ಮಕ್ಕಳ ಸಂತೆ ಉದ್ಘಾಟನೆ

KannadaprabhaNewsNetwork |  
Published : Feb 26, 2026, 03:00 AM IST
ಸಂತ | Kannada Prabha

ಸಾರಾಂಶ

ವಿದ್ಯಾರ್ಥಿಗಳಲ್ಲಿ ವ್ಯವಹಾರ ಜ್ಞಾನ ಬೆಳೆಸಲು ಮಕ್ಕಳ ಸಂತೆ ಸಹಕಾರಿ ಎಂದು ಎಸ್‌ಡಿಎಂಸಿ ಅಧ್ಯಕ್ಷ ಯತೀಶ್ ಸಿ .ಎಸ್. ಹೇಳಿದರು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ವಿದ್ಯಾರ್ಥಿಗಳಲ್ಲಿ ವ್ಯವಹಾರ ಜ್ಞಾನ ಬೆಳೆಸಲು ಮಕ್ಕಳ ಸಂತೆ ಸಹಕಾರಿ ಎಂದು ಎಸ್‌ಡಿಎಂಸಿ ಅಧ್ಯಕ್ಷ ಯತೀಶ್ ಸಿ .ಎಸ್. ಹೇಳಿದರು.ಪೆರಾಜೆ ಕುಂದಲ್ಪಾಡಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂತೆಯನ್ನು ಉದ್ಘಾಟಿಸಿ ಮಾತನಾಡಿದರು.

ಶಾಲಾ ಕಲಿಕಾ ಅವಧಿಯಲ್ಲಿ ಪಠ್ಯ ವಿಷಯಗಳ ಜೊತೆ ಸಹಪಠ್ಯ ವಿಷಯಗಳ ಅಭ್ಯಾಸ ಬೇಕು. ಕ್ರೀಡೆ, ಶಿಸ್ತು ವ್ಯವಹಾರ ಕೌಶಲ್ಯ ಭಾಷೆ ಬೆಳವಣಿಗೆ ಇತ್ಯಾದಿಗಳನ್ನು ವೃದ್ಧಿಸಿಕೊಳ್ಳಬೇಕು ಎಂದರು.ಮಕ್ಕಳ ಸಂತೆಯಲ್ಲಿ ವಿದ್ಯಾರ್ಥಿಗಳು ತಾವು ತಂದ ಸರಕುಗಳನ್ನು ಮಾರಾಟ ಮಾಡಿದರು. ಶಾಲೆಯಲ್ಲಿ ಸಂತೆಯ ವಾತಾವರಣ ನಿರ್ಮಾಣವಾಗಿತ್ತು. ಶಾಲಾ ಮುಖ್ಯ ಶಿಕ್ಷಕ ಕುಮಾರ್ ಎನ್.ಎಸ್, ಎಸ್‌ಡಿಎಂಸಿ ಸದಸ್ಯರು , ಪೋಷಕರು ಹಾಗೂ ಗ್ರಾಮಸ್ಥರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ರಾಮೀಣ ಪ್ರದೇಶದ ಅಭಿವೃದ್ಧಿ ಅವಶ್ಯ: ಕ್ಯಾ.ಬ್ರಿಜೇಶ್ ಚೌಟ
ಕುಂದಲ್ಪಾಡಿ ಶಾಲೆಗೆ ಎಸ್ ಡಿಎಂಸಿ ಎಕ್ಸ್ ಪೋಷರ್ ತಂಡ ಭೇಟಿ