ಅಬಾಕಸ್ ಸ್ಪರ್ಧೆಯಲ್ಲಿ ಮಕ್ಕಳಿಂದ ಉತ್ತಮ ಸಾಧನೆ

KannadaprabhaNewsNetwork |  
Published : Feb 20, 2026, 02:15 AM IST
ಪೊಟೋ: 18ಎಸ್ಎಂಜಿಕೆಪಿ09 | Kannada Prabha

ಸಾರಾಂಶ

ರಾಷ್ಟ್ರಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಶಿವಮೊಗ್ಗದ ನೇಹಾ ಅಬಾಕಸ್ - ವೇದಿಕ್ ಮ್ಯಾಥ್ಸ್ ಮತ್ತು ಹ್ಯಾಂಡ್ ರೈಟಿಂಗ್ ಸೆಂಟರ್‌ನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

ಶಿವಮೊಗ್ಗ: ರಾಷ್ಟ್ರಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಶಿವಮೊಗ್ಗದ ನೇಹಾ ಅಬಾಕಸ್ - ವೇದಿಕ್ ಮ್ಯಾಥ್ಸ್ ಮತ್ತು ಹ್ಯಾಂಡ್ ರೈಟಿಂಗ್ ಸೆಂಟರ್‌ನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಗೋವಾದಲ್ಲಿ ಜನವರಿ 31 ಮತ್ತು ಫೆಬ್ರವರಿ 1 ರಂದು ನಡೆದ ರಾಷ್ಟ್ರಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಶಿವಮೊಗ್ಗ ವಿನೋಬನಗರದ ನೇಹಾ ಅಬಾಕಸ್ - ವೇದಿಕ್ ಮ್ಯಾಥ್ಸ್ ಮತ್ತು ಹ್ಯಾಂಡ್ ರೈಟಿಂಗ್ ಸೆಂಟರ್‌ನ 9 ವಿದ್ಯಾರ್ಥಿಗಳು ಭಾಗವಹಿಸಿ ಅತ್ಯುತ್ತಮ ಬಹುಮಾನಗಳನ್ನು ಪಡೆದು ಶಿವಮೊಗ್ಗ ಜಿಲ್ಲೆಯ ಗೌರವಕ್ಕೆ ಪಾತ್ರರಾಗಿದ್ದಾರೆ.

ಅಬಾಕಸ್ ಸ್ಪರ್ಧೆಯಲ್ಲಿ ಚನಸ್ಯಾ . ಕೆ. ದಾನಳ್ಳಿ- ಸೂಪರ್ ಚಾಂಪಿಯನ್, ರೆಹಾನ್ಸಿ . ಎಂ . ಜಿ - ಸೂಪರ್ ಚಾಂಪಿಯನ್, ಎ.ಜೆ. ಖುಷಿ- ಸೂಪರ್ ಚಾಂಪಿಯನ್, ರಿಶಿಕಾ, ಎಸ್.ಕೆ - ಸೂಪರ್ ಚಾಂಪಿಯನ್, ಬಿ.ಎಸ್. ಪೂರ್ವಿ - ಚಾಂಪಿಯನ್, ಮೊನಾಲಿಕಾ . ಜಿ. ಆರ್.- ಚಾಂಪಿಯನ್, ರುತು. ಪಿ ಹೆಚ್ - ಚಾಂಪಿಯನ್, ನೇಹಾ ಒಡೆಯರ್. ಎಚ್ ಎಂ - ಚಾಂಪಿಯನ್, ವೇದಿಕ್ ಒಡೆಯರ್ . ಹೆಚ್ ಎಂ - ರನ್ನರ್ ಆಫ್- 2 ಅತ್ಯುತ್ತಮ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಎಲ್ಲಾ ವಿಧ್ಯಾರ್ಥಿಗಳು ಮತ್ತು ಪೋಷಕರನ್ನು ನೇಹಾ ಅಬಾಕಸ್ - ವೇದಿಕ್ ಮ್ಯಾಥ್ಸ್ ಮತ್ತು ಹ್ಯಾಂಡ್ ರೈಟಿಂಗ್ ಸೆಂಟರ್‌ನ ಮುಖ್ಯಸ್ಥರಾದ ಶ್ರೀಮತಿ ರೂಪ ಮಂಜುನಾಥ್ ಅಭಿನಂದಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅರಣ್ಯ ಭೂಮಿ ಹಕ್ಕು ಮಹಜರ್ ನಿಯಮ ಉಲ್ಲಂಘನೆ: ರವೀಂದ್ರ ನಾಯ್ಕ
ಪರಿಣಾಮ ಬೀರದ ಸಾರಿಗೆ ಸಂಸ್ಥೆ ನೌಕರರ ಹೋರಾಟ