ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಭಾರತೀಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಮಂಡ್ಯ, ಭಾರತೀ ಎಜುಕೇಷನ್ ಟ್ರಸ್ಟ್ ಆಶ್ರಯದಲ್ಲಿ ನಡೆದ ವಾರ್ಷಿಕ ಪ್ರಾಯೋಗಿಕ ಪರೀಕ್ಷಾ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಬಾಲ್ಯದಿಂದಲೇ ಉತ್ತಮ ಸಂಸ್ಕಾರ ನೈತಿಕ ಮೂಲ್ಯ, ಹಿರಿಯರಿಗೆ, ಶಿಕ್ಷಕರಿಗೆ ಗೌರವ ನೀಡುವ ಗುಣ ಕಲಿಸುವುದು ಮುಖ್ಯ. ಮಕ್ಕಳ ಪ್ರಗತಿ ಬಗ್ಗೆ ಪೋಷಕರು ಶಾಲೆಗೆ ಭೇಟಿ ನೀಡಿ ವಿಚಾರಿಸಿಕೊಳ್ಳಬೇಕು. ಪಾಲಕರಿಂದ ಇದು ಸರಿಯಾದ ರೀತಿಯಲ್ಲಿ ಆದಾಗ ಮಕ್ಕಳು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬಹುದು ಎಂದರು.ಸಂಸ್ಥೆ ಚೇರ್‍ಮನ್, ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಮಾತನಾಡಿ, ಉಪಾನ್ಯಾಸಕರು ರಾಜಕೀಯದಿಂದ ದೂರವಿದ್ದು, ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ನೀಡುವ ಕಡೆ ಗಮನ ಹರಿಸಬೇಕು. ಉಪನ್ಯಾಸಕರ ಗುರಿ ಶೈಕ್ಷಣಿಕ ಪ್ರಗತಿಗಷ್ಟೇ ಸಿಮೀತವಾಗಿರಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಹಾವಳಿ ಹೆಚ್ಚಾಗಿದೆ. ವಿದ್ಯಾರ್ಥಿಗಳು ವಾಟ್ಸಾಪ್ ಮೂಲಕ ನೋಟ್ಸ್ ಕಳಿಸಬೇಡಿ. ಇದರಿಂದ ವಿದ್ಯಾರ್ಥಿ ಫೇಸ್ಬುಕ್, ಇನ್ಸ್‌ಟಗ್ರಾಮ್ ಪ್ರವೇಶ ಮಾಡಿ ಅಡ್ಡ ದಾರಿ ಹಿಡಿಯಲು ನಾವೇ ಕಾರಣರಾಗುತ್ತೇವೆ ಎಂದು ಎಚ್ಚರಿಸಿದರು.
ಈ ವೇಳೆ ಪ್ರಾಂಶುಪಾಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಯು.ಎಸ್.ನಟರಾಜು, ಕಾರ್ಯದರ್ಶಿ ಪಿ.ಕಾಂತರಾಜು, ಜಿಲ್ಲಾ ಸಂಶೋಜಕರಾದ ಮಹದೇಸ್ವಾಮಿ, ಗುರುಲಿಂಗೇಗೌಡ, ಗಣೇಶ್‌ಕುಮಾರ್, ಜವರಾಯಿ, ಕೆಂಪಯ್ಯ, ಲಕ್ಕಪ್ಪ, ಹುಚ್ಚಯ್ಯ, ಸಿ.ಎಂ.ಸುಧಾ, ಎಂ.ಎನ್.ಮಹೇಶ್‌ಚಂದ್ರ ಅವರನ್ನು ಅಭಿನಂದಿಸಿ ಗೌರವಿಸಲಾಯಿತು.