ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಗ್ರಾಪಂ ಮಾಜಿ ಉಪಾಧ್ಯಕ್ಷ ಜಮೀರ್ ಅಹ್ಮದ್ ಅವರು ದಾನ ನೀಡಿದ ಪಠ್ಯಪುಸ್ತಕ, ಬ್ಯಾಗ್ ಹಾಗೂ ನೀರಿನ ಬಾಟಲ್ ಗಳನ್ನು ಮಕ್ಕಳ ಮನೆ ವಿಭಾಗದ ಅಧ್ಯಕ್ಷ ಎ.ಆರ್.ರಘು ವಿತರಿಸಿದರು.ಈ ವೇಳೆ ಮಾತನಾಡಿದ ಎ.ಆರ್.ರಘು, ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯಲು ಮೂಲ ಸೌಕರ್ಯಗಳು ಅಗತ್ಯ. ಸರ್ಕಾರಿ ಶಾಲೆಗಳಲ್ಲಿ ದಾನಿಗಳ ಸಹಾಯದಿಂದ ಎಲ್ಲಾ ರೀತಿಯ ಸೌಕರ್ಯಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ ಎಂದರು.
ಈ ಎಲ್ಲ ಸೌಕರ್ಯಗಳನ್ನು ಪಡೆದುಕೊಂಡು ವಿದ್ಯಾರ್ಥಿಗಳು ಉತ್ತಮವಾದ ದ್ವಿತೀಯ ಅಭ್ಯಾಸ ಪಡೆದುಕೊಂಡು ಉನ್ನತ ಹುದ್ದೆಗಳಿಗೆ ಹೋಗಿ ಗ್ರಾಮಕ್ಕೆ ಗೌರವ ತಂದುಕೊಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಶಾಲಾ ಮುಖ್ಯ ಶಿಕ್ಷಕ ಜಿ.ಎನ್.ರವಿ. ಮಾತನಾಡಿ, ದಾನಿಗಳು ವಿದ್ಯಾರ್ಥಿಗಳಿಗೆ ಈ ರೀತಿಯ ವಸ್ತುಗಳನ್ನು ವಿತರಿಸುವುದರಿಂದ ವಿದ್ಯಾರ್ಥಿಗಳಿಗೆ ಅನೇಕ ರೀತಿಯಲ್ಲಿ ಅನುಕೂಲಗಳಾಗುತ್ತದೆ. ಖಾಸಗಿ ಶಾಲೆಗಳು ಮೀರಿಸುವಂತಹ ವಾತಾವರಣವೂ ನಿರ್ಮಾಣವಾಗುತ್ತದೆ. ಈ ರೀತಿ ಗ್ರಾಮದ ಎಲ್ಲಾ ದಾನಿಗಳು ನೀಡಿದರೆ ಸರ್ಕಾರಿ ಶಾಲೆಗಳು ಕೂಡ ಉತ್ತಮ ಖಾಸಿಗೆ ಶಾಲೆಗಳು ಕಾಣುವ ಹಾಗೆ ಕಾಣುತ್ತವೆ ಎಂದರು.
ಈ ವೇಳೆ ದಾನಿಗಳಾದ ಜಮೀರ್ ಅಹ್ಮದ್, ವಿಠಲ್ ರಾವ್, ಸಿ.ಈ.ಓ ಜ್ಞಾನೇಶ್, ರೈತ ಶಿಕ್ಷಣ ಇನ್ಸ್ ಪೆಕ್ಟರ್ ಪ್ರಭಾಕರ್, ಸಮಿತಿ ಸದಸ್ಯ ಎ.ಸಿ.ಮಂಜೇಗೌಡ, ಎಸ್ ಡಿಎಂಸಿ ಅಧ್ಯಕ್ಷ ಸೈಯದ್ ಉಮ್ಮರ್ ಸೇರಿದಂತೆ ಶಿಕ್ಷಕರು ಹಾಜರಿದ್ದರು.ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಹರೀಶ್ ಅಧ್ಯಕ್ಷರಾಗಿ ಆಯ್ಕೆ
ಕೆ.ಆರ್.ಪೇಟೆ ತಾಲೂಕಿನ ಸಂತೆಬಾಚಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರ ಸ್ಥಾನಕ್ಕೆ ಎಸ್.ಕೆ.ಹರೀಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಸಂಘದ ಹಿಂದಿನ ಅಧ್ಯಕ್ಷ ಸಣ್ಣಪ್ಪಶೆಟ್ಟಿ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎಸ್.ಕೆ.ಹರೀಶ್ ಹೊರತುಪಡಿಸಿ ಉಳಿದ ಯಾವ ಸದಸ್ಯರಿಂದ ನಾಮಪತ್ರ ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ ಎಸ್.ಕೆ.ಹರೀಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಎಚ್.ಬಿ.ಭರತ್‌ಕುಮಾರ್ ಪ್ರಕಟಿಸಿದರು.ನೂತನ ಅಧ್ಯಕ್ಷ ಎಸ್.ಕೆ ಹರೀಶ್ ಮಾತನಾಡಿ, ತಮ್ಮನ್ನು ಬೆಂಬಲಿಸಿ ಅಧ್ಯಕ್ಷರಾಗಿ ಆಯ್ಕೆಯಾಗಲು ಸಹಕರಿಸಿದ ಸದಸ್ಯರಿಗೆ ಕೃತಜ್ಞತೆಗಳನ್ನು ಅರ್ಪಿಸಿದರು. ಸದಸ್ಯರ ಸಹಕಾರದಿಂದ ಪಕ್ಷಭೇದ ಮರೆತು ಸೊಸೈಟಿ ವ್ಯಾಪ್ತಿಗೆ ಬರುವ ಎಲ್ಲ ಗ್ರಾಮಗಳ ರೈತಾಪಿ ವರ್ಗದ ಏಳಿಗೆಗೆ ಶ್ರಮಿಸುವುದಾಗಿ ತಿಳಿಸಿದರು. ಆಡಳಿತ ಮಂಡಳಿ ಹಾಗೂ ನೌಕರರು ಹಾಗೂ ಹಿರಿಯರ ಸಹಕಾರದಿಂದ ಸಂಘದ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.ಈ ವೇಳೆ ಉಪಾಧ್ಯಕ್ಷರಾದ ಎಚ್.ಎಸ್.ಸುರೇಶ್, ಸದಸ್ಯರಾದ ಸಣ್ಣಪ್ಪ, ಎಚ್.ಎಸ್.ಉದಯಕುಮಾರ್, ಎಸ್.ಎಚ್.ಕೃಷ್ಣ, ಎಚ್.ಎನ್.ಮಹದೇವಪ್ಪ, ಎಸ್.ಬಿ.ಚಂದ್ರಶೇಖರ್, ಎಚ್.ಎನ್.ಕುಮಾರಸ್ವಾಮಿ, ಬಿ.ಮೋಹನ್, ಸೋಮಯ್ಯ, ಗ್ರಾಮ ಮುಖಂಡ ವೆಂಕಟೇಶಯ್ಯ ಸೇರಿದಂತೆ ಹಲವರಿದ್ದರು.