಗತ್ಯ ವಸ್ತುಗಳ ಕುರಿತು ಪರಿಚಯಿಸುವುದರಿಂದ ಅವರ ಜ್ಞಾನದ ಮಟ್ಟವು ಕೂಡ ಉನ್ನತಿಯಾಗುತ್ತದೆ ಎಂದು ಹೇಳಿದರು. ಪೋಷಕರಾದ ದೀಪಿಕಾ ನವುಲೆ ಮಾತನಾಡಿ, ನಮ್ಮ ಶಾಲೆ, ನಮ್ಮ ಹೆಮ್ಮೆ ಎನ್ನುವ ಘೋಷದೊಂದಿಗೆ ಕಾರ್ಯಕ್ರಮ ನಡೆಸುತ್ತಿರುವುದು ಸ್ವಾಗತಾರ್ಹ. ಮಕ್ಕಳಿಗೆ ಸಮುದಾಯಕ್ಕೆ ಅಗತ್ಯವಿರುವ ಶಿಕ್ಷಕರು, ವೈದ್ಯರು, ಪೊಲೀಸರು, ವ್ಯಾಪಾರಿ, ರೈತರು, ಪೋಸ್ಟ್‌ಮನ್ ಹೀಗೆ ಎಲ್ಲಾ ರೀತಿಯಲ್ಲೂ ಪ್ರತಿಯೊಬ್ಬರ ಅವಶ್ಯಕವಿದೆ. ಇಂತಹ ಕಾರ್ಯಕ್ರಮವನ್ನು ಆಯೋಜಿಸಿರುವುದು ಶ್ಲಾಘನೀಯವಾಗಿದೆ ಎಂದು ಹೇಳಿದರು.

ಸಮರ್ಪಣಾ ಎಜ್ಯುಕೇಶನಲ್ ಟ್ರಸ್ಟ್ ಅಧ್ಯಕ್ಷ ಕೆ.ಪಿ.ರಾಜೇಶ್ ಅಧ್ಯಕ್ಷತೆ ವಹಿಸಿದ್ದರು.

ಈ ವೇಳೆ ಪತ್ರಕರ್ತರಾದ ದತ್ತಾ ಸೊರಬ, ಪುರುಷೋತ್ತಮ ಎನ್.ಗದ್ದೆಮನೆ ಚಂದ್ರಗುತ್ತಿ, ಪೋಷಕರಾದ ಪ್ರವೀಣಾ, ರವಿ, ದಿವ್ಯಾ,ಶಾಕಿಬ್, ಖಾಲಿದಾ ಸೇರಿದಂತೆ ಇತರರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ