ಮಕ್ಕಳ ದಿನಾಚರಣೆ ಅಂಗವಾಗಿ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಲಾಗಿದ್ದು ವಿಜೇತ ಮಕ್ಕಳಿಗೆ ಸಮಾಜ ಸೇವಕ ಇಬ್ರಾಹಿಂ ಬಹುಮಾನಗಳನ್ನು ವಿತರಿಸಿದರು.
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಸರ್ಕಾರಿ ಪದವಿಪೂರ್ವ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಲಾಗಿದ್ದು ವಿಜೇತ ಮಕ್ಕಳಿಗೆ ಸಮಾಜ ಸೇವಕ ಇಬ್ರಾಹಿಂ (ಬಾಪ್ಪು) ಬಹುಮಾನಗಳನ್ನು ವಿತರಿಸಿದರು. ಸೋಮವಾರ ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಅಯೋಜಿತ ಕ್ರೀಡಾಕೂಟಗಳಲ್ಲಿ ವಿಜೇತ ಮಕ್ಕಳಿಗೆ ಬಹುಮಾನವನ್ನು ಇಬ್ರಾಹಿಂ(ಬಾಪ್ಪು) ಪ್ರಯೋಜಿಸಿದರು. ಈ ಸಂದರ್ಭ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಲೆ ಉಪಪ್ರಾಂಶುಪಾಲ ಬಾಲಕೃಷ್ಣ ಮಾತನಾಡಿ, ಸರ್ಕಾರಿ ಶಾಲೆಗೆ ದಾನಿಗಳು ದೊರೆಯುವುದೇ ಅಪರೂಪ. ಇಂತಹ ಸಂದರ್ಭದಲ್ಲಿ ಸ್ಥಳೀಯರಾದ ಇಬ್ರಾಹಿಂ ಬಾಪು ಅವರು ಸರ್ಕಾರಿ ಶಾಲೆ ಮತ್ತು ಮಕ್ಕಳ ಮೇಲೆ ಅಭಿಮಾನವಿಟ್ಟು ಕ್ರೀಡಾಕೂಟದಲ್ಲಿ ಜಯಗಳಿಸಿದ ಮಕ್ಕಳಿಗೆ ಬಹುಮಾನಗಳನ್ನು ಪ್ರಯೋಜಿಸಿರುವುದು ಇಬ್ರಾಹಿಂ ಅವರ ದೊಡ್ಡತನಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಶಾಲೆಯ ಅಭಿವೃದ್ಧಿಯ ದಿಸೆಯಲ್ಲಿ ಹಳೆಯ ವಿದ್ಯಾರ್ಥಿಗಳು ಶಾಲೆಯ ಕಟ್ಟಡಗಳನ್ನು ದುರಸ್ತಿಗೊಳಿಸುವ ಮೂಲಕ ರೂಪುಗೊಳಿಸಿರುವುದು ಮತ್ತು ಕೆನರಾ ಬ್ಯಾಂಕ್ ವತಿಯಿಂದ ಶಾಲೆಗೆ ಅಭಿವೃದ್ಧಿಗೆ 2 ಲಕ್ಷ ರು. ದೇಣಿಗೆ ದೊರೆತಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಸುಂಟಿಕೊಪ್ಪ ಹಿರಿಯ ಪತ್ರಕರ್ತರಾದ ಬಿ.ಡಿ.ರಾಜುರೈ ಮಾತನಾಡಿ, ಸಮಾಜ ಸೇವೆಯಲ್ಲಿ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಇಬ್ರಾಹಿಂ ಅವರ ಕೊಡುಗೆ ಒಂದು ಶಾಲೆಗೆ ಮಾತ್ರ ಸೀಮಿತವಾಗಿ ದೇಣಿಗೆ ನೀಡದೆ ಸರಕಾರಿ ಶಾಲೆಗಳನ್ನು ಗುರುತಿಸಿ ದೇಣಿಗೆ ನೀಡುತ್ತಿರುವುದು ಅಭಿನಂದನಾರ್ಹ ಎಂದರು. ಇದೇ ಸಂದರ್ಭ ಶಾಲಾ ಶಿಕ್ಷಕ ಪ್ರಕಾಶ್ ಮಾತನಾಡಿ, ತಮ್ಮ ಸಂಪಾದನೆಯಲ್ಲಿ ಸಮಾಜಕ್ಕೆ ತನ್ನ ಕೊಡುಗೆ ಇರಬೇಕೆನ್ನುವ ಮನಸ್ಥಿತಿಯನ್ನು ಹೊಂದಿದ್ದಾರೆ. ಆದರೆ ಅದೆಷ್ಟೋ ಇದ್ದರೂ ದಾನ ನೀಡುವ ಮನಸ್ಥಿತಿ ಹೊಂದಿಲ್ಲದವರ ಮಧ್ಯದಲ್ಲಿಯೂ ಇಬ್ರಾಹಿಂ ಬಾಪ್ಪು ಆಶಾಕಿರಣವಾಗಿ ಹೊರಹೊಮ್ಮಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ಬಹುಮಾನ ಪ್ರಯೋಜಕರಾದ ಇಬ್ರಾಹಿಂ ಬಾಪ್ಪು ಅವರನ್ನು ಶಾಲಾ ಮುಖ್ಯೋಪಾಧ್ಯಾಯರು ಸೇರಿದಂತೆ ಸಹಶಿಕ್ಷಕರು ಸನ್ಮಾನಿಸಿ ಗೌರವಿಸಿದರು.ಈ ಸಂದರ್ಭ ಮುಸ್ತಾಫ, ಶಾಲ ಸಹಶಿಕ್ಷಕರಾದ ಚಿತ್ರ, ಲಿಯೋನ, ಜಯಶ್ರೀ, ಶಾಂತ ಹೆಗ್ಡೆ ಸೇರಿದಂತೆ ಮತ್ತಿತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.